ಬೆಂಗಳೂರು: ಮಹಾಲಕ್ಷ್ಮಿ ಮರ್ಡರ್ ಕೇಸ್ ಸಂಬಂಧ ವೈದ್ಯರು ಇಂದು (ಮಂಗಳವಾರ) ಮರಣೋತ್ತರ ರಿಪೋರ್ಟ್ ಸಲ್ಲಿಕೆ ಮಾಡುತ್ತಿದ್ದಾರೆ. ಇತ್ತ ರಾಷ್ಟ್ರೀಯ ಮಹಿಳಾ ಆಯೋಗ ಸುಮೊಟೋ ಕೇಸ್ ( Suo Moto Case) ದಾಖಲಿಸಿಕೊಂಡಿದ್ದು. ಎಚ್ಚೆತ್ತ ರಾಜ್ಯ ಮಹಿಳಾ ಆಯೋಗದಿಂದ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದಾರೆ. ಪೋಸ್ಟ್ ಮಾರ್ಟಂ ವರದಿಯಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿವೆ.
ವೈಯಾಲಿಕಾವಲ್‌ನಲ್ಲಿ (Vyalikaval) ವಾಸವಿದ್ದ ಒಂಟಿ ಮಹಿಳೆಯ ಕೊಲೆಯನ್ನ ಭೀಕರವಾಗಿ ಮಾಡಿದ್ದಾನೆ. 52 ಪೀಸ್ ಮಾಡಿರೋ ದೇಹವನ್ನ ಬೌರಿಂಗ್ ಆಸ್ಪತ್ರೆ ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಈ ಪ್ರಕರಣ ಅವರಿಗೂ ಕೂಡ ಚಾಲೆಂಜ್ ಆಗಿದ್ದು, ಮರಣೋತ್ತರ ಪರೀಕ್ಷಾ ವರದಿಯನ್ನು ಬೌರಿಂಗ್ ಆಸ್ಪತ್ರೆಯ ವೈದ್ಯರು ಇಂದು (ಮಂಗಳವಾರ) ಪೊಲೀಸರಿಗೆ ಒಪ್ಪಿಸಲಿದ್ದಾರೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ಸಲ್ಲಿಕೆ ಮಾಡಲಿದ್ದು ಕೆಲವೊಂದು ಟೆಸ್ಟ್‌ಗಳ ರಿಪೋರ್ಟ್ ಅನ್ನು 10 ದಿನಗಳ ಬಳಿಕ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ರಾತ್ರೋ ರಾತ್ರಿ ಫೀಲ್ಡಿಗಿಳಿದು ರಸ್ತೆ ಗುಂಡಿ ಪರಿಶೀಲಿಸಿದ ಡಿಸಿಎಂ – 14,307 ರಸ್ತೆಗುಂಡಿಗಳಿಗೆ ಮುಕ್ತಿ
Advertisement
Advertisement
ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
* ಮಹಾಲಕ್ಷ್ಮಿ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚುಚ್ಚಿರುವ ಹಂತಕ
* ಚುಚ್ಚಿ ಸಾಯಿಸಿದ ಬಳಿಕ ತಲೆಯನ್ನ ಬೇರ್ಪಡಿಸಿದ್ದಾನೆ
* ತಲೆಯನ್ನು ಬೇರ್ಪಡಿಸಿ 52 ಪೀಸ್ ಮಾಡಿರುವ ಕ್ರೂರಿ
* ಮರಣೋತ್ತರ ಪರೀಕ್ಷೆಗೂ ಮುನ್ನ 52 ಪೀಸ್ ಜೋಡಿಸಿದ್ದ ವೈದ್ಯರು
* ಶ್ವಾಸಕೋಶವನ್ನ ಮಾತ್ರ ಬೇರ್ಪಡಿಸಿದ್ದ ಅನ್ನೋದು ಪತ್ತೆ
* ಕರುಳಿನ ಭಾಗ ಮತ್ತು ಹೊಟ್ಟೆ ಭಾಗ ಟೆಸ್ಟ್‌ಗೆ ಕಳಿಸಿರೋ ವೈದ್ಯರು
* ಪ್ರಜ್ಞೆ ತಪ್ಪಿಸಿ ಹತ್ಯೆನಾ? ವಿಷ ಕೊಟ್ಟು ಹತ್ಯೆನಾ? ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ
* ದೇಹದಲ್ಲಿ ವಿಷ ಇದೆಯಾ ಅನ್ನೋ ವರದಿಬರಲು 2-3 ತಿಂಗಳು ಬೇಕು. ಇದನ್ನೂ ಓದಿ: ಸಿಎಂ ಪಾಲಿಗೆ ಇಂದು ಬಿಗ್ ಡೇ – ಮುಡಾ ಕೇಸಲ್ಲಿ ತನಿಖೆಯೋ? ಸೇಫೋ?; ಹೈಕೋರ್ಟ್ ತೀರ್ಪಿನತ್ತ ಎಲ್ಲರ ಚಿತ್ತ..!
Advertisement
Advertisement
ಇನ್ನು ರೇಡಿಯಾಲಜಿಕಲ್, ಸಿಟಿ ಸ್ಕ್ಯಾನ್, ಎಕ್ಸ್ ರೇ, ಟಾಕ್ಸಿಕಲ್ ಎಗ್ಸಾಮಿನೇಷನ್, ಪ್ಯಾಥಲಾಜಿಕಲ್ ಎಗ್ಸಾಮಿನೇಷನ್, ಡಿಎನ್‌ಎ ಟೆಸ್ಟ್‌ಗಳ ವರದಿ ಏನಾಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗ ಸುಮುಟೋ ಕೇಸ್ ದಾಖಲಿಸಿಕೊಂಡಿದೆ. ಮೂರು ದಿನದಲ್ಲಿ ವರದಿ ನೀಡುವಂತೆ ಪೊಲೀಸ್ ಇಲಾಖೆ ವರದಿ ಕೇಳಿದೆ. ಇನ್ನೂ ರಾಜ್ಯ ಮಹಿಳಾ ಆಯೋಗ ಕೂಡ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತೆಗೆದುಕೊಂಡಿರೋ ಕ್ರಮಗಳ ಬಗ್ಗೆ ವಿವರ ಕೇಳಿದ್ದಾರೆ. ಇದನ್ನೂ ಓದಿ: 3 ಲಕ್ಷ ರೂ. ಕರೆಂಟ್ ಬಿಲ್ ಬಾಕಿ – ಕತ್ತಲಲ್ಲಿ ಉಡುಪಿ ಪ್ರವಾಸಿ ಮಂದಿರ
ಮಹಾಲಕ್ಷ್ಮಿಯನ್ನು ಪೀಸ್ ಪೀಸ್‌ಆಕೊಂದವ ತಲೆಮರೆಸಿಕೊಂಡಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಂತಕ ಪಶ್ಚಿಮ ಬಂಗಾಳದ ಕಡೆ ಎಸ್ಕೇಪ್ ಆಗಿರುವ ಮಾಹಿತಿ ಲಭ್ಯವಾಗಿದೆ. ಹಂತಕನಿಗಾಗಿ ಶೇಷಾದ್ರಿಪುರಂ ಸಬ್ ಡಿವಿಷನ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ತಲಾಶ್ ನಡೆಸುತ್ತಿದ್ದಾರೆ. ಸದ್ಯ ಹಂತಕನ ಶೋಧಕ್ಕಾಗಿ ಪಶ್ವಿಮ ಬಂಗಾಳದಲ್ಲಿ ಒಂದು ಪೊಲೀಸ್ ತಂಡ ಬೀಡು ಬಿಟ್ಟಿದೆ. ಬೆಂಗಳೂರಿನಲ್ಲೂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಸಿಸಿಟಿವಿ ಪರಿಶೀಲನೆ, ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಪೊಲೀಸರು ವಿಚಾರಣೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಇಸ್ರೇಲ್ ರಾಕೆಟ್ ದಾಳಿಗೆ ಲೆಬನಾನ್ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!
ಮಗಳ ಕೊಲೆಯ ಹಿಂದೆ ಸಲೂನ್ ಬಾಯ್ ಅಶ್ರಫ್ ಇರೋ ಬಗ್ಗೆ ಮಹಾಲಕ್ಷ್ಮಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದರು. ಹೀಗಾಗಿ ಆತನನ್ನು ಸತತ 1 ಗಂಟೆ ಪೊಲೀಸರು ಡ್ರಿಲ್ ನಡೆಸಿ ಮಾಹಿತಿ ಕಲೆ ಹಾಕಿದರು. ಈ ವೇಳೆ ಮಹಾಲಕ್ಷ್ಮಿ ನನಗೆ ಪರಿಚಯ ಇದಿದ್ದು ನಿಜ. ಆದರೆ 6 ತಿಂಗಳಿಂದ ಆಕೆ ನನ್ನ ಸಂಪರ್ಕದಲ್ಲಿ ಇರಲಿಲ್ಲ ಅಂತ ಪೊಲೀಸರ ಮುಂದೆ ಅಶ್ರಫ್ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗ್ತಿದೆ. ಇದನ್ನೂ ಓದಿ: ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್ ಹ್ಯಾಕ್ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್ ತಪ್ಪಿಸಲು ಏನು ಮಾಡ್ಬೇಕು?
ಪೊಲೀಸರು ಸಾಕಷ್ಟು ತನಿಖೆ ಮಾಡುತ್ತಾ ಇದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಿಂದ ಏನಾದರೂ ಸಾಕ್ಷ್ಯ ಸಿಗುತ್ತಾ ಎಂಬುದು ಕೂಡ ಕುತೂಹಲಕಾರಿ ಆಗಿದೆ. ಭೀಕರ ಕೊಲೆ ಮಾಡಿರೋ ಹಂತಕನ ಹೆಡೆಮುರಿ ಕಟ್ಟಲು ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮಹಿಷ ದಸರಾ ಫೈಟ್ – ಈ ಬಾರಿ `ಮಹಿಷ ಮಂಡಲೋತ್ಸವ’!