ಬೆಂಗಳೂರು: ಪ್ರಯಾಗ್‌ರಾಜ್‌ನ (Prayagraj) ಮಹಾ ಕುಂಭಮೇಳದಲ್ಲಿ (Mahakumbhamela) ಬುಧವಾರ ಸಂಭವಿಸಿದ ಕಾಲ್ತುಳಿತ (Prayagraj Stampade) ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರ (Karnataka State Government) ಕನ್ನಡಿಗರ ನೆರವಿಗೆ ಸಹಾಯವಾಣಿಯನ್ನು ಆರಂಭಿಸಿದೆ.
ಮಹಾ ಕುಂಭಮೇಳಕ್ಕೆ ತೆರಳಿರುವ ನಿಮ್ಮ ಕುಟುಂಬಸ್ಥರು ಸಂಪರ್ಕಕ್ಕೆ ಸಿಗುತ್ತಿಲ್ಲವಾದರೆ, 080-22340676 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದ್ದು, ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.ಇದನ್ನೂ ಓದಿ: ಸಂತರ ಹಿಂದೂ ರಾಷ್ಟ್ರ ಘೋಷಣೆಗೆ ಸಾಣೆಹಳ್ಳಿ ಶ್ರೀ ಆತಂಕ
ಮೌನಿ ಅಮಾವಾಸ್ಯೆ ಹಿನ್ನೆಲೆ ಬುಧವಾರ ಬೆಳಿಗ್ಗೆ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡಲು ಪ್ರಯಾಗ್‌ರಾಜ್‌ಗೆ ಬರುತ್ತಿದ್ದರು. ಈ ವೇಳೆ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ಉಂಟಾದ ಪರಿಣಾಮ 30ಕ್ಕೂ ಅಧಿಕ ಭಕ್ತರು ಸಾವನ್ನಪ್ಪಿದ್ದಾರೆ. ಈ ಪೈಕಿ ಕರ್ನಾಟಕದವರು ನಾಲ್ವರು ಸಾವನ್ನಪ್ಪಿದ್ದಾರೆ.
ಕುಂಭಮೇಳ ಕಾಲ್ತುಳಿತ ದುರಂತ ಸಂಬಂಧ ರಾಜ್ಯ ಸರ್ಕಾರ ಕನ್ನಡಿಗರ ನೆರವಿಗೆ ಧಾವಿಸಿದೆ.
ನಿಮ್ಮ ಕುಟುಂಬದವರು ಕುಂಭಮೇಳಕ್ಕೆ ತೆರಳಿದ್ದು, ಅವರು ನಿಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲವೇ?. ಹಾಗಾದ್ರೆ, ನಾವು ನಿಮಗಾಗಿಯೇ ಸಹಾಯವಾಣಿ ತೆರೆದಿದ್ದೇವೆ. ಸಹಾಯವಾಣಿ ಸಂಖ್ಯೆ 080-22340676 ಗೆ ಸಂಪರ್ಕ ಮಾಡಬಹುದು.
#kumbhmela2025prayagraj… pic.twitter.com/c18owTr6OV
— CM of Karnataka (@CMofKarnataka) January 29, 2025
ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಸೆಕ್ಟರ್ 2ರಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವಾರು ಜನರು ಕುಟುಂಬಸ್ಥರಿಂದ ಬೇರ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಕಾಲ್ತುಳಿತ – ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿದ ಸಿಎಂ ಯೋಗಿ