‌ಮಹಾಕಾಳಿ ಕಥೆ ಹೇಳಲು ಸಜ್ಜಾದ ‘ಹನುಮಾನ್‌’ ಡೈರೆಕ್ಟರ್- ಚಿತ್ರದ ಪೋಸ್ಟರ್‌ ರಿಲೀಸ್

Public TV
1 Min Read
nahakali

‘ಹನುಮಾನ್’ (Hanuman) ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಪ್ರಶಾಂತ್ ವರ್ಮಾ (Prashanth Varma) ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಹನುಮಾನ್ 2’ ಜೊತೆಗೆ ಬಾಲಯ್ಯನ ಸುಪುತ್ರ ಮೋಕ್ಷಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಪ್ರಶಾಂತ್ ಅವರು ‘ಮಹಾಕಾಳಿ’ ಕಥೆಯನ್ನು ಹೇಳೋದ್ದಕ್ಕೆ ಹೊರಟಿದ್ದಾರೆ.

Hanuman 1ಸಿನಿಮ್ಯಾಟಿಕ್ ಯೂನಿವರ್ಸ್ ನಡಿ ಪ್ರಶಾಂತ್ ವರ್ಮಾ ಮೂರನೇ ಚಿತ್ರ ಘೋಷಣೆ ಮಾಡಿದ್ದಾರೆ. ‘ಮಹಾಕಾಳಿ’ ಸಿನಿಮಾಗೆ ಪ್ರಶಾಂತ್ ಕಥೆ ಬರೆದಿದ್ದು, ಆದ್ರೆ ಮಹಿಳಾ ನಿರ್ದೇಶಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿರುವುದು ವಿಶೇಷ. ಈ ಹಿಂದೆ ‘ಮಾರ್ಟಿನ್ ಲೂಥರ್ ಕಿಂಗ್’ ಎಂಬ ಚಿತ್ರ ನಿರ್ದೇಶಿಸಿದ್ದ ಪೂಜಾ ಅಪರ್ಣಾ ಅವರು ‘ಮಹಾಕಾಳಿ’ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಪಶ್ಚಿಮ ಬಂಗಾಳದ ಜನಪ್ರಿಯ ದೇವಿಯಾಗಿರುವ ಕಾಳಿ ಮಾತೆಯ ಹಿನ್ನೆಲೆ, ಅಲ್ಲಿನ ನೆಲದ ಸಂಸ್ಕೃತಿಯನ್ನು ಸಿನಿಮಾ ರೂಪದಲ್ಲಿ ಕಟ್ಟಿಕೊಡಲಾಗುತ್ತದೆ. ಇದೀಗ ‘ಮಹಾಕಾಳಿ’ (Mahakali) ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಹುಡುಗಿಯೊಬ್ಬಳು ಹುಲಿಯ ಹಣೆ ಮೇಲೆ ತಲೆ ಇಟ್ಟು ನಿಂತಿರುವ ಲುಕ್ ನ್ನು ಅನಾವರಣ ಮಾಡಲಾಗಿದೆ. ಇದನ್ನೂ ಓದಿ:ಮಗುವಿನ ಮುಖ ರಿವೀಲ್ ಮಾಡಿದ ‘ಲಕ್ಷ್ಮಿ ಬಾರಮ್ಮ’ ನಟಿ ಕವಿತಾ

‘ಮಹಾಕಾಳಿ’ ಸಿನಿಮಾವನ್ನು ರಿಜ್ವಾನ್ ರಮೇಶ್ ದುಗ್ಗಲ್ ನಿರ್ಮಾಣ ಮಾಡುತ್ತಿದ್ದಾರೆ. ಆರ್ ಕೆ ದುಗ್ಗಲ್ ಚಿತ್ರ ಪ್ರೆಸೆಂಟ್ ಮಾಡುತ್ತಿದೆ. ಸ್ಮರಣ್ ಸಾಯಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ‘ಮಹಾಕಾಳಿ’ ಸಿನಿಮಾವು ಬಹುಭಾಷೆಗಳಲ್ಲಿ ಮೂಡಿ ಬರಲಿದೆ. ಶೀಘ್ರದಲ್ಲೇ ಚಿತ್ರದ ತಾರಾಬಳಗ ಹಾಗೂ ಉಳಿದ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದೆ.

Share This Article