Connect with us

Karnataka

ಕೊನೆಗೂ ಲೋಕಸಭೆಯಲ್ಲಿ ಸ್ವಲ್ಪ ಚರ್ಚೆ ಆಯ್ತು ಮಹದಾಯಿ! ವಿಡಿಯೋ ನೋಡಿ

Published

on

ನವದೆಹಲಿ: ಅಂತು ಇಂತು ಕೊನೆಗೂ ನಮ್ಮ ಸಂಸದರು ಲೋಕಸಭೆಯಲ್ಲಿ ಮಹದಾಯಿ ವಿಚಾರವನ್ನು ಸ್ವಲ್ಪ ಚರ್ಚೆ ಮಾಡಿದ್ದಾರೆ. ಮಹದಾಯಿ ವಿವಾದ ಬಗೆಹರಿಸುವಲ್ಲಿ ಇನ್ನಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ವಿವಾದ ಇತ್ಯರ್ಥಗೊಳಿಸಬೇಕು ಎಂದು ತುಮಕೂರು ಸಂಸದ ಮುದ್ದಹನುಮೇಗೌಡ ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ಸಿನ ಮುದ್ದಹನುಮೇಗೌಡರು, ದಕ್ಷಿಣ ಕರ್ನಾಟಕ ಭಾಗದಲ್ಲಿ ಮೇಕೆದಾಟು ಯೋಜನೆಯ ಜಾರಿ ಅಗತ್ಯವಿದ್ದು, ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ಯೋಜನೆ ಅಗತ್ಯವಿದೆ. ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯವನ್ನು ಬಿಟ್ಟು ಪ್ರಧಾನಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೈಜೋಡಿಸಬೇಕೆಂದು ವಿನಂತಿಸಿಕೊಂಡರು. ಇದನ್ನೂ ಓದಿ: ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ

ಸಂಸದರ ಮುದ್ದಹನುಮೇಗೌಡರ ಮನವಿಗೆ ಸಮಜಾಯಿಷಿ ನೀಡಲು ಯತ್ನಿಸಿದ ಕೇಂದ್ರ ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್, ಮಹದಾಯಿಗೆ ಸಂಬಂಧಿಸಿದಂತೆ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಅದರಂತೆ ಕರ್ನಾಟಕಕ್ಕೆ 7.35 ಟಿಎಂಸಿ ನೀರು ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಇದೇ ಪತ್ರವನ್ನಿಟ್ಟುಕೊಂಡು ಕರ್ನಾಟಕ ಮುಖ್ಯಮಂತ್ರಿ ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸಬೇಕು ಎಂದು ಉತ್ತರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಪ್ರವೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ನುಣುಚಿಕೊಂಡರು. ಈ ವಿಷಯ ಆಡಳಿತ ಮತ್ತು ಪ್ರತಿಪಕ್ಷ ಸಂಸದರ ನಡುವೆ ಕೆಲ ನಿಮಿಷ ವಾಗ್ವಾದಕ್ಕೆ ಕಾರಣವಾಯ್ತು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

ಕಳೆದ ಶುಕ್ರವಾರ ಗೋವಾದ 2 ಸಂಸದರ ಮುಂದೆ ರಾಜ್ಯದ 28 ಸಂಸದರು ಸೈಲೆಂಟ್ ಎನ್ನುವ ಶೀರ್ಷಿಕೆ ಹಾಕಿ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಸಂಸತ್ ಅಧಿವೇಶನ ನಡೆಯುತ್ತಿದ್ದರೂ ರಾಜ್ಯದ ಸಂಸದರು ಇನ್ನೂ ಈ ವಿಚಾರದ ಬಗ್ಗೆ ಪ್ರಸ್ತಾಪವೇ ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿ ವರದಿ ಮಾಡಲಾಗಿತ್ತು. ಈ ವರದಿ ಪ್ರಕಟವಾದ 5 ದಿನಗಳ ನಂತರ ಸಂಸತ್‍ನಲ್ಲಿ ಮಹದಾಯಿ ವಿವಾದ ಚರ್ಚೆಗೆ ಬಂದಿದೆ.

https://youtu.be/fQspBtYDBWE

 

Click to comment

Leave a Reply

Your email address will not be published. Required fields are marked *