ಬೆಂಗಳೂರು: ಮಹದಾಯಿ ಸಮಸ್ಯೆ ಬಗೆ ಹರಿಸಲು ರಾಜಕೀಯ ಪಕ್ಷಗಳಿಗೆ ಹೋರಾಟಗಾರರು ಜನವರಿ ತಿಂಗಳ ಕೊನೆಯವರೆಗೆ ಡೆಡ್ ಲೈನ್ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೋರಾಟಗಾರ ವಿರೇಶ್ ಸೊಬರದಮಠ, ಅಖಂಡ ಕರ್ನಾಟಕದ ಹೋರಾಟವಾಗಬೇಕು. ಉತ್ತರ ಕರ್ನಾಟಕ ಬೇರೆ ಮಾಡಬೇಡಿ, ಅಭಿವೃದ್ಧಿ ಕೆಲ್ಸವಷ್ಟೇ ಮಾಡಿ. ಇಲ್ಲದೇ ಇದ್ದರೆ ನಮಗೆ ಬೇಸರವಾಗಲಿದೆ ಎಂದು ಹೇಳಿದರು.
Advertisement
ಬಿಜೆಪಿ ಕಚೇರಿ ಮುಂಭಾಗದ ಹೋರಾಟ ಕೈಬಿಟ್ಟಿದ್ದೇವೆ. ಇನ್ನು ನಾಲ್ಕು ದಿನ ಬಿಟ್ಟು ಮರಳಿ ಬಂದು ಮುಂದಿನ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇವೆ. ಕಲಾವಿದರ ಜೊತೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳಲು ನಾಲ್ಕುದಿನ ಬಿಟ್ಟು ಬರಲಿದ್ದೇವೆ ಎಂದರು. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ
Advertisement
ನೀರು ಬರುವವರೆಗೆ ನಮ್ಮ ಹೋರಾಟ ನಡೆಯಲಿದ್ದು, ಇದು ಯಶಸ್ವಿಯಾಗಲಿದೆ ಅನ್ನೋ ಭರವಸೆ ಇದೆ. ನರಗುಂದಕ್ಕೆ ಸಿನಿ ನಟರಿಗೆ ಬರುವುದಕ್ಕೆ ಆಹ್ವಾನ ನೀಡಿದ್ದೇವೆ. ಒಂದು ವೇಳೆ ಡೆಡ್ ಲೈನ್ ಒಳಗೆ ಇತ್ಯರ್ಥವಾಗದೇ ಇದ್ದಲ್ಲಿ ಮತ್ತೆ ಹೋರಾಟ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗೋವಾ ಪರವೇ ಕೇಸ್ ಗಟ್ಟಿಯಾಗಿದೆ: ಗೋವಾ ವಕೀಲ ಆತ್ಮಾರಾಮ ನಾಡಕರ್ಣಿ
Advertisement
Advertisement