ನವದೆಹಲಿ: ಇಂದು ಹಿಂದೂಗಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾಶಿವರಾತ್ರಿ ಹಬ್ಬದ ಸಂಭ್ರಮ. ಶುಭ ಶುಕ್ರವಾರವಾದ ಇವತ್ತು ಶಿವನ ಹಬ್ಬ ಬಂದಿದೆ. ನಾಡಿನ ಎಲ್ಲಾ ಶಿವನ ದೇಗುಲಗಳಲ್ಲಿ ವಿಶೇಷ ಪೂಜೆಗಳು ಬೆಳಗ್ಗಿನಿಂದಲೇ ಆರಂಭವಾಗಿದೆ.
Advertisement
ಭಕ್ತರು ಬೆಳ್ಳಂಬೆಳಗ್ಗೆಯೇ ಆದಿದೇವನ ದರುಶನಕ್ಕೆ ಸಾಲುಗಟ್ಟಿದ್ದಾರೆ. ಈ ನಡುವೆ, ತಮಿಳುನಾಡಿನ ಕೋಯಮತ್ತೂರಿನ ವೆಲ್ಲಯಂಗಿರಿ ಪರ್ವತದ ಸಮೀಪದಲ್ಲಿ 112 ಅಡಿ ಎತ್ತರದ ಬೃಹತ್ ಶಿವನ ಮೂರ್ತಿಯನ್ನು ನಿರ್ಮಿಸಲಾಗಿದ್ದು, ಇದನ್ನು ಇಂದು ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇನ್ನು ತಮಿಳುನಾಡು-ಕೇರಳ ಗಡಿಯಲ್ಲಿ ಈ ಕಾರ್ಯಕ್ರಮವಿರುವುದರಿಂದ ಐದು ಹಂತಗಳಲ್ಲಿ ಬಿಗಿ ಭದ್ರೆತೆಯನ್ನು ಕೈಗೊಳ್ಳಲಾಗಿದೆ.
Advertisement
Advertisement
ಪ್ರಸಿದ್ಧ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ನೇತೃತ್ವದ ಇಷಾ ಫೌಂಡೇಷನ್ ಈ ವಿಗ್ರಹವನ್ನು ನಿರ್ಮಿಸಿದೆ. ಈ ಶಿವನ ವಿಗ್ರಹ ತೂಕ ಬರೋಬ್ಬರಿ 500 ಟನ್ ಇದ್ದು, ಭೂಮಿಯ ಮೇಲಿನ ವಿಗ್ರಹಗಳಲ್ಲಿ ಅತಿ ದೊಡ್ಡ ಮುಖವಿರುವ ವಿಗ್ರಹ ಇದಾಗಿದೆ. ಈ ಬೃಹತ್ ವಿಗ್ರಹವನ್ನು ಸಂಪೂರ್ಣವಾಗಿ ಸ್ಟೀಲ್‍ನಿಂದ ನಿರ್ಮಿಸಲಾಗಿದೆ. ಇಂತಹ ಮೂರ್ತಿಗಳನ್ನು ದೇಶದ ನಾಲ್ಕು ದಿಕ್ಕುಗಳಲ್ಲಿಯೂ ನಿರ್ಮಿಸಲು ಇಷಾ ಫೌಂಡೇಷನ್ ಉದ್ದೇಶಿಸಿದೆ.
Advertisement
On Mahashivratri, will be in Coimbatore to join the programme organised by @ishafoundation at the Isha Yoga Center. @SadhguruJV #Adiyogi pic.twitter.com/SZnaHbrlij
— Narendra Modi (@narendramodi) February 21, 2017