ಚೆನ್ನೈ: ಮಧುರೈನಲ್ಲಿ (Madurai) ವ್ಯಕ್ತಿಯೊಬ್ಬರು ತಮ್ಮ ಹೆತ್ತವರಿಗಾಗಿ ದೇವಾಲಯವನ್ನು (Temple) ನಿರ್ಮಾಣ ಮಾಡಿ, ಅದಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.
ತಮಿಳುನಾಡಿನ ನಿವೃತ್ತ ಎಸ್‍ಐ (Retired SI) ರಮೇಶ್ ಬಾಬು ತಮ್ಮ ಹೆತ್ತವರ (Parents) ನೆನಪಿಗಾಗಿ ತಮ್ಮ ಮನೆಯ ಸಮೀಪವೇ ದೇವಸ್ಥಾನವೊಂದನ್ನು ನಿರ್ಮಾಣ ಮಾಡಿದ್ದಾರೆ. ರಮೇಶ್ ಬಾಬು ಯುವಕರಾಗಿದ್ದ ಸಂದರ್ಭದಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಆದರೂ ತಮ್ಮ ಬಿಡುವಿನ ವೇಳೆಯಲ್ಲಿ ತಂದೆ-ತಾಯಿಗೆ ದೇವಾಲಯವನ್ನು ನಿರ್ಮಿಸಲು ಪ್ರಾರಂಭಿಸಿದ್ದರು. ಇದೀಗ ಈ ದೇವಾಲಯ ಪೂರ್ಣಗೊಂಡಿದ್ದು, ಪ್ರತಿನಿತ್ಯ ಈ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಹನೂರಿನಲ್ಲಿ 20 ಅಡಿ ಆಳದ ಹಳ್ಳಕ್ಕೆ ಬಿದ್ದ ಬೆಂಗಳೂರಿನ ಕಾರು
Advertisement
TN | Man in Madurai builds a temple for his mother & father at his home
I wanted to build a temple for them but work kept me busy. So I built it after retirement & worship them everyday. My parents died after I built this temple, but they’re with me: Ramesh Babu, Retired SI pic.twitter.com/nkLhWeVEFO
— ANI (@ANI) September 20, 2022
Advertisement
ಈ ಬಗ್ಗೆ ಮಾತನಾಡಿದ ರಮೇಶ್ ಬಾಬು, ನಾನು ನನ್ನ ಹೆತ್ತ ತಂದೆ ತಾಯಿಗಾಗಿ ದೇವಸ್ಥಾನವನ್ನು ನಿರ್ಮಿಸಲು ಬಯಸಿದ್ದೆ. ಆದರೆ ನನ್ನ ಕೆಲಸದಿಂದಾಗಿ ಅದು ಮಂದಗತಿಯಲ್ಲಿ ಸಾಗುತ್ತಿತ್ತು. ಹಾಗಾಗಿ ನಿವೃತ್ತಿಯ ನಂತರ ಅದನ್ನು ನಿರ್ಮಿಸಿ ಪ್ರತಿದಿನ ಅವರಿಗೆ ಪೂಜೆ ಸಲ್ಲಿಸುತ್ತಿದ್ದೇನೆ. ನಾನು ಈ ದೇವಾಲಯವನ್ನು ನಿರ್ಮಿಸುವಾಗ ನನ್ನ ಪೋಷಕರು ಮೃತಪಟ್ಟರು. ಆದರೂ ಅವರು ನನ್ನೊಂದಿಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಟಾಕಿ ಬ್ಲಾಸ್ಟ್ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್ ಬ್ಲ್ಯಾಸ್ಟ್ ಕಥೆ