ಮಡಿಕೇರಿ: ರಾಜ್ಯದ ಎಲ್ಲೆಡೆ ಮದ್ರಾಸ್ ಐ (Madras Eye) ಸೋಂಕಿನ ಬಗ್ಗೆಯೇ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಬೇಸಿಗೆಗಾಲದಲ್ಲಿ ಜಾಸ್ತಿಯಾಗಿ ಹರಡುತ್ತಿದ್ದ ಮದ್ರಾಸ್ ಐ ಎಂಬ ಕಣ್ಣಿನ ಸೋಂಕು ಈಗ ಮಳೆಗಾಲದಲ್ಲೂ ಕಾಣಿಸಿಕೊಳ್ಳತೊಡಗಿದೆ. ಅಲ್ಲದೇ ಕೊಡಗಿನಲ್ಲಿ (Kodagu) ಈಗಾಗಲೇ ಸುಮಾರು 136 ಜನರಲ್ಲಿ ಮದ್ರಾಸ್ ಐ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.
ಬಿಳಿ ಮತ್ತು ಕೆಂಪು ಬಣ್ಣದ ಪದರ ರೀತಿಯ ವಸ್ತು ಕಣ್ಣಿನಲ್ಲಿ ಕಾಣಿಸಿಕೊಂಡು, ತುರಿಕೆ, ಕಣ್ಣಲ್ಲಿ ನೀರು ಬರುವುದು ಇತ್ಯಾದಿ ಈ ರೋಗದ ಲಕ್ಷಣಗಳಾಗಿವೆ. ಮಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿರುವ ಸೋಂಕು ಈಗ ಕೊಡಗಿನಲ್ಲೂ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಬಹುವೇಗವಾಗಿ ಹರಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ 136 ಪ್ರಕರಣಗಳು ಕಂಡು ಬಂದಿದೆ. ಜಿಲ್ಲೆಯಲ್ಲಿರುವ ಹಾಸ್ಟೆಲ್, ಶಾಲಾ, ಕಾಲೇಜು ಮಕ್ಕಳಲ್ಲೇ ಮದ್ರಾಸ್ ಐ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದನ್ನೂ ಓದಿ: ನನ್ನ ಹತ್ತಿರನೂ ಪೆನ್‌ಡ್ರೈವ್ ಇದೆ, ಬಿಡುಗಡೆಗಾಗಿ ಕಾಯ್ತಿದ್ದೇನೆ: ಲಕ್ಷ್ಮಣ ಸವದಿ
Advertisement
Advertisement
ಜುಲೈ ತಿಂಗಳಲ್ಲಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 136ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಹಾಸ್ಟೆಲ್ ಶಾಲೆಗಳಲ್ಲಿ ಒಬ್ಬರಿಗೆ ಕಾಣಿಸಿಕೊಂಡರೆ ಎಲ್ಲರಿಗೂ ಹರಡುವ ಸಾಧ್ಯತೆ ಇದೆ. ಹೀಗಾಗಿ ರೋಗದ ಬಗ್ಗೆ ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನೂ ಓದಿ: ರೈತರ ದ್ರೋಹಿ ಯಾರಾದ್ರೂ ಇದ್ರೆ ಅದು ಸಿದ್ದರಾಮಯ್ಯ – ಈಶ್ವರಪ್ಪ ಕಿಡಿ
Advertisement
ಈ ಸಾಂಕ್ರಮಿಕ ರೋಗ ಬ್ಯಾಕ್ಟೀರಿಯಾ ಮತ್ತು ವೈರಲ್‌ನಿಂದ ಹರಡುವ ಸಾಧ್ಯತೆ ಇದೆ. ಕಳೆದ 20 ದಿನಗಳಲ್ಲಿ ಕೊಡಗು ಜಿಲ್ಲೆಯ ಹಲವೆಡೆ ಮದ್ರಾಸ್ ಐ ಪ್ರಕರಣ ಕಂಡು ಬರುತ್ತಿದೆ. ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಈ ಸಾಂಕ್ರಮಿಕ ರೋಗ ಹರಡುವ ಬಗ್ಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನೆ ಮನೆಗೆ ಭೇಟಿ ನೀಡಿ ಕಣ್ಣು ನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಔಷಧಿ, ಉಪಚಾರ ಹಾಗೂ ಪ್ರಾಥಮಿಕ ವ್ಯವಸ್ಥೆಯನ್ನು ಸಮುದಾಯದ ಆರೋಗ್ಯ ಕೇಂದ್ರಗಳ ಮೂಲಕ ಮಾಡಲಾಗುತ್ತಿದೆ. ಇದನ್ನೂ ಓದಿ: ಸಿಂಗಾಪುರ ಉದ್ಯಮಿಗಳ ಜೊತೆಗೆ ಕೃಷ್ಣಭೈರೇಗೌಡ ಸಭೆ- 70 ಮಿಲಿಯನ್ ಡಾಲರ್ ಹೂಡಿಕೆ ಸಾಧ್ಯತೆ
Advertisement
ಜಿಲ್ಲೆಯ ವಿವಿಧ ಭಾಗಗಳಲ್ಲಿ ಇರುವ ಕಣ್ಣಿನ ತಜ್ಞರು ಈ ಪ್ರಕರಣವನ್ನು ಪರಿಶೀಲಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ತೂಕ ಕಡಿಮೆ ಮಾಡುವ ಉತ್ಸಾಹ ಬೇಡ, ಅತಿಯಾದ ಒತ್ತಡವೂ ಹೃದಯದ ಸಮಸ್ಯೆಗಳಿಗೆ ಕಾರಣ: ಡಾ. ಮಂಜುನಾಥ್
Web Stories