ಮಡಿಕೇರಿ: ಇಲಿ ಜ್ಚರಕ್ಕೆ (Rat Bite Fever) ಯುವಕನೋರ್ವ ಬಲಿಯಾದ ಘಟನೆ ಮಡಿಕೇರಿ (Madikeri) ತಾಲೂಕಿನ ಕರಿಕೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಮೀಪದ ಚೆಂಬೇರಿ ಆನೆಪಾರೆಯ ಯುವಕನೋರ್ವ ಲಿಬೀನ್ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ. ಆನೆಪಾರೆ ನಿವಾಸಿ ಕೂಲಿ ಕಾರ್ಮಿಕರಾದ ಬಾಲನ್ ಅವರ ಪುತ್ರ ಲಿಬೀನ್ ಜ್ವರ ಪೀಡಿತನಾಗಿ ಕೇರಳದ ಪೆರಿಯಾರಂ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಚಿಕಿತ್ಸೆಗೆ ದಾಖಲಾಗಿದ್ದು, ಜಾಂಡೀಸ್ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದರು.
ನಂತರ ಇದರೊಂದಿಗೆ ಇಲಿ ಜ್ವರ ಕೂಡ ಬಾಧಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಇದನ್ನೂ ಓದಿ: ಪತಿ, ಆತನ ಗರ್ಲ್‍ಫ್ರೆಂಡ್ ವಿರುದ್ಧ ಡೆತ್‍ನೋಟ್ ಬರೆದಿಟ್ಟು ಪತ್ನಿ ಆತ್ಮಹತ್ಯೆ
ಇಲಿ ಜ್ವರ ಹೇಗೆ ಹರಡುತ್ತೆ?
ತಜ್ಞ ವೈದ್ಯರು (Doctors) ಹೇಳುವಂತೆ ಇದೊಂದು ರೀತಿಯ ಬ್ಯಾಕ್ಟೀರಿಯಾ ಸೋಂಕು. ಇಲಿ ಕಚ್ಚಿ ಮಾತ್ರ ನಿಮಗೆ ಜ್ವರ ಬರಬೇಕು ಎಂದೇನಿಲ್ಲ. ಅದರ ಎಂಜಲು, ಅದರ ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು. ಇದನ್ನೂ ಓದಿ: ಸಿಕ್ಕಿಬೀಳೋ ಭಯದಲ್ಲಿ ಕದ್ದಿದ್ದ 30 ಲಕ್ಷದ ವಜ್ರದ ಉಂಗುರವನ್ನು ಟಾಯ್ಲೆಟ್‌ನಲ್ಲಿ ಫ್ಲಶ್ ಮಾಡಿದ್ಳು!
ಇದರ ಜೊತೆಗೆ ಇಲ್ಲಿಯ ಬಾಯಿಂದ, ಕಣ್ಣಿನಿಂದ ಅಥವಾ ಮೂಗಿನಿಂದ ಬರುವಂತಹ ದ್ರವಗಳು ಕೂಡ ನಿಮಗೆ ಹಾನಿಕಾರಕವಾಗಬಹುದು. ಕೆಲವರಿಗೆ ಇಲಿಗಳು ತಮ್ಮ ಉಗುರುನಿಂದ ಪರಚಿ ಹೋದರೆ ಅಥವಾ ಹಾಲಿನಿಂದ ಸಣ್ಣದಾಗಿ ಕಚ್ಚಿದರೆ ಕೂಡ ಜ್ವರ ಬರಬಹುದು. ಇಲಿ, ಹಸು, ನಾಯಿ, ಹಂದಿ ಮೂಲಕವೂ ಇಲಿ ಜ್ವರ ಹಬ್ಬುತ್ತದೆ. ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣವಾಗಿದೆ. ರೋಗಾಣು ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ತೀವ್ರತರದ ಜ್ವರ ಕಾಡುತ್ತದೆ. ಮೈ-ಕೈ ನೋವು, ತಲೆನೋವು , ಕೆಲವೊಮ್ಮೆ ವಾಂತಿ ಹೊಟ್ಟೆ ನೋವು ಬರುವುದು, ಇಲಿ ಜ್ವರದ ಲಕ್ಷಣವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
Web Stories