ಮಡಿಕೇರಿ: ಉಕ್ರೇನ್‍ನಲ್ಲಿ ಯುದ್ಧದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ಉಕ್ರೇನ್ ದೇಶವೇ ವಿನಾಶದ ಹಂತದಲ್ಲಿದೆ. ಒಂದು ಕಡೆ ಉಕ್ರೇನ್ ವಿನಾಶದ ಅಂಚು ತಲುಪಿದರೆ ಇತ್ತ ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ವಿದ್ಯಾರ್ಥಿಗಳು ಮರಳಿ ತಮ್ಮ ಊರಿಗೆ ಬಂದಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಡಿಕಲ್ ಓದುತ್ತಿದ್ದವರು ಇದೀಗ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸುವಂತಾಗಿದೆ.
ಕೊಡಗು ಜಿಲ್ಲೆಯ 14 ವಿದ್ಯಾರ್ಥಿಗಳು ಇದೀಗ ತಮ್ಮ ತವರಿಗೆ ಮರಳಿ ಬಂದಿದ್ದಾರೆ. ಇದೇ ತಿಂಗಳ 25 ರಿಂದ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನ ಪಾರಂಭಿಸುತ್ತೆ ಅಂತ ಉಕ್ರೇನ್ ಯುನಿವರ್ಸಿಟಿ ಹೇಳಿತ್ತು. ಆದರೆ ಇಂತಹ ಒಂದು ಯುದ್ಧದ ಪರಿಸ್ಥಿತಿಯಲ್ಲಿ ನಿಜಕ್ಕೂ ಯುನಿವರ್ಸಿಟಿಗಳು ಆನ್ ಲೈನ್ ತರಗತಿಗಳನ್ನ ಮಾಡಲು ಸಾಧ್ಯವೇ? ಅನ್ನುವ ಪ್ರಶ್ನೆ ವಿದ್ಯಾರ್ಥಿಗಳಿಗೆ ಕಾಡತೊಡಗಿದೆ.
Advertisement
Advertisement
ಆನ್‍ಲೈನ್ ತರಗತಿಗಳನ್ನ ಮಾಡಿದರು ಅದರಿಂದ ನಮಗೆ ಏನು ಪ್ರಯೋಜನ ಆಗುವುದಿಲ್ಲ. ಕಳೆದ ಎರಡು ವರ್ಷಗಳಿಂದ ಕೂಡ ಕೋವಿಡ್ ಕಾರಣದಿಂದಾಗಿ ಆನ್‍ಲೈನ್ ತರಗತಿಗಳನ್ನ ನಡೆಸಿದರು. ಇದೀಗ ಮತ್ತೆ ಆನ್ ಲೈನ್ ತರಗತಿಗಳನ್ನ ಮಾಡುವುದರಿಂದ ಇದು ನಮ್ಮ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರಲಿದೆ. ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ
Advertisement
ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳಿಗಿಂತ ಪ್ರಾಕ್ಟಿಕಲ್ ತರಗತಿ ಮುಖ್ಯವಾಗಿರುತ್ತದೆ. ಆದರೆ ಈ ಎಲ್ಲಾ ಕಾರಣಗಳಿಂದ ಇದಕ್ಕೆ ಬ್ರೇಕ್ ಬಿದ್ದಿರೋದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಉಕ್ರೇನ್ ಬಹುತೇಕ ನಾಶವಾಗಿರುವದರಿಂದ ಇನ್ನೂ ನಾವು ಅಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ನೂರಾರು ವಿದ್ಯಾರ್ಥಿಗಳಿದ್ದು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಇಲ್ಲಿಯೇ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವಕಾಶ ಮಾಡಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.
Advertisement
ಇತ್ತ ವಿದ್ಯಾರ್ಥಿಗಳ ಪೋಷಕರಿಗೂ ತಮ್ಮ ಮಕ್ಕಳು ಭವಿಷ್ಯದ ಚಿಂತೆ ಕಾಡುತ್ತಿದೆ. ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸಿದ್ದರು. ಆದರೆ ಇದೀಗ ಉಕ್ರೇನ್ ರಷ್ಯಾ ದೇಶದ ನಡುವೆ ನಡೆಯುತ್ತಿರುವ ಯುದ್ಧದ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಅನ್‍ಲೈನ್ ಶಿಕ್ಷಣ ನೀಡುವುದಾಗಿ ಯುನಿವರ್ಸಿಟಿ ಅವರು ತಿಳಿಸಿದ್ದಾರೆ ಎಂದರು. ಇದನ್ನೂ ಓದಿ: 2 ಕೋಟಿ ಸಾಲ ಮಾಡಿರುವ ಸಿದ್ದರಾಮಯ್ಯಗೆ ಭಾರತ ರತ್ನ ನೀಡಲಿ: ಸಾ.ರಾ ಮಹೇಶ್
ಆದರೆ ಅನ್ ಲೈನ್ ಶಿಕ್ಷಣ ದಿಂದ ತಮ್ಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಒಂದ ಅಷ್ಟು ಚಿಂತನೆ ನಡೆಸಿ ಸ್ಥಳೀಯವಾಗಿ ಆದರೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಮನವಿ ಮಾಡಿದ್ದಾರೆ.