ಮಡಿಕೇರಿ: ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ನಾನು ದೂರುವುದಿಲ್ಲ. 2018ರಲ್ಲಿ ಮಳೆ ಬಂದು ಮನೆಗಳು ಬಿದ್ದು ಹೋದಾಗ ಅವರು ಹತ್ತು ಲಕ್ಷ ರೂಪಾಯಿಯನ್ನು ಮನೆ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರು. ಅದರಂತೆ ಕಾಮಗಾರಿಯೂ ನಡೆಯುತ್ತಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕುಮಾರಸ್ವಾಮಿ ಪರ ಬ್ಯಾಟಿಂಗ್ ಬೀಸಿದರು.
ಕೊಡಗಿನ ಕುಶಾಲನಗರದಲ್ಲಿ ಮಾತನಾಡಿ ಅವರು, ನಿಮ್ಮ ಸರ್ಕಾರದಲ್ಲಿ ಕೊಡಗಿಗೆ ಯಾವುದೇ ಅನುದಾನ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ. ತಕ್ಷಣ ಕುಮಾರಸ್ವಾಮಿ ಅವರ ವಿರುದ್ಧವೇ ತಿರುಗಿ ಬಿದ್ದರು. ಕುಮಾರಸ್ವಾಮಿ ಅವರು ಕೊಡಗಿಗೆ ವಿಶೇಷವಾಗಿ ಏನೂ ಕೊಡಲಿಲ್ಲ. ಆದರೆ ಯಡಿಯೂರಪ್ಪನವರು ಕೊಡಗಿಗೆ 536 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಅದು ಬಹಳ ದೊಡ್ಡ ಘೋಷಣೆ ಎಂದರು.
ಕೊರೊನಾ ಎಫೆಕ್ಟ್ ನಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದು, ಇದು ರಾಜ್ಯದ ಬಜೆಟ್ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಕೊಡಗಿಗೆ ಪ್ರತ್ಯೇಕವಾಗಿ ಏನನ್ನೂ ಘೋಷಣೆ ಮಾಡಿಲ್ಲ ಎಂದು ಯಡಿಯೂರಪ್ಪ ಅವರು ಬಜೆಟ್‍ನಲ್ಲಿ ಕೊಡಗಿಗೆ ಏನನ್ನೂ ಘೋಷಿಸದಿರುವುದನ್ನು ಸಮರ್ಥಿಸಿಕೊಂಡರು. ಕೊರೊನಾ ವೈರಸ್ ನಿಂದ ಪ್ರಪಂಚದಲ್ಲೇ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ ಎಂದು ಹೇಳಿದರು.