ಮಡಿಕೇರಿ: ನವರಾತ್ರಿ ಉತ್ಸವ ಪ್ರಾರಂಭಕ್ಕೆ ಇನ್ನೂ ಕೇವಲ ಮೂರು ದಿನ ಬಾಕಿ ಉಳಿದೆ. ಈಗಾಗಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ (Mysuru Dasara) ಆಚರಣೆಗೆ ತಯಾರಿ ಕೆಲಸಗಳು ನಡೆಯುತ್ತಿದೆ. ಇತ್ತ ಜನೋತ್ಸವವಾಗಿ ಆಚರಿಸಲ್ಪಡುವ ಮಡಿಕೇರಿ ದಸರಾ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇನ್ನೂ ಕೂಡ ರಾಜ್ಯ ಸರ್ಕಾರದಿಂದ ಅನುದಾನ ಘೋಷಣೆಯಾಗಿಲ್ಲ.
ಮುಡಾ ಸೈಟ್ ವಿಚಾರದಲ್ಲಿ ಕಾನೂನು ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ದಸರಾ ಅನುದಾನ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಂಜಿನ ನಗರಿ ಮಡಿಕೇರಿ ದಸರಾ (Madikeri Dasara) ಅತಂತ್ರ ಸ್ಥಿತಿಯಲ್ಲಿ ಇದೆ. ಇದನ್ನೂಓದಿ: ಸಿಎಂ ಮಾಡಲು 1,000 ಕೋಟಿ ಹಣ ಕೂಡಿಡಲಾಗಿದೆ ಎಂಬ ಹೇಳಿಕೆ – ಯತ್ನಾಳ್ ವಿರುದ್ಧ ಕಾಂಗ್ರೆಸ್ ದೂರು
Advertisement
Advertisement
ವಿಶ್ವವಿಖ್ಯಾತ ಮೈಸೂರು ದಸರಾ ಬಗ್ಗೆ ಕಾಳಜಿ ತೋರುವ ರಾಜ್ಯ ಸರ್ಕಾರ, ಐತಿಹಾಸಿಕ ದಶಮಂಟಪಗಳ ಶೋಭಾಯಾತ್ರೆ ಮೂಲಕ ನಾಡಿನ ಗಮನ ಸೆಳೆದಿರುವ ಮಂಜಿನ ನಗರಿ ಮಡಿಕೇರಿ ದಸರಾ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯತನ ಪ್ರದರ್ಶಿಸುತ್ತಿದೆ ಎಂಬ ಅಸಮಾಧಾನ ಜಿಲ್ಲೆಯ ಜನರಲ್ಲಿ ವ್ಯಕ್ತವಾಗುತ್ತಿದೆ. ದಸರಕ್ಕೆ ಅನುದಾನ ಕೋರಿ ಮನವಿ ಸಲ್ಲಿಸಲು ಮಡಿಕೇರಿ ನಗರ ದಸರಾ ಸಮಿತಿ ಪ್ರಮುಖರು ಜನಪ್ರತಿನಿಧಿಗಳ ಮುಂದಾಳತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದು ವಾಡಿಕೆ. ಆದರೆ, ಇನ್ನೂ ಕೂಡ ದಸರಾ ಸಮಿತಿ ಪ್ರಮುಖರು ಸಿಎಂ ಭೇಟಿ ಮಾಡಲು ಬೆಂಗಳೂರಿಗೆ (Bengaluru) ತೆರಳಲಿಲ್ಲ. ಇದನ್ನೂಓದಿ: ಮುಡಾ ಸೈಟ್ ವಿವಾದ – 14 ನಿವೇಶನ ವಾಪಸ್‌ಗೆ ಮುಂದಾದ ಸಿಎಂ ಪತ್ನಿ; ಮುಡಾ ಆಯುಕ್ತರಿಗೆ ಪತ್ರ
Advertisement
Advertisement
ಕಳೆದ ಕೆಲ ದಿನಗಳ ಹಿಂದೆ ಅಷ್ಟೇ ಕೊಡಗು (Kodagu) ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅಧ್ಯಕ್ಷತೆಯಲ್ಲಿ ದಸರಾ ಹಾಗೂ ತಲಕಾವೇರಿ ಜಾತ್ರೆ ಬಗ್ಗೆ ಸಭೆ ಮಾತ್ರ ನಡೆಯಿತ್ತೆ ಹೊರತು ಇಂದಿಗೂ ದಸರಾಕ್ಕೆ ಅನುದಾನ ತರುವ ಬಗ್ಗೆ ಮಾತ್ರ ಯಾರು ಮುಂದೆ ಹೋಗುತ್ತಿಲ್ಲ. ಮಡಿಕೇರಿ ಶಾಸಕ ಮಂಥರ್ ಗೌಡ ಸರ್ಕಾರದಿಂದ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ದಸರಾ ಆಚರಣೆ ಯಾವುದೇ ಅಡೆತಡೆಯಾಗದೇ ದಸರಾ ಕೆಲಸಗಳು ಮಾಡಲಾಗುತ್ತದೆ ಎಂದು ಸಮಿತಿಯ ಸದಸ್ಯರಿಗೆ ತಿಳಿಸಿದ್ದಾರೆ. ಅಷ್ಟೇ ಹೊರತು ಅನುದಾನ ಬಿಡುಗಡೆ ಮಾಡಿಸುವ ಗೋಜಲಿಗೂ ಹೋಗಿಲ್ಲ. ಹೀಗಾಗಿ ದಶಮಂಟಪಗಳ ಸದಸ್ಯರು ನಗರ ದಸರಾ ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ದಸರಾ ಆಚರಣೆಯನ್ನು ನಿರ್ವಹಿಸದಿರುವುದು ಕೂಡ ತೊಡಕಾಗಿದೆ. ಇದನ್ನೂಓದಿ: ಐಐಟಿ ಪ್ರವೇಶಾತಿಗೆ ಶುಲ್ಕವಿಲ್ಲದೇ ಪರದಾಡಿದ್ದ ದಲಿತ ಯುವಕನಿಗೆ ‘ಸುಪ್ರೀಂ’ನಲ್ಲಿ ಸಿಕ್ತು ನ್ಯಾಯ
ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಥಾನ ಪಡೆದಿರುವ ಕರಗೋತ್ಸವ ಅ.3ರಂದು ಆರಂಭವಾಗಲಿದೆ. ಆದರೂ, ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆದಿಲ್ಲ. ಅ.4ರಂದು ಮಡಿಕೇರಿ ದಸರಾ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಅದು ನಡೆಯುವ ಗಾಂಧಿ ಮೈದಾನವು ಕೆಸರುಮಯವಾಗಿಯೇ ಇದೆ. ಕಾರ್ಯಕ್ರಮಗಳು ನಡೆಯಬೇಕಾದ ವೇದಿಕೆ ನಿರ್ಮಾಣ ಕುರಿತು ಇನ್ನೂ ಅಂತಿಮ ತೀರ್ಮಾನವೇ ಆಗಿಲ್ಲ. ಅಲ್ಲದೇ ಸರ್ಕಾರ ಅನುದಾನ ಘೋಷಣೆಯನ್ನೇ ಮಾಡಿಲ್ಲ. ಹೀಗಿರುವಾಗ, ವೇದಿಕೆಗೆ ಎಷ್ಟು, ಮಹಿಳಾ ದಸರಾ, ಜಾನಪದ ದಸರಾ, ಮಕ್ಕಳ ದಸರಾ, ಕವಿಗೋಷ್ಠಿ ಕಾಫಿ ದಸರಾ ಹೀಗೆ ವಿವಿಧ ದಸರಾ ಸಮಿತಿಗಳಿಗೆ ಎಷ್ಟು ಅನುದಾನ ಎಂಬುದು ಅಂತಿಮವಾಗಿಲ್ಲ. ಹೀಗಾಗಿ, ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸುವುದೂ ಅಂತಿಮವಾಗಿಲ್ಲ. ಒಂದು ಬಗೆಯಲ್ಲಿ ಈ ಬಾರಿಯ ಮಡಿಕೇರಿ ದಸರಾ ಗೊಂದಲದ ಗೂಡಾಗಿದೆ. ಇದನ್ನೂಓದಿ: ನಕಲಿ ನೋಟು ಕೇಸ್‌ನಲ್ಲಿ ಗುಜರಾತ್ ಪೊಲೀಸರಿಗೆ ಶಾಕ್ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್ ನಟನ ಫೋಟೋ
ಒಟ್ಟಿನಲ್ಲಿ ಮಂಜಿನ ನಗರಿ ಮಡಿಕೇರಿ ದಸರಾದ ಕರಗ ನಡೆಯುವ ದಿನಾಂಕ, ದಸರೆ ನಡೆಯುವ ದಿನಾಂಕ ವರ್ಷಕ್ಕೂ ಮುಂಚೆಯೇ ನಿರ್ಧಾರವಾದರೂ, ಇದರ ಸಿದ್ಧತೆ ಎರಡು ಮೂರು ದಿನಗಳು ಉಳಿದಿರುವಾಗಲೂ ಪೂರ್ಣವಾಗದೇ ಇರುವುದು ಸಾರ್ವಜನಿಕರ ಅತೃಪ್ತಿಗೂ ಕಾರಣವಾಗಿದೆ. ಇದನ್ನೂಓದಿ: ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ