– ಪಬ್ಲಿಕ್ ಟಿವಿ ಡಿಜಿಟಲ್ ವರದಿ ಫಲಶೃತಿ
ಮಡಿಕೇರಿ: ಕಳೆದ 4 ತಿಂಗಳಿನಿಂದ ನಡೆಯದ ಮಡಿಕೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಸರ್ಕಾರದ ಸಚಿವ ಸಂಪುಟ ಇದೀಗ ಗ್ರೀನ್ ಸಿಗ್ನಲ್ ನೀಡಿದೆ.
ಮೇ ತಿಂಗಳಿನಿಂದಲೇ ಮಡಿಕೇರಿ ನಗರಸಭೆಗೆ ಸದಸ್ಯರ ಆಯ್ಕೆ ಚುನಾವಣೆ ಮೂಲಕ ನಡೆದಿತ್ತಾದರೂ ಕೋವಿಡ್ ಹಿನ್ನಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಅಂಗೀಕಾರ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ನಿಮ್ಮ ಪಬ್ಲಿಕ್ ಟಿವಿ ಇಂದು ವರದಿ ಮಾಡಿತ್ತು. ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ನೋಡಿದ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಗಮನ ಸೆಳೆದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಅವಕಾಶ ನೀಡುವಂತೆ ಸೂಚಿಸಿದ್ದರು. ಇದನ್ನೂ ಓದಿ: ನಾನು ಒಬ್ಬ ಜನಪ್ರತಿನಿಧಿ – ಹೆಚ್‍ಡಿಕೆಗೆ ಡಿಕೆ ಸುರೇಶ್ ತಿರುಗೇಟು
ಅಂತಿಮವಾಗಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಡಿಕೇರಿ ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಅನುಮತಿ ನೀಡಲಾಗಿದೆ. 2-3 ದಿನಗಳಲ್ಲಿ ಈ ಸಂಬಂಧಿತ ಸೂಚನೆ ಜಿಲ್ಲಾಧಿಕಾರಿಗಳಿಗೆ ತಲುಪಲಿದೆ. ಇದನ್ನೂ ಓದಿ: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮುಂದಾದ ಸರ್ಕಾರ – ಮಸೂದೆಯಲ್ಲಿ ಏನಿದೆ?
ಜಿಲ್ಲಾಧಿಕಾರಿಗಳು ಏಳು ದಿನಗಳೊಳಗಾಗಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳುವಂತೆ ಅಧಿಸೂಚನೆ ಹೊರಡಿಸಲಿದ್ದಾರೆ. ಕಳೆದ 30 ತಿಂಗಳಿನಿಂದ ಮಡಿಕೇರಿ ನಗರಸಭೆಗೆ ಇರದಿದ್ದ ಅಧ್ಯಕ್ಷ, ಉಪಾಧ್ಯಕ್ಷರು ಅಕ್ಟೋಬರ್ ಮೊದಲ ವಾರದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಂತೆಯೇ ನಗರಸಭೆಯ 23 ಸದಸ್ಯರೂ ಅಂದಿನಿಂದ ತಮ್ಮ ಅಧಿಕಾರದ ಹಕ್ಕು ಪಡೆಯಲಿದ್ದಾರೆ.