ರಾಯಚೂರು: ಗುರು ರಾಘವೇಂದ್ರರಾಯರು ಸಶರೀರರಾಗಿ ವೃಂದಾವನ ಪ್ರವೇಶಿಸಿದ ದಿನವನ್ನು ಮಂತ್ರಾಲಯದಲ್ಲಿ ಮಧ್ಯಾರಾಧನೆ ದಿನವಾಗಿ ಆಚರಿಸಲಾಗುತ್ತಿದೆ.
ಇಂದು ಶ್ರಾವಣ ಬಹುಳ ದ್ವಿತೀಯ. ಈ ಪವಿತ್ರ ದಿನದಂದೇ ರಾಯರು ವೃಂದಾವನಸ್ಥರಾಗಿ 346 ವರ್ಷಗಳು ಸಂದಿವೆ. ಶ್ರಾವಣ ಬಹುಳ ದ್ವಿತೀಯ ಪವಿತ್ರ ದಿನದಂದು ಗುರು ರಾಯರು ಸಶರೀರರಾಗಿ ವೃಂದಾವನ ಪ್ರವೇಶಿಸಿದ್ದರು.
Advertisement
Advertisement
ಮಧ್ಯಾರಾಧನೆಯಾಗಿರುವ ಇವತ್ತು ವೃಂದಾವನಕ್ಕೆ ನೂರಾರು ಲೀಟರ್ ಹಾಲು, ತುಪ್ಪ, ಜೇನುತುಪ್ಪಗಳಿಂದ ವಿಶೇಷವಾದ ಮಹಾಪಂಚಾಮೃತ ಅಭೀಷೇಕ ಮಾಡಲಾಗುತ್ತದೆ. ತಿರುಮಲ ತಿರುಪತಿಯಿಂದ ರಾಯರಿಗೆ ಪವಿತ್ರ ವಸ್ತ್ರಗಳನ್ನ ಮೆರವಣಿಗೆ ಮೂಲಕ ತರಲಾಗುತ್ತದೆ. ಮಧ್ಯಾಹ್ನದ ವೇಳೆ ಹಸ್ತೋದಕ ಹಾಗೂ ಅಲಂಕಾರ ಬ್ರಾಹ್ಮಣರ ಸೇವೆ ನಡೆಯುತ್ತದೆ.
Advertisement
Advertisement
ಇಂದು ರಾತ್ರಿ ರಜತ, ಸ್ವರ್ಣ ಹಾಗೂ ನವರತ್ನ ರಥೋತ್ಸವ ಮಠದ ಪ್ರಾಂಗಣದಲ್ಲಿ ಒಟ್ಟಿಗೆ ಜರುಗಲಿವೆ. ಸಪ್ತರಾತ್ರೋತ್ಸವದ ಅಂಗವಾಗಿ ಮಠದ ಪ್ರಾಕಾರದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಎರಡು ವರ್ಷಗಳಂತೆ ಈ ಬಾರಿಯೂ ಕೂಡ ರಥೋತ್ಸವದ ವೇಳೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಠಿ ನೇರವೇರಿಸಲು ಸಿದ್ಧತೆ ನಡೆದಿದೆ.