ಭೋಪಾಲ್: ತನ್ನ ಬ್ಯಾಂಕ್ ಖಾತೆಯಿಂದ 46 ಕೋಟಿ ರೂ. ವಹಿವಾಟು ನಡೆದಿದೆ ಎಂದು ಕಾಲೇಜು ವಿದ್ಯಾರ್ಥಿಯೊಬ್ಬ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ ಜಿಲ್ಲೆಯಲ್ಲಿ ನಡೆದಿದೆ.
ಗ್ವಾಲಿಯರ್ ನಿವಾಸಿ ಪ್ರಮೋದ್ ಕುಮಾರ್ ದಂಡೋಟಿಯಾ (25) ದೂರು ನೀಡಿರುವ ವಿದ್ಯಾರ್ಥಿ. ಆದಾಯ ತೆರಿಗೆ ಮತ್ತು ಜಿಎಸ್‌ಟಿಯಿಂದ ಬಂದ ನೋಟಿಸ್ ನೋಡಿ ವಿದ್ಯಾರ್ಥಿ ಶಾಕ್ ಆಗಿದ್ದಾನೆ. ತನ್ನ ಪಾನ್ ಕಾರ್ಡ್ ಮೂಲಕ ಕಂಪನಿಗೆ ನೋಂದಾಯಿಸಲಾಗಿದೆ ಎಂಬುದು ವಿದ್ಯಾರ್ಥಿ ಅರಿವಿಗೆ ಬಂದಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್ ಕೇಸ್
Advertisement
Advertisement
ನಾನು ಗ್ವಾಲಿಯರ್‌ನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದೇನೆ. ಆದಾಯ ತೆರಿಗೆ ಮತ್ತು ಜಿಎಸ್‌ಟಿಯ ಸೂಚನೆಯ ನಂತರ, ಮುಂಬೈ ಮತ್ತು ದೆಹಲಿಯಲ್ಲಿ 2021 ರಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಪ್ಯಾನ್ ಕಾರ್ಡ್ ಮೂಲಕ ಕಂಪನಿಯೊಂದು ನೋಂದಾಯಿಸಿದೆ ಎಂದು ನನಗೆ ತಿಳಿಯಿತು. ಹೇಗೆ ಹೀಗಾಯಿತು ನನಗೆ ತಿಳಿದಿಲ್ಲ. ನನ್ನ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ವಹಿವಾಟು ಮಾಡಲಾಗಿದೆ ಎಂದು ದೂರಿನಲ್ಲಿ ವಿದ್ಯಾರ್ಥಿ ತಿಳಿಸಿದ್ದಾನೆ.
Advertisement
ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದ ಕೂಡಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ವಿದ್ಯಾರ್ಥಿ ಮಾತನಾಡಿದ್ದಾನೆ. ಬಳಿಕ ಹಲವು ಬಾರಿ ಪೊಲೀಸರಿಗೆ ದೂರು ನೀಡಲು ಯತ್ನಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶುಕ್ರವಾರ ಮತ್ತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಮತ್ತೆ ದೂರು ದಾಖಲಿಸಿದ್ದಾನೆ. ಇದನ್ನೂ ಓದಿ: ‘ಲೋಕ’ಸಮರಕ್ಕೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ – ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್ ಬಾಬು
Advertisement
ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪಾನ್ ಕಾರ್ಡ್ ದುರುಪಯೋಗವಾಗಿದೆ. ಅದರ ಮೂಲಕ ಕಂಪನಿಯನ್ನು ನೋಂದಾಯಿಸಲಾಗಿದೆ. ಇಷ್ಟು ದೊಡ್ಡ ಮೊತ್ತದ ವ್ಯವಹಾರಗಳನ್ನು ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಶಿಯಾಜ್ ಕೆಎಂ ತಿಳಿಸಿದ್ದಾರೆ. ಇಡೀ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.