ಬೆಂಗಳೂರು: ಭದ್ರತೆ ಕೋರಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪ್ರತ ಬರೆದಿದ್ದಾರೆ.
ಬೆಂಗಳೂರಿನ ಹೊರವಲದಲ್ಲಿರುವ ಪ್ರೆಸ್ಟಿಜ್ ಗಾಲ್ಫ್ ಶೈರ್ ರೆಸಾರ್ಟಿನಲ್ಲಿ ಮಧ್ಯಪ್ರದೇಶದ ಒಟ್ಟು 19 ಮಂದಿ ಶಾಸಕರು ವಾಸ್ತವ್ಯ ಹೂಡಿದ್ದೇವೆ. ನಮಗೆ ಸೂಕ್ತ ಭದ್ರತೆ ಒದಗಿಸಿ ಎಂದು 19 ಕಾಂಗ್ರೆಸ್ ಶಾಸಕರು ಕೇಳಿಕೊಂಡು, ಸಹಿ ಮಾಡಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬದಂದೇ ‘ಕೈ’ಗೆ ರಾಜೀನಾಮೆ – ಮೋದಿ ಸಂಪುಟದಲ್ಲಿ ಸಿಂಧಿಯಾ ಮಂತ್ರಿ?
Advertisement
Advertisement
ಪ್ರಮುಖವಾದ ಕೆಲಸದ ಮೇಲೆ ಕರ್ನಾಟಕ್ಕೆ ಬಂದು ಬೆಂಗಳೂರಿನ ಹೋರವಲದ ರೆಸಾರ್ಟಿನಲ್ಲಿ ತಂಗಿದ್ದೇವೆ. ಸೂಕ್ತ ಭದ್ರತೆಗೆ ವ್ಯವಸ್ಥೆ ಮಾಡುವಂತೆ ಶಾಸಕರು ಪತ್ರ ಬರೆದಿದ್ದರು. ಮಧ್ಯಪ್ರದೇಶದ ಶಾಸಕರ ಪತ್ರ ಪೊಲೀಸ್ ಮಹಾನಿರ್ದೇಶಕರ ಕಚೇರಿ ತಲುಪುತ್ತಿದ್ದಂತೆ ನಂದಿ ಹಿಲ್ಸ್ ತಪ್ಪನಲ್ಲಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ಸುತ್ತಮುತ್ತು ದೊಡ್ಡ ಮಟ್ಟದಲ್ಲಿ ಭದ್ರತೆ ನೀಡಲಾಗಿದೆ.
Advertisement
ಡಿವೈಎಸ್‍ಪಿ ರಂಗಪ್ಪ ಪಂಪಾಪತಿ ಅವರ ನೇತೃತ್ವದಲ್ಲಿ ರೆಸಾರ್ಟಿನ ಸುತ್ತಮುತ್ತ ಭದ್ರತೆ ಮಾಡಿಕೊಳ್ಳಲಾಗಿದೆ. ಶಾಸಕರ ಭದ್ರತೆಗೆ ನಾಲ್ಕು ಕೆಎಸ್‌ಆರ್‌ಪಿ ಹಾಗೂ 50ಕ್ಕೂ ಹೆಚ್ಚು ಸ್ಥಳೀಯ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಮುಂಭಾಗದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿದ್ದಾರೆ.