ಭೋಪಾಲ್: ಪತ್ನಿಯ ದುಂದುವೆಚ್ಚಕ್ಕೆ ಬೇಸತ್ತ ಪತಿಯು ತನ್ನ ಗೆಳೆಯರಿಗೆ ಸುಪಾರಿ ನೀಡಿ ಪತ್ನಿಯನ್ನು ಕೊಲೆ ಮಾಡಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ನಡೆದಿದೆ.
ದುರ್ಗಾವತಿ ಕೊಲೆಯಾದ ಮಹಿಳೆ. ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ಹೇಮಂತ್ ಶರ್ಮಾ ಎಂಬಾತ ತನ್ನ ಪತ್ನಿಯು ದುಂದುವೆಚ್ಚ ಮಾಡುತ್ತಿರುವುದಕ್ಕೆ ಬೇಸತ್ತಿದ್ದ. ಗೆಳೆಯರಿಗೆ 2.5 ಲಕ್ಷ ರೂ. ಗೆ ಪತ್ನಿಯ ಕೊಲೆ ಮಾಡಲು ಸುಪಾರಿ ನೀಡಿದ್ದ. ಇದನ್ನೂ ಓದಿ: ಎಸ್‌ಸಿಒ ಸಭೆಗೆ ಮೋದಿಗೆ ಆಹ್ವಾನ ನೀಡಿದ ಪಾಕ್ – ಪ್ರಧಾನಿ ಭಾಗವಹಿಸೋದು ಡೌಟ್
- Advertisement -
- Advertisement -
ಆ.13 ರಂದು ದುರ್ಗಾವತಿ ತನ್ನ ಸಹೋದರ ಸಂದೇಶನ ಜೊತೆಗೆ ಬೈಕ್ ಮೇಲೆ ದೇವಸ್ಥಾನಕ್ಕೆ ಹೋಗಿದ್ದಳು. ದೇವಸ್ಥಾನದಿಂದ ವಾಪಸ್ ಬರುವ ಸಮಯದಲ್ಲಿ ಹೇಮಂತ್ ಶರ್ಮಾನಿಗೆ ಪರಿಚಯವಿದ್ದವರು ಕಾರಿನಲ್ಲಿ ಬಂದು ಉದ್ದೇಶಪೂರ್ವಕವಾಗಿ ದುರ್ಗಾವತಿ ಚಲಿಸುತ್ತಿದ್ದ ಬೈಕ್‌ಗೆ ಗುದ್ದಿದ್ದಾರೆ.
- Advertisement -
ತಕ್ಷಣವೇ ದುರ್ಗಾವತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಆಕೆ ಮೃತಪಟ್ಟಿದ್ದಾಳೆ. ಆಕೆಯ ಸಹೋದರ ಸಂದೇಶ ಗಂಭೀರವಾಗಿ ಗಾಯಗೊಂಡಿದ್ದಾನೆ. ನಂತರ ಶರ್ಮಾ, ಭಾರೀ ವಾಹನವೊಂದು ವೇಗವಾಗಿ ಬಂದು ಅಪಘಾತ ಮಾಡಿದೆ ಎಂದು ತಿಳಿಸಿ ಸುಮ್ಮನಾಗಿದ್ದ. ಇದನ್ನೂ ಓದಿ: ಬಾಂಗ್ಲಾದಿಂದ ಭಾರತಕ್ಕೆ ಹಿಂದೂಗಳೇ ಬರ್ತಿಲ್ಲ, ಆದ್ರೆ 35 ಮುಸ್ಲಿಂ ನುಸುಳುಕೋರರನ್ನು ಬಂಧಿಸಿದ್ದೇವೆ: ಅಸ್ಸಾಂ ಸಿಎಂ
- Advertisement -
ಘಟನೆಯಾದ 10 ದಿನದ ನಂತರ ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಹೇಮಂತ್ ಶರ್ಮಾನಿಗೆ ಪರಿಚಯವಿದ್ದ ವ್ಯಕ್ತಿಯ ಕಾರು ಬೈಕಿಗೆ ಉದ್ದೇಶಪೂರ್ವಕವಾಗಿ ಗುದ್ದಿದ್ದು ಗೊತ್ತಾಗಿದೆ.
ತನಿಖೆ ವೇಳೆ ದುರ್ಗಾವತಿಯು ಹೇಮಂತ್ ಶರ್ಮಾನ ಎರಡನೇ ಹೆಂಡತಿ ಎಂದು ಗೊತ್ತಾಗಿದ್ದು, ಅವರಿಬ್ಬರು 2021 ರಿಂದ ಸಂಪರ್ಕದಲ್ಲಿದ್ದರು. ನಂತರ ಅವರು 2023ರಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು ಎಂದು ತಿಳಿದು ಬಂದಿದೆ.
ಕೊಲೆ ಮಾಡುವಾಗ ಮೂವರು ಆರೋಪಿಗಳು ಭಾಗಿಯಾಗಿರುವುದು ಖಚಿತವಾಗಿದೆ. ಸದ್ಯಕ್ಕೆ ಹೇಮಂತ್ ಶರ್ಮಾ ಮತ್ತು ಕಾರು ಚಾಲಕನನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಂಧನಕ್ಕೆ ಹುಡುಕಾಟ ನಡೆದಿದೆ ಎಂದು ಪೊಲೀಸ್ ಅಧಿಕಾರಿ ನಿರಂಜನ್ ಶರ್ಮಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 2,100 ಕೋಟಿ ರೂ. ಚೆಕ್ ಕೊಟ್ಟ ದಾನಿ