ಎಟಿಎಂ ಬ್ಲಾಸ್ಟ್ ಮಾಡಿದ ಕಳ್ಳರು-ಸಿಕ್ಕಿದ್ದು 10 ಸಾವಿರ

Public TV
1 Min Read
Athani A

ಭೋಪಾಲ್: ಕಳ್ಳರ ಗುಂಪೊಂದು ಎಟಿಎಂ ಯಂತ್ರವನ್ನೇ ಸ್ಫೋಟಿಸಿ ಹಣ ಕಳ್ಳತನ ಮಾಡಿದ್ದಾರೆ. ಮಧ್ಯಪ್ರದೇಶದ ಕಟನಿ ಗ್ರಾಮದಲ್ಲಿಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಶಾಖೆಯನ್ನು ಸ್ಫೋಟಿಸಿದ್ದಾರೆ. ಎಟಿಎಂ ಯಂತ್ರದಲ್ಲಿದ್ದ 10 ಸಾವಿರ ರೂ. ಹಣವನ್ನು ತೆಗೆದುಕೊಂಡು ಹಾಡಹಗಲೇ ಪರಾರಿಯಾಗಿದ್ದಾರೆ.

ಶನಿವಾರ ಮಧ್ಯಾಹ್ನ ವಕಾಲ ಗ್ರಾಮದ ಎಟಿಎಂ ಕೇಂದ್ರವನ್ನು ಗುರಿಯಾಗಿಸಿಕೊಂಡು ನುಗ್ಗಿದ ಮೂವರ ಗ್ಯಾಂಗ್ ಸ್ಫೋಟಕ ವಸ್ತುಗಳ ಬಳಸಿ ಯಂತ್ರ ಸ್ಫೋಟಿಸಿ, ಹಣ ದೋಚಿದ್ದರು. ರಾಜ್ಯದಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಕಳ್ಳತನಗಳು ಸಾಮ್ಯತೆ ಹೊಂದಿವೆ.

ಶನಿವಾರ ನಡೆದ ಕಳ್ಳತನ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂವರು ಮುಸುಕುಧಾರಿಗಳು ಎಟಿಎಂ ಸ್ಫೋಟಿಸಿರುವುದು ವಿಡಿಯೋದಲ್ಲಿ ನೋಡಬಹುದು. ಇದುವರೆಗೂ ಕಳ್ಳರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

Share This Article