ಭೋಪಾಲ್: ಮಧ್ಯಪ್ರದೇಶದ (Madhya Pradesh) ಸತ್ನಾ (Satna) ಜಿಲ್ಲೆಯ ಸರ್ಕಾರಿ ವೈದ್ಯರೊಬ್ಬರು ಪ್ರಿಸ್ಕ್ರಿಪ್ಷನ್‍ನಲ್ಲಿ (Prescriptions) ‘ಶ್ರೀ ಹರಿ’ (Shri Hari) ಎಂದು ಹಿಂದಿಯಲ್ಲಿ ಬರೆಯುವ ಮೂಲಕ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ಹೇಳಿಕೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ ದಿನವೇ ಕೋಟಾರ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‍ಸಿ) ವೈದ್ಯಕೀಯ ಅಧಿಕಾರಿ ಡಾ.ಸರ್ವೇಶ್ ಸಿಂಗ್ (Dr Sarvesh Singh) ಹಿಂದಿಯಲ್ಲಿ ಬರೆದ ಪ್ರಿಸ್ಕ್ರಿಪ್ಷನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
Advertisement
ಭೋಪಾಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಭಾಷಣದ ವೇಳೆ ವೈದ್ಯರು ಪ್ರಿಸ್ಕ್ರಿಪ್ಷನ್ ಸ್ಲಿಪ್‍ಗಳ ಮೇಲೆ ಆರ್‌ಎಕ್ಸ್ ಎಂಬ (ಲ್ಯಾಟಿನ್ ಪದದ ಚಿಹ್ನೆ) ಬದಲಿಗೆ ‘ಶ್ರೀ ಹರಿ’ ಎಂದು ಬರೆಯಬಹುದು ಎಂದು ಹೇಳಿದ್ದರು. ಇದನ್ನೂ ಓದಿ: ದಾದಾ ಪರ ದೀದಿ ಬ್ಯಾಟಿಂಗ್ – ICC ಚುನಾವಣೆಗೆ ಅವಕಾಶ ಕೊಡುವಂತೆ ಮೋದಿಗೆ ಪತ್ರ
Advertisement
प्रदेश के मुख्यमंत्री श्री @ChouhanShivraj द्वारा #MP_में_हिंदी_में_MBBS की पढ़ाई कराने की निर्णय के बाद #सतना में एक चिकित्सक ने किया अमल। मरीजों को हिंदी में दवाई लिखना किया शुरू। प्राथमिक स्वास्थ्य केंद्र कोटर में चिकित्सा अधिकारी हैं डॉ सर्वेश सिंह। pic.twitter.com/aX6Ddr1Vrx
— Chetan Tiwari (@Chetantiwaribjp) October 16, 2022
Advertisement
2017ರಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಡಾ.ಸರ್ವೇಶ್ ಸಿಂಗ್ ಅವರು, ಪಠ್ಯಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಲೈವ್ ಆಗಿ ನೋಡಿದ್ದು, ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು ಹಿಂದಿಯಲ್ಲಿ ಪ್ರಿಸ್ಕ್ರಿಪ್ಷನ್ ಬರೆಯಲು ಪ್ರಯತ್ನಿಸುವಂತೆ ಒತ್ತಾಯಿಸಿದರು. ಹಾಗಾಗಿ ಅದೇ ದಿನ ಪ್ರಿಸ್ಕ್ರಿಪ್ಷನ್ ಅನ್ನು ಹಿಂದಿಯಲ್ಲಿ ಬರೆಯಬೇಕು ಎಂದು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಅದರಂತೆ ಹೊಟ್ಟೆನೋವು ಎಂದು ಭಾನುವಾರ ಆಸ್ಪತ್ರೆಗೆ ಬಂದ ಮೊದಲ ರೋಗಿ ರಶ್ಮಿ ಸಿಂಗ್ ಅವರಿಗೆ ನಾನು ಪ್ರಿಸ್ಕ್ರಿಪ್ಷನ್ ಅಲ್ಲಿ Rx ಬದಲಿಗೆ ‘ಶ್ರೀ ಹರಿ’ ಎಂದು ಬರೆಯಲು ಆರಂಭಿಸಿದೆ. ನಂತರ ಔಷಧಿಗಳ ಹೆಸರನ್ನು ಹಿಂದಿಯಲ್ಲಿ ಬರೆದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ- ಮೈಸೂರಲ್ಲಿ ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು