ಭೋಪಾಲ್: ಚುನಾವಣೆ ಪ್ರಚಾರದ ವೇಳೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಒಂದಿಲ್ಲೊಂದು ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಈ ಬಾರಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಶೂ ಪಾಲಿಶ್ ಮಾಡುವ ಮೂಲಕ ಪ್ರಚಾರ ಮಾಡಿದ್ದಾರೆ.
ರಾಷ್ಟ್ರೀಯ ಆಮ್‍ಜನ್ ಪಕ್ಷದ ಅಭ್ಯರ್ಥಿ ಶರದ್ ಸಿಂಗ್ ಕುಮಾರ್ ಅವರ ಮತದಾನದ ಚಿಹ್ನೆ ಶೂ. ಈ ಮೂಲಕ ಅವರು ಸಾರ್ವಜನಿಕರ ಶೂ ಪಾಲಿಶ್ ಮಾಡಿ ಸಖತ್ ಪ್ರಚಾರ ಮಾಡುತ್ತಿದ್ದಾರೆ.
Advertisement
ಈ ಚಿಹ್ನೆ ಉಚಿತವಾಗಿದ್ದು, ಯಾರೊಬ್ಬರೂ ಆಯ್ಕೆಗೆ ಮುಂದಾಗುವುದಿಲ್ಲ. ಆದರೆ ನಾನು ಆಯ್ಕೆ ಮಾಡಿಕೊಂಡು, ಜನರ ಆಶೀರ್ವಾದ ಪಡೆಯುತ್ತಿರುವೆ. ಜಯ ಗಳಿಸಿ ಜನರ ಸೇವೆ ಮಾಡುತ್ತೇನೆ ಎಂದು ಶರದ್ ಸಿಂಗ್ ಕುಮಾರ್ ತಿಳಿಸಿದ್ದಾರೆ. ಇದನ್ನು ಓದಿ: ಅಭಿವೃದ್ಧಿ ಮಾಡದಿದ್ರೆ ಚಪ್ಪಲಿ ಸೇವೆ ಮಾಡಿ – ವಿಭಿನ್ನ ಪ್ರಚಾರ ಕೈಗೊಂಡ ಅಭ್ಯರ್ಥಿ
Advertisement
Bhopal: Sharad Singh Kumar from Rashtriya Aamjan Party whose election symbol is a shoe, polishes shoes of people ahead of #MadhyaPradeshElections;says,''it was a free poll symbol that no one was willing to take. We took it & we will turn it into a blessing" pic.twitter.com/DMJG49WcWg
— ANI (@ANI) November 25, 2018
Advertisement
ಇದಕ್ಕೂ ಮುನ್ನ ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ಜಗ್ಟಿಯಲ್ ಜಿಲ್ಲೆಯ ಕೊರುಟ್ಲಾ ಕ್ಷೇತ್ರ ಅಭ್ಯರ್ಥಿ ಅಕುಲ ಹನುಮಂತ್ ಚಪ್ಪಲಿ ಹಂಚಿದ್ದರು. ಒಂದು ವೇಳೆ ಗೆದ್ದ ಬಳಿಕ ಕ್ಷೇತ್ರದ ಅಭಿವೃದ್ಧಿ ಮಾಡದಿದ್ದರೆ ನನಗೆ ಚಪ್ಪಲಿ ಸೇವೆ ಮಾಡಿ ಎಂದು ಹೇಳಿದ್ದರು. ಈ ಬೆನ್ನಲ್ಲೇ ಶರದ್ ಸಿಂಗ್ ಪ್ರಚಾರ ಮಾಡುತ್ತಿದ್ದಾರೆ. ಮಧ್ಯ ಪ್ರದೇಶದಲ್ಲಿ ಚುನಾವಣೆ ಪ್ರಚಾರ ರಂಗೇರುತ್ತಿದೆ.
Advertisement
ಮಧ್ಯಪ್ರದೇಶದಲ್ಲಿ 28ರಂದು ಮತದಾನ ನಡೆಯಲಿದೆ. ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಡಿಸೆಂಬರ್ 11ರಂದು ಮತ ಎಣಿಕೆ ನಡೆಲಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಕಮಲ್‍ನಾಥ್ ಹಾಗೂ ಬಿಜೆಪಿಯಿಂದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಕಣಕ್ಕೆ ಇಳಿದಿದ್ದಾರೆ.
Poll bound #Telangana while witnessing a high decibel campaign, an independent candidate of Korutla constituency has got all attention because of his unique electioneering. He is distributing slipper to voters and promising ‘hit me with slipper if I fail to perform’ pic.twitter.com/z5PYBF5mic
— Ashish (@KP_Aashish) November 22, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv