ಭೋಪಾಲ್: ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಸ್ತೆ ಅಭಿವೃದ್ಧಿಗಾಗಿ ಇಟ್ಟಿದ್ದ ಫಂಡ್ ನಿಂದ 30 ಲಕ್ಷ ರೂ. ಬೆಲೆಬಾಳುವ ಕಾರನ್ನು ಖರೀದಿಸಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ರಾಜ್ಯದ ಮೂರು ದಿನಗಳ ಮುಂಗಾರು ಅಧಿವೇಶನ ಮುಕ್ತಾಯಗೊಂಡ ತರುವಾಯ ಕಾಂಗ್ರೆಸ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗ್ರಾಮೀಣ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಕಿಸಾನ್ ಸಾಧಿಕ್ ನಿಧಿಯ ಹಣದಿಂದ 30 ಲಕ್ಷ ರೂ. ಬೆಲೆಬಾಳುವ ಟೊಯೊಟಾ ಫಾರ್ಚೂನರ್ ಎಸ್‍ಯುವಿ ಕಾರನ್ನು ಖರೀದಿಸಿದ್ದಾರೆಂದು ಆರೋಪಿಸಿದೆ.
Advertisement
Advertisement
ಮಧ್ಯಪ್ರದೇಶದ ಸರ್ಕಾರದ ಕೃಷಿ ಮಾರುಕಟ್ಟೆ ಬೋರ್ಡ್ ನ್ನು ಸಾಮಾನ್ಯವಾಗಿ ಮಂಡಿ ಬೋರ್ಡ್ ಎಂದೇ ಹೇಳಲಾಗುತ್ತದೆ. ಇದರ ನಿಧಿಯಿಂದ ರಾಜ್ಯದಲ್ಲಿ ಗ್ರಾಮೀಣ ಭಾಗದ ರಸ್ತೆ ಮೇಲ್ದರ್ಜೆಗೇರಿಸುವುದು ಹಾಗೂ ಸೇತುವೆಗಳ ನಿರ್ಮಾಣಕ್ಕಾಗಿ ಹಣವನ್ನು ಬಳಸಲಾಗುತ್ತದೆ.
Advertisement
ಈ ಕುರಿತು ಮಾತನಾಡಿದ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಅಜಯ್ ಸಿಂಗ್ ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ರಾಜ್ಯದ ಮುಖ್ಯಮಂತ್ರಿಗಳು 30 ಲಕ್ಷ ಬೆಲೆಬಾಳುವ ಕಾರನ್ನು ಖರೀದಿಸಿದ್ದಾರೆ. ಮುಖ್ಯಮಂತ್ರಿಗಳು ಕಿಸಾನ್ ಸಾಧಿಕ್ ನಿಧಿಯ ಸಬಲೀಕರಣ ಸಮಿತಿಯ ಸಹ ಚೇರಮನ್‍ರಾಗಿದ್ದು ಇಂಥ ಸಂದರ್ಭದಲ್ಲಿ ಬೆಲೆಬಾಳುವ ಕಾರನ್ನು ಖರೀದಿ ಮಾಡಿರುವುದು ವಿಷಾದನೀಯ ಎಂದರು.
Advertisement
ಮಂಡ್ಸೂರ್ ನಲ್ಲಿ 2017ರ ಜೂನ್ 6ರಂದು ನಡೆದ ಪೊಲೀಸ್ ಫೈರಿಂಗ್ ನಲ್ಲಿ ರಲ್ಲಿ 5 ಜನ ರೈತರು ಪ್ರಾಣ ಕಳೆದುಕೊಂಡಿದ್ದರು. ಆ ಘಟನೆಗೂ ಮೊದಲೇ ಒಂದು ತಿಂಗಳು ಹಿಂದೆಯೇ ಈ ಕಾರನ್ನು ಖರೀದಿಸಲಾಗಿದೆ. ಅಲ್ಲದೇ ವಿಐಪಿ ಕೋಟಾದಡಿ ಕಾರ್ ನಂಬರ್ ನ್ನು ನೊಂದಣಿ ಮಾಡಿಸಲು 32,070 ರೂಗಳನ್ನು ಆರ್‍ಟಿಓ ಏಜೆಂಟ್ ಒಬ್ಬರಿಗೆ ನೀಡಲಾಗಿದೆ. ಈ ಮೊತ್ತವೂ ಕೂಡ ಅದರಲ್ಲಿ ಸೇರಿದೆ ಎಂದು ಏಜೆಂಟ್ ಹೇಳಿದ್ದಾನೆ ಎಂದರು.
ಈ ಕುರಿತಂತೆ ಮಾಹಿತಿ ನೀಡಿದ ಮಂಡಿ ಬೋರ್ಡ್ ನ ಎಂಡಿ ಫಯಾಜ್ ಅಹಮದ್ ಕಿದ್ವಾಯ್ ಕಾರು ಮುಖ್ಯಮಂತ್ರಿಗಳಿಗಾಗಿಯೇ ಖರೀದಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಯಾವ ನಿಧಿಯಿಂದ ಕಾರನ್ನು ಖರೀದಿಸಲಾಗಿದೆ ಎನ್ನುವುದನ್ನು ತಿಳಿಯಬೇಕಿದೆ ಎಂದು ಹೇಳಿದರು. ಈ ಕುರಿತಂತೆ ರಾಜ್ಯ ಸರ್ಕಾರದ ವಕ್ತಾರ ನರೋತ್ತಮ್ ಮಿಶ್ರಾ ಈ ವಿಚಾರಕ್ಕೆ ಪ್ರತಿಕ್ರಿಯಿಸಿದಲು ನಿರಾಕರಿಸಿದ್ದಾರೆ.