ಭೋಪಾಲ್: ನೃತ್ಯ ಮಾಡುವ ಮೂಲಕ ಟ್ರಾಫಿಕ್ ಜಾಮ್ ಅನ್ನು ನಿರ್ವಹಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಟ್ರಾಫಿಕ್ ಪೊಲೀಸ್ ಇಂದು ನಡು ರಸ್ತೆಯಲ್ಲಿ ಆಟೋ ಚಾಲಕನನ್ನು ಥಳಿಸುವ ಮೂಲಕ ಸುದ್ದಿಯಾಗಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ನೃತ್ಯ ಮಾಡುವ ಮೂಲಕ ಟ್ರಾಫಿಕ್ ನಿರ್ವಹಣೆ ಮಾಡುತ್ತಿದ್ದ ಪೊಲೀಸ್ ಪೇದೆ ರಂಜಿತ್ ಸಿಗ್ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದರು. ಈಗ ಅವರೇ ನಡು ರಸ್ತೆಯಲ್ಲಿ ಆಟೋ ಚಾಲಕನಿಗೆ ಥಳಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
https://www.facebook.com/indoremerijaan09/videos/2182050095437843/
Advertisement
ರಂಜಿತ್ ಆಟೋ ಚಾಲಕನೋರ್ವ ನೋ ಎಂಟ್ರಿ ರಸ್ತೆಯಲ್ಲಿ ಬಂದಿದ್ದಾನೆ ಎಂದು ಆತನನ್ನು ನಡುರಸ್ತೆಯಲ್ಲಿ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಸಾರ್ವಜನಿಕರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ರಂಜಿತ್ ಆಟೋ ಚಾಲಕನಿಗೆ ಕಪಾಳಕ್ಕೆ ಹೊಡೆಯುವುದು. ಕಾಲಿನಲ್ಲಿ ಆತನಿಗೆ ಒದೆಯುವುದು ಕಂಡು ಬಂದಿದೆ.
Advertisement
ತನ್ನ ಮೂನ್ ವಾಕ್ ಡ್ಯಾನ್ಸ್ ಮೂಲಕ ಇಂದೋರ್ ಪ್ರದೇಶದಲ್ಲಿ ಸಿಂಘಂ ಎಂಬ ಹೆಸರು ಪಡೆದಿದ್ದ ರಂಜಿತ್ ಅವರನ್ನು ಫೇಸ್ ಬುಕ್‍ನಲ್ಲಿ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಜನ ಅವರನ್ನು ಫಾಲೋ ಮಾಡುತ್ತಿದ್ದರು. ಟ್ರಾಫಿಕ್ ಸಮಸ್ಯೆಯನ್ನು ಬಹಳ ತಾಳ್ಮೆಯಿಂದ ವಿಭಿನ್ನ ರೀತಿಯಲ್ಲಿ ಬಗೆಹರಿಸುತ್ತಿದ್ದ ರಂಜಿತ್ ಅವರನ್ನು ಎಲ್ಲರೂ ಪ್ರಶಂಸಿದ್ದರು. ಆದರೆ ಈಗ ಅವರ ನಡವಳಿಕೆ ನೋಡಿರುವ ಜನ ಛೀಮಾರಿ ಹಾಕಿದ್ದಾರೆ.
Advertisement
ರಂಜಿತ್ ಸಿಂಗ್ ಅವರ ಈ ವಿಡಿಯೋ ನೋಡಿ ಕಮೆಂಟ್ ಮಾಡಿರುವ ನೆಟ್ಟಿಗರು, ಆಟೋ ಡ್ರೈವರ್ ಅನ್ನು ಹೊಡೆಯುವ ಹಕ್ಕನ್ನು ನಿಮಗೆ ಯಾರು ಕೊಟ್ಟಿದ್ದು, ಅವರು ತಪ್ಪು ಮಾಡಿರಬಹುದು, ಆದರೆ ಅವರು ಖಂಡಿತವಾಗಿಯೂ ಥಳಿಸಲು ಅರ್ಹರಲ್ಲ. ನಿಮಗೆ ಇಂದೋರ್ ನ ನಿಯಮಗಳನ್ನು ಹಾಳು ಮಾಡುವ ಕೆಲಸ ಮಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.