ಭೋಪಾಲ್: ನೋಡ ನೋಡುತ್ತಲೇ ಸವಾರನೊಬ್ಬ ಬೈಕ್ ಜೊತೆಗೆ ನದಿಗೆ ಬಿದ್ದ ಘಟನೆ ಮಧ್ಯಪ್ರದೇಶದ ಖಾರ್ಗೋನ್ ರಸ್ತೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಗಿದ್ದಾನೆ. ನದಿಗೆ ಬಿದ್ದ ತಕ್ಷಣವೇ ಸ್ಥಳದಲ್ಲಿದ್ದ ಜನರು ಆತನನ್ನು ರಕ್ಷಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
Advertisement
#WATCH Madhya Pradesh: A biker was swept away while crossing a flooded road in Khargone. He was later rescued by locals. (02.07.19) pic.twitter.com/uXYK0HlhuL
— ANI (@ANI) July 3, 2019
Advertisement
ವಿಡಿಯೋದಲ್ಲಿ ಏನಿದೆ?:
ನದಿಯ ಸೇತುವೆ ಹತ್ತಿ ನೀರು ಹೋಗುತ್ತಿರುತ್ತದೆ. ಈ ವೇಳೆ ಕೆಲವರು ಬೈಕ್, ಎತ್ತಿನ ಬಂಡಿ ಹಾಗೂ ಸೈಕಲ್ ಮೇಲೆ ಹೋಗುತ್ತಿರುತ್ತಾರೆ. ಆಗ ನೀರಿನ ಹರಿವು ವೇಗವಾಗಿದ್ದರಿಂದ ಓರ್ವ ಸವಾರ ಸೇತುವೆ ಮೇಲಿಂದ ಬೈಕ್ ಸಮೇತ ಕೆಳಗೆ ಬೀಳುತ್ತಾನೆ. ಬಳಿಕ ಅಲ್ಲಿಂದ ಎದ್ದು, ಸ್ಥಳೀಯರ ಸಹಾಯದಿಂದ ನದಿಯಿಂದ ಹೊರಗೆ ಬಂದಿದ್ದಾನೆ.
Advertisement
Bhopal: Rain lashes the state capital bringing respite from heat; Ajay Shukla, Scientist, IMD, says, "monsoon has arrived in almost the entire #MadhyaPradesh today except Gwalior and Chambal division. Prediction is that monsoon will cover the entire state within the next 2 days" pic.twitter.com/zEAMDyBIpm
— ANI (@ANI) July 3, 2019
Advertisement
ಮಧ್ಯಪ್ರದೇಶದಲ್ಲಿ ಮಾನ್ಸೂನ್ ಅಬ್ಬರ ಜೋರಾಗಿದ್ದು, ಇಂದೋರ್, ಭೋಪಾಲ್, ಜಬಲ್‍ಪುರ್ ಸೇರಿದಂತೆ ವಿವಿಧೆಡೆ ಎಚ್ಚರಿಕೆ ನೀಡಲಾಗಿದೆ. ಬುಧವಾರ 1 ರಿಂದ 2 ಸೆಂ.ಮೀ ಮಳೆಯಾಗುವ ಸಾಧ್ಯತೆಯಿದೆ. ಗುರುವಾರ ಕೂಡ ವರುಣನ ಆರ್ಭಟ ಮುಂದುವರಿಯಲಿದ್ದು, 3 ಸೆಂ.ಮೀ. ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಅಜಯ್ ಶುಕ್ಲಾ ತಿಳಿಸಿದ್ದಾರೆ.
ಭಾರೀ ಮಳೆಯಿಂದ ಮಧ್ಯಪ್ರದೇಶದ ಕೆಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಪರದಾಡುವಂತಾಗಿದೆ.