ಬೆಂಗಳೂರು: ಶಿವಮೊಗ್ಗದಲ್ಲಿ (Shivamogga) ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್ ಕುಮಾರ್ (Geetha ShivarajKumar) ಗೆಲ್ತಾರೆ ಎಂದು ಅವರ ಸಹೋದರ ಹಾಗೂ ಸಚಿವ ಮಧು ಬಂಗಾರಪ್ಪ (Madhu Bangarappa) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಗೀತಾ ಶಿವರಾಜ್ ಕುಮಾರ್ ಅವರು ಅವತ್ತು ಸ್ಪರ್ಧೆ ಮಾಡಿದ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಈ ಬಾರಿ ಅವರು ಗೆಲ್ತಾರೆ. ರಾಜ್‍ಕುಮಾರ್ ಸೊಸೆ ರಾಜಕಾರಣಕ್ಕೆ ಬರೋದರ ಪರ ಹಾಗೂ ವಿರುದ್ಧ ಯಾರು ಮಾತನಾಡಿದರು? ಯಾರೋ ಅವರ ತೆವಲಿಗೆ ಟ್ವೀಟ್ ಮಾಡಲಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಮಾನ-ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಸರ್ಕಾರ: ಆರ್.ಅಶೋಕ್ ಟೀಕೆ
- Advertisement
- Advertisement
ಗೀತಕ್ಕ, ಶಿವರಾಜ್ ಕುಮಾರ್ ಅವರ ಹೆಂಡತಿ. ಅವರು ಅದಕ್ಕೆ ಉತ್ತರ ಕೊಡುತ್ತಾರೆ. ಬಂಗಾರಪ್ಪ ಹಾಗೂ ಯಡಿಯೂರಪ್ಪ ಕುಟುಂಬದ ಫೈಟ್ ಅಲ್ಲ. ಇದು ಬಂಗಾರಪ್ಪ ಅವರ ಧ್ವನಿ ಮತ್ತೊಮ್ಮೆ ಬೇಕು ಎನ್ನಿಸಿದೆ. ಬಂಗಾರಪ್ಪ ಅವರ ಧ್ವನಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಸಮಾಜಮುಖಿ ಕೆಲಸ ಮಾಡುವ ಆಸಕ್ತಿ ಇದೆ. ನಮ್ಮ ಗ್ಯಾರಂಟಿ ಸೇರಿದಂತೆ, ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯಲಿವೆ. ಗೀತಕ್ಕ ಈ ಬಾರಿ ಗೆಲ್ಲಲಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮೂರ್ನಾಲ್ಕು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ: ವಿಜಯೇಂದ್ರ