SSLC, PUCಗೆ 3 ಪಬ್ಲಿಕ್ ಪರೀಕ್ಷೆ ಇರುತ್ತೆ – ಸಚಿವ ಮಧು ಬಂಗಾರಪ್ಪ

Public TV
1 Min Read
madhu bangarappa 1

ಬೆಂಗಳೂರು: ಎಸ್‌ಎಸ್‌ಎಲ್‌ಸಿ, ಪಿಯುಸಿಗೆ (SSLC, PUC) ಇನ್ಮುಂದೆ 3 ಪಬ್ಲಿಕ್ ಪರೀಕ್ಷೆಗಳನ್ನು ಅನುಷ್ಠಾನ ಮಾಡಿದ್ದೇವೆ. ಇದರಿಂದ ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.

ಬೆಳಗಾವಿ ಸುವರ್ಣಸೌಧದಲ್ಲಿ ನಡೆದ ಕಲಾಪದಲ್ಲಿ ಬಿಜೆಪಿ ಶಾಸಕರೊಬ್ಬರ (BJP MLA) ಪ್ರಶ್ನೆಗೆ ಉತ್ತರಿಸುತ್ತಾ, ನಾವು ಮಾತು ಕೊಟ್ಟಂತೆ ಎನ್‌ಇಪಿ (NEP) ರದ್ದು ಮಾಡಿದ್ದೇವೆ. ಹಿಂದಿನ ಪಠ್ಯಕ್ರಮ ಜಾರಿ ಮಾಡಿದ್ದೇವೆ ಬಿಜೆಪಿ ಸರ್ಕಾರ ಮಾಡಿದ ಲೋಪ ಸರಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: Article370: ಶೇಕ್ ಅಬ್ದುಲ್ಲಾ ಖುಷಿಪಡಿಸಲು ಜಾರಿಗೆ ತಂದಿದ್ದನ್ನು ಮೋದಿ ಧೈರ್ಯದಿಂದ ರದ್ದು ಮಾಡಿದ್ರು: ಯತ್ನಾಳ್

ಎಸ್‌ಎಸ್‌ಎಲ್‌ಸಿ, ಪಿಯುಸಿಗೆ 3 ಪಬ್ಲಿಕ್ ಪರೀಕ್ಷೆಗಳನ್ನು ಅನುಷ್ಠಾನ ಮಾಡಿದ್ದೇವೆ. ಇದರಿಂದ ಮಕ್ಕಳಿಗೆ ಅನುಕೂಲ ಆಗುತ್ತದೆ. ಈ ವ್ಯವಸ್ಥೆ ಎನ್‌ಇಪಿಯಲ್ಲಿ ಇಲ್ಲ. ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭ ಮಾಡುವ ವ್ಯವಸ್ಥೆ ಮಾಡ್ತಿದ್ದೇವೆ. ಎಸ್‌ಇಪಿಯಲ್ಲಿ ಉತ್ತಮ ಶಿಕ್ಷಣ ಕೊಡ್ತೀವಿ. ಇದಕ್ಕಾಗಿ ಸಮಿತಿ ನೇಮಕ ಮಾಡಲಾಗಿದೆ. ಉತ್ತಮ ವ್ಯಕ್ತಿಗಳನ್ನ ಸೃಷ್ಟಿ ಮಾಡುವ ಪಾಲಿಸಿ ಎಸ್‌ಇಪಿ ಜಾರಿ ಮಾಡ್ತೀವಿ. ಎನ್‌ಇಪಿ ರದ್ದು ನಿರ್ಧಾರ ವಾಪಸ್ ಇಲ್ಲವೇ ಇಲ್ಲ ಎಂದು ಹೇಳಿದರು.

ಇದಕ್ಕೆ ಬಿಜೆಪಿ ಶಾಸಕರಿಂದ ವಿರೋಧ ವ್ಯಕ್ತವಾಯಿತು. ವೈ.ಎ ನಾರಾಯಣಸ್ವಾಮಿ ಇದಕ್ಕೆ ಪ್ರತಿಕ್ರಿಯಿಸಿ, ಸಿನಿಎಸ್‌ಇ ಬೋರ್ಡ್‌ಗೆ ಎಸ್‌ಇಪಿ ಅನ್ವಯ ಆಗುತ್ತಾ? ಬೇರೆ ಬೇರೆ ರಾಜ್ಯಗಳಲ್ಲಿ ಎನ್‌ಇಪಿ ಇದ್ದು, ನಮ್ಮ ರಾಜ್ಯದಲ್ಲಿ ಎಸ್‌ಇಪಿ ಇದ್ದರೆ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ನಮ್ಮ ಮಕ್ಕಳಿಗೆ ಅನ್ಯಾಯ ಆಗುತ್ತದೆ. ದುರುದ್ದೇಶದಿಂದ ಎನ್‌ಇಪಿ ರದ್ದು ಮಾಡೋದು ಸರಿಯಲ್ಲ. ಎನ್‌ಇಪಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸುತ್ತದೆ. ಸಿಬಿಎಸ್‌ಇ ಖಾಸಗಿ ಶಾಲೆಗಳಲ್ಲಿ ಎಸ್‌ಇಪಿ ಅನುಷ್ಠಾನ ಮಾಡೋ ತಾಕತ್ ಸರ್ಕಾರಕ್ಕೆ ಇದೆಯಾ? ಎಂದು ಸವಾಲ್ ಹಾಕಿದರು.

ಈ ವೇಳೆ ಹಲವು ಸದಸ್ಯರು ಎನ್‌ಇಪಿ ಚರ್ಚೆಯಲ್ಲಿ ಮಾತನಾಡುವ ಉತ್ಸಾಹ ತೋರಿದ್ದರಿಂದ್ದ ಚರ್ಚೆಯನ್ನು ಮಂಗಳವಾರ (ಡಿ.12ಕ್ಕೆ) ಮುಂದೂಡಲಾಯಿತು. ಇದನ್ನೂ ಓದಿ: ನಿನ್ಗೆ ಹುಚ್ಚು ನಾಯಿ ಕಚ್ಚಿದ್ಯಾ? ರೈತರ ಹಣ ತಿಂದ್ರೆ ಪ್ಯಾರಾಲಿಸಿಸ್ ಬರುತ್ತೆ – ಬಿಜೆಪಿ ವಿರುದ್ಧ ಲಕ್ಷ್ಮಣ್‌ ಸವದಿ ಕೆಂಡಾಮಂಡಲ

Share This Article