ದಾವಣಗೆರೆ: ಶಿವಮೊಗ್ಗದಲ್ಲಿ (Shivamogga) ಯಾವನಿಗೂ ಬಾಲ ಬಿಚ್ಚೋದಕ್ಕೆ ಬಿಡುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಭದ್ರಾವತಿಯಲ್ಲಿ (Bhadravathi) ಪಾಕ್ ಪರ ಘೋಷಣೆ ಕೂಗಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅಲ್ಲಿ ಘೋಷಣೆ ಕೂಗಿದ ಪದ ಬೇರೆ ಇದೆ, ಆ ರೀತಿ ಇಲ್ಲವೇ ಇಲ್ಲ. ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದು ನಿಮಗೆ ಗೊತ್ತಾ? ಏನ್ ಗೊತ್ತು ಹೇಳಿ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು. ಅಲ್ಲದೇ ನನ್ನ ಹತ್ತಿರ ಏನು ಕೂಗಿದ್ರೂ ಎಂಬ ಮಾಹಿತಿ ಇದೆ. ಆದರೆ ಈಗ ಮಾತಾಡೋದಿಲ್ಲ. ಎಫ್‍ಎಸ್‍ಎಲ್ ವರದಿ ಬಂದ ನಂತರ ನಾನು ಮಾತಾಡುತ್ತೇನೆ. ಏನಾದರೂ ಆ ರೀತಿ ಹೇಳಿದ್ದರೆ ಅವರಿಗೆ ಕಠಿಣವಾದ ಶಿಕ್ಷೆ ನೀಡಿ ಎಂದು ಹೇಳಿದ್ದೇನೆ. ಬೇರೆ ದೇಶಕ್ಕೆ ಜಿಂದಾಬಾದ್ ಎನ್ನುವುದು ಕಾಂಗ್ರೆಸ್‌ಗೆ (Congress) ಏನು ಬಂದಿಲ್ಲ. ಬಿಜೆಪಿಯವರು (BJP) ಹೇಳುತ್ತಾರೆ ಎಂದು ಎಲ್ಲದಕ್ಕೂ ಉತ್ತರ ಕೊಡುವುದಕ್ಕೆ ಆಗೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ; 12 ಸೆಕೆಂಡ್ ವೀಡಿಯೋ ಪರಿಶೀಲಿಸಿ ಕ್ರಮ: ಮಧು ಬಂಗಾರಪ್ಪ
ಪಹಲ್ಗಾಮ್‌ನಲ್ಲಿ ದಾಳಿ ನಡೆದಿತ್ತು, ಅದರ ಮುನ್ಸೂಚನೆ ಮೋದಿಗೆ ಗೊತ್ತಿರಲಿಲ್ವಾ? ಅಲ್ಲಿ ಜನರು ತೀರಿಕೊಂಡರು, ಇಲ್ಲಿ ಬಿಜೆಪಿಯವರು ವಿಜೃಂಭಿಸುತ್ತಿದ್ದಾರೆ. ಯಾಕೆ ಈ ದಾಳಿ ಆಯ್ತು ಎಂದು ಒಬ್ಬ ಬಿಜೆಪಿಯವನಾದ್ರೂ ಕೇಳಿದ್ದಾನಾ? ಮಣಿಪುರ ಗಲಾಟೆಯಾದಾಗ ಬಿಜೆಪಿಗರ ಗಂಟಲು ಹೋಗಿತ್ತಂತಾ? ಈಗ ಮದ್ದೂರಿನ ವಿಚಾರಕ್ಕೆ ಬಿಜೆಪಿಗರು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಶಾಸಕ ಸಂಗಮೇಶ್ ಹೇಳಿಕೆ ವಿಚಾರವಾಗಿ, ದೇವೇಗೌಡರು ಇದೆ ಹೇಳಿಕೆ ಕೊಟ್ಟಿದ್ದರು. ಬೇಡ ಅಂತ ಹೇಳೋದಿಲ್ಲ. ಅವರಿಗೆ ಏನು ಬೇಕು ಅದನ್ನು ಮಾಡಿಕೊಳ್ಳಲಿ. ಮೋದಿ ಪ್ರಧಾನಿ ಆದ್ರೆ ದೇಶ ಬಿಡುವುದಾಗಿ ಹೇಳಿದ್ದರು. ಈಗ ಒಬ್ಬರಿಗೊಬ್ಬರು ಕೈ ಹಾಕಿಕೊಂಡು ಓಡಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹಾಸನ (Hassan) ದುರಂತ ವಿಚಾರವಾಗಿ, ಅದರ ಬಗ್ಗೆ ಸಂಪೂರ್ಣ ಮಾಹಿತಿ ನನಗೆ ಗೊತ್ತಿಲ್ಲ. ಈ ರೀತಿ ಆಗಬಾರದಿತ್ತು, ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ಮೃತರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ಕೊಡಲಿ. ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ ಈ ರೀತಿ ಆದರೆ ನೋವಾಗುತ್ತದೆ. ಈ ರೀತಿ ಘಟನೆ ಆದಾಗ ಹಿನ್ನೆಲೆ ಏನಾದರೂ ಒಂದು ಇರುತ್ತದೆ. ಅದು ಏನು ಎಂದು ನೋಡ್ಬೇಕು. ಕಾನೂನು ಬಾಹಿರ ಇದ್ರೆ ಕ್ರಮ ಆಗಲಿದೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ತಂದೆ ತಾಯಿ ಹೊಟ್ಟೆಯಲ್ಲಿ ಭಾರತೀಯನಾಗಿ ಮತ್ತೆ ಹುಟ್ಟಬೇಕು ಅನ್ನೋದು ನನ್ನಾಸೆ: ಮಧು ಬಂಗಾರಪ್ಪ