ನಾನು ನಿಮ್ಮನ್ನೇ ಹಿಂಬಾಲಿಸುತ್ತಿದ್ದೇನೆ ಮೇಡಂ- ಸುಷ್ಮಾ ನಿವೃತ್ತಿ ವೇಳೆ ಪತಿ ಮಾಡಿದ್ದ ಟ್ವೀಟ್ ಈಗ ವೈರಲ್

Public TV
2 Min Read
sushma swaraj husband 2

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನಿಧನರಾಗಿದ್ದರಿಂದ ದೇಶಾದ್ಯಂತ ಜನತೆ ಕಂಬನಿ ಮಿಡಿಯುತ್ತಿದ್ದರೆ, ಇದೇ ಸಂದರ್ಭದಲ್ಲಿ ಸುಷ್ಮಾ ರಾಜಕೀಯ ನಿವೃತ್ತಿ ವೇಳೆ ಅವರ ಪತಿ ಮಾಡಿದ ಟ್ವೀಟ್ ವೈರಲ್ ಆಗುತ್ತಿದೆ.

ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆರೋಗ್ಯ ಸಮಸ್ಯೆಯ ಕಾರಣಗಳಿಂದ ನವೆಂಬರ್ 2018ರಲ್ಲಿ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸುತ್ತಿದ್ದಂತೆ ಸುಷ್ಮಾ ಸ್ವರಾಜ್ ಅವರ ಪತಿ ಹಾಗೂ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ ಅವರು ಸುಷ್ಮಾ ಅವರಿಗೆ ವಿಶಿಷ್ಟ ರೀತಿಯಲ್ಲಿ ಧನ್ಯವಾದ ತಿಳಿಸಿದ್ದರು.

‘ಮೇಡಂ- ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ನಿಮ್ಮ ನಿರ್ಧಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದನ್ನು ಕೇಳಿದ ನನಗೆ ಮಿಲ್ಕಾ ಸಿಂಗ್ ಓಡುವುದನ್ನು ನಿಲ್ಲಿಸಿದ ನೆನಪು ಮರುಕಳಿಸಿದಂತಾಗಿದೆ, ಧನ್ಯವಾದಗಳು ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಸುಷ್ಮಾ ಅವರ ಚುನಾವಣಾ ರಾಜಕೀಯದ ವೃತ್ತಿಜೀವನವನ್ನು ಗುರುತಿಸಿದ್ದರು.

sushma swaraj husband 3

ಸುಷ್ಮಾ ಸ್ವರಾಜ್ ಅವರು ದೀರ್ಘ ಕಾಲದ ವರೆಗೆ ಮಧ್ಯ ಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ, 2016ರಲ್ಲಿ ಡಯಾಬಿಟೀಸ್ ಮತ್ತು ಕಿಡ್ನಿ ಟ್ರಾನ್ಸ್‍ಪ್ಲಾಂಟೇಶನ್ ಗೆ ಒಳಗಾಗಿದ್ದರು. ನಂತರ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು.

ಈ ವೇಳೆ ಸುಷ್ಮಾ ಸ್ವರಾಜ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡುವ ಮೂಲಕ ಅವರ ನಾಲ್ಕು ದಶಕಗಳ ರಾಜಕೀಯ ಜೀವನವನ್ನು ಅವರ ಪತಿ ಉಲ್ಲೇಖಿಸಿದ್ದರು.

ನಿಮ್ಮ ಈ ಮ್ಯಾರಥಾನ್ 1977ರಿಂದಲೂ ನಡೆಯುತ್ತಿದ್ದು, ಸುಮಾರು 41 ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಓಡಿದ್ದೀರಿ. ಒಟ್ಟು 11 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, ಹಾಗೆ ನೋಡಿದರೆ ನೀವು ಎಲ್ಲ ಚುನಾವಣೆಗಳಲ್ಲಿಯೂ ಸ್ಪರ್ಧಿಸುತ್ತಿದ್ದಿರಿ. ಆದರೆ, 1991 ಹಾಗೂ 2004ರಲ್ಲಿ ಎರಡು ಬಾರಿ ಪಕ್ಷ ನಿಮ್ಮನ್ನು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ. ನಾಲ್ಕು ಬಾರಿ ಲೋಕಸಭೆಗೆ, ಮೂರು ರಾಜ್ಯಸಭೆಗೆ ಹಾಗೂ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೀರಿ. ನೀವು 25 ವರ್ಷದವರಿದ್ದಾಗಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೀರಿ. ಸುಮಾರು 41 ವರ್ಷಗಳ ಕಾಲ ಚುನಾವಣೆಯಲ್ಲಿ ಹೋರಾಡಿರುವುದು ಬಹುದೊಡ್ಡ ಮ್ಯಾರಥಾನ್ ಆಗಿದೆ ಎಂದು ಟ್ವೀಟ್ ಮಾಡಿದ್ದರು.

sushma swaraj love 6

ಮೇಡಂ ನಾನು ಕಳೆದ 46 ವರ್ಷಗಳಿಂದ ನಿಮ್ಮ ಹಿಂದೆ ಓಡುತ್ತಿದ್ದೇನೆ. ನಾನಿನ್ನು ಕೇವಲ 19 ವರ್ಷದವನಲ್ಲ, ನಾನೂ ಸಹ ಉಸಿರಾಟದಿಂದ ಹೊರಗುಳಿಯುತ್ತಿದ್ದೇನೆ, ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದರು.

ಸುಷ್ಮಾ ಸ್ವರಾಜ್ ಅವರನ್ನು ಕೆಲವರು ಟ್ರೋಲ್ ಮಾಡಿದಾಗ ಸಹ ಸ್ವರಾಜ್ ಕೌಶಲ್ ಅವರು ತಮ್ಮ ಹೆಂಡತಿಯನ್ನು ಸಮರ್ಥಿಸಿಕೊಂಡಿದ್ದರು. ಮುಸ್ಲಿಮರನ್ನು ಸಮಾಧಾನ ಪಡಿಸಿದ್ದಕ್ಕೆ ಅವಳನ್ನು ಹೊಡೆಯಿರಿ ಎಂದು ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೌಶಲ್ ಅವರು, ನಾವು ಅವಳನ್ನು ಆರಾಧಿಸುತ್ತೇವೆ. ದಯವಿಟ್ಟು ಅಂತಹ ಪದಗಳನ್ನು ಬಳಸಬೇಡಿ. ನಾವು ಕಾನೂನು ಮತ್ತು ರಾಜಕೀಯದಲ್ಲಿ ಮೊದಲ ತಲೆಮಾರಿನವರು. ಅವಳ ಜೀವಕ್ಕಿಂತ ಹೆಚ್ಚೇನು ಆಗುವುದು ಬೇಡವೆಂದು ಪ್ರಾರ್ಥಿಸುತ್ತವೆ ಎಂದು ಪೋಸ್ಟ್ ಮಾಡಿ ಟ್ರೋಲ್ ಮಾಡುವವರಿಗೆ ತಕ್ಕ ಉತ್ತರ ನೀಡಿದ್ದರು.

sushma swaraj husband 3 1

ಸುಷ್ಮಾ ಸ್ವರಾಜ್ ಹಾಗೂ ಕೌಶಲ್ ಇಬ್ಬರೂ ಸಹ ಅನೇಕ ಪ್ರಥಮಗಳಿಗೆ ಸಾಕ್ಷಿಯಾಗಿದ್ದಾರೆ. ಸುಷ್ಮಾ ಸ್ವರಾಜ್ ಅವರು ತಮ್ಮ 27ನೇ ವಯಸ್ಸಿನಲ್ಲಿ ಜನತಾ ಪಕ್ಷದ ರಾಜ್ಯಾಧ್ಯಕ್ಷೆಯಾಗಿರುವ ಹೆಗ್ಗಳಿಕೆ ಹೊಂದಿದ್ದರೆ, ಸ್ವರಾಜ್ ಕೌಶಲ್ ಅವರು 34ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಎಂಬ ಗೌರವ ಹೊಂದಿದ್ದಾರೆ. ಅಲ್ಲದೆ, ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೌಶಲ್ ಅವರು ತಮ್ಮ 37ನೇ ವಯಸ್ಸಿನಲ್ಲಿ ರಾಜ್ಯಪಾಲರಾಗುವ ಮೂಲಕ ದೇಶದ ಕಿರಿಯ ರಾಜ್ಯಪಾಲರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *