ಬೆಂಗಳೂರು: ಚುನಾವಣೆ ಹೊತ್ತಲ್ಲಿ ಮಾಡಾಳ್ ಲಂಚ ಪ್ರಕರಣ ಬಿಜೆಪಿಯನ್ನು ಕಂಗಾಲಾಗಿಸಿದೆ. ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಚನ್ನಗಿರಿಯ ಬಿಜೆಪಿ ಶಾಸಕ (BJP MLA) ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪುತ್ರ ಮಾಡಾಳ್ ಪ್ರಶಾಂತ್ (Prashanth Madal) ಇತರೆ ನಾಲ್ವರ ಜೊತೆ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮನೆ, ಕಚೇರಿಗಳಲ್ಲಿ 8 ಕೋಟಿಗೂ ಹೆಚ್ಚು ಹಣ ಸಿಕ್ಕಿದೆ. ಇದು ಲೋಕಾಯುಕ್ತ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬೇಟೆ ಎಂಬುದು ಗಮನಾರ್ಹ.
ಗುರುವಾರ ಸಂಜೆ ಕ್ರೆಸೆಂಟ್ ರಸ್ತೆಯಲ್ಲಿರುವ ಎಂ ಸ್ಟುಡಿಯೋದಲ್ಲಿ ಲಂಚದ ಹಣದ ಸಮೇತ ಪ್ರಶಾಂತ್ ಸಿಕ್ಕಿಬಿದ್ದಿದ್ದರು. ತಡರಾತ್ರಿವರೆಗೂ ಅಲ್ಲಿ ಶೋಧ ನಡೆದಿತ್ತು. ಮತ್ತೊಂದು ಕಡೆ ಸಂಜಯ್‍ನಗರದ ಕೆಎಂವಿ ಮ್ಯಾನ್ಶನ್ ಮೇಲೆಯೂ ರೇಡ್ ನಡೆದು, ಬರೋಬ್ಬರಿ 18 ಗಂಟೆಗಳ ಕಾಲ ಶೋಧಕಾರ್ಯ ನಡೆಯಿತು.
Advertisement
ಈ ವೇಳೆ ಬಯಲಾಗಿದ್ದು ಬ್ಯಾಗ್‍ಗಟ್ಟಲೇ ಹಣ. ಚಿನ್ನ, ಮತ್ತೊಂದು ಕಡೆ ಶಾಸಕರ ದಾವಣಗೆರೆಯ ನಿವಾಸದಲ್ಲೂ ಲೋಕಾಯುಕ್ತ ರೇಡ್ ನಡೆಯಿತು. ಮಧ್ಯಾಹ್ನದ ಹೊತ್ತಿಗೆ ಲೋಕಾಯುಕ್ತ ಕೋರ್ಟ್ ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.
Advertisement
Advertisement
ರೇಡ್ ಹೇಗಾಯ್ತು?
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ, ರಾಸಾಯನಿಕ ಪೂರೈಕೆಗೆ ಸಂಬಂಧಿಸಿದ ಗುತ್ತಿಗೆಯ ಕಾರ್ಯಾದೇಶ ನೀಡಲು 81 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕೆಮಿಕ್ಸಿಲ್ ಕಾರ್ಪೋರೇಷನ್‍ನ ಶ್ರೇಯಸ್ ಕಶ್ಯಪ್ ಲೋಕಾಯುಕ್ತ ಮೊರೆ ಹೋಗಿದ್ದರು. ಈ ಬೆನ್ನಲ್ಲೇ ಎಫ್‍ಐಆರ್ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಪಕ್ಕಾ ಪ್ಲಾನ್‍ನೊಂದಿಗೆ ರೇಡ್ ಮಾಡಿ, 40 ಲಕ್ಷ ಲಂಚ ಪಡೆಯುತ್ತಿದ್ದ ಲಂಚಾಸುರ ಪ್ರಶಾಂತ್‍ರನ್ನು ಖೆಡ್ಡಾಗೆ ಕೆಡವಿದ್ದಾರೆ. ಬೋನಸ್ ಎಂಬಂತೆ ಇದೇ ಪ್ರಶಾಂತ್‍ಗೆ ಲಂಚ ಕೊಡಲು ಬಂದಿದ್ದ ಇನ್ನಿಬ್ಬರು ಕೂಡ ನಗದು ಸಮೇತ ಸಿಕ್ಕಿಬಿದ್ದಿದ್ದಾರೆ.
Advertisement
ಆರೋಪಿಗಳ್ಯಾರು?
ಎ1 – ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿ ಶಾಸಕ – ನಾಪತ್ತೆ
ಎ2 – ಮಾಡಾಳ್ ಪ್ರಶಾಂತ್, ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ – ಅರೆಸ್ಟ್
ಎ3 – ಎಸ್ ಸುರೇಂದ್ರ, ಅಕೌಂಟೆಂಟ್ – ಅರೆಸ್ಟ್ (ಲಂಚ ಪಡೆಯಲು ಇದ್ದವರು)
ಎ4 – ಸಿದ್ದೇಶ್@ ಸುನೀಲ್, ಪ್ರಶಾಂತ್ ಸಂಬಂಧಿ – ಅರೆಸ್ಟ್ (ಲಂಚ ಪಡೆಯಲು ಇದ್ದವರು)
ಎ5 – ಆಲ್ಬೇರ್ಟ್ ನಿಕೋಲ್, ಕರ್ನಾಟಕ ಆರೋಮಾಸ್ ಕಂಪನಿ ಉದ್ಯೋಗಿ – ಅರೆಸ್ಟ್ (ಲಂಚ ಕೊಡಲು ಬಂದಿದ್ದವರು – 90 ಲಕ್ಷ ರೂ. ನಗದು)
ಎ6 – ಹೆಚ್. ಗಂಗಾಧರಯ್ಯ, ಕರ್ನಾಟಕ ಆರೋಮಾಸ್ ಕಂಪನಿ ಉದ್ಯೋಗಿ – ಅರೆಸ್ಟ್ (ಲಂಚ ಕೊಡಲು ಬಂದಿದ್ದವರು – 72 ಲಕ್ಷ ರೂ. ನಗದು)
ಲಂಚಕಾಂಡ – ಸಿಕ್ಕಿದೆಷ್ಟು?
ಎಂ. ಸ್ಟುಡಿಯೋ, ಕ್ರೆಸೆಂಟ್ ರಸ್ತೆ – 2.02 ಕೋಟಿ ರೂ. ನಗದು
ಶಾಸಕರ ನಿವಾಸ, ಸಂಜಯನಗರ – 6.10 ಕೋಟಿ ರೂ. ನಗದು
ಮಾಡಾಳ್ ಬಳಿ ಸಿಕ್ಕಿದ ಒಟ್ಟು ಹಣ – 8.12 ಕೋಟಿ ರೂ. ನಗದು
ಶಾಸಕರ ನಿವಾಸ, ಸಂಜಯನಗರ – ಒಂದೂವರೆ ಕೆಜಿ ಚಿನ್ನ
ಆರೋಪಗಳೇನು?
ಮಾಡಾಳ್ ವಿರೂಪಾಕ್ಷಪ್ಪ ಅಧ್ಯಕ್ಷರಾದ ಮೇಲೆ ಸಿಕ್ಕ ಸಿಕ್ಕವರಿಗೆ ಟೆಂಡರ್ ನೀಡಿದ್ದು, ಎಲೆಕ್ಷನ್ ಸನಿಹದಲ್ಲಿ ಹೊಸದಾಗಿ 15 ಕಚ್ಚಾವಸ್ತುಗಳ ಸರಬರಾಜಿಗೆ ಟೆಂಡರ್ ಕರೆಯಲಾಗಿತ್ತು. ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ದರ ನಮೂದಿಸಿ ಗೋಲ್ಮಾಲ್ ಮಾಡಲಾಗಿದೆ. ಈ 15 ವಸ್ತುಗಳ ಟೆಂಡರ್‌ನಲ್ಲಿ 139 ಕೋಟಿ ರೂ. ಅಕ್ರಮ ನಡೆದಿದೆ. ಸ್ಯಾಂಪಲ್ ಟೆಸ್ಟಿಂಗ್‍ಗೆ ಅವಕಾಶವೇ ಇಲ್ಲದಂತೆ ಟೆಂಡರ್ ಪಾಸ್ ಆಗಿದೆ. ಇದನ್ನೂ ಓದಿ: ಪುತ್ರ ಸಿಕ್ಕಿಬಿದ್ದ ಬೆನ್ನಲ್ಲೇ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ನಾಪತ್ತೆ
ಎಷ್ಟು ವ್ಯತ್ಯಾಸ?
1 ಕೆಜಿ ಸ್ಯಾಂಡ್ರೋನಲನ್‌ಗೆ ಮಾರುಕಟ್ಟೆ ದರ 1,500 ರೂ. ಇದ್ದರೆ ಗುತ್ತಿಗೆದಾರರರು 2,625 ರೂ. ದರ ನಮೂದಿಸಿದ್ದರು. 1075 ರೂ. ಹೆಚ್ಚ ದರ ನಿಗದಿ ಮಾಡಲಾಗಿತ್ತು.
1ಕೆಜಿ ಐಬಿಸಿಹೆಚ್ ಮಾರುಕಟ್ಟೆ ದರ 500 ರೂ. ಇದ್ದರೆ 727 ರೂ. ಹೆಚ್ಚಳ ಮಾಡಿ 1227 ರೂ. ದರವನ್ನು ನಿಗದಿ ಮಾಡಲಾಗಿತ್ತು.