ಕನ್ನಡದ ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಸದ್ಯ ಮದುವೆಯ ಸಂಭ್ರಮದಲ್ಲಿದ್ದಾರೆ. ಸೌತ್‌ನ ಸ್ಟಾರ್ ನಟ, ನಟಿಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡೋದ್ರಲ್ಲಿ ಬ್ಯುಸಿಯಿದ್ದ ನಟಿ ಈಗ ಕುಟುಂಬ ಸಮೇತ ಪಿಎಂ ಆಫೀಸ್‌ಗೆ ಭೇಟಿ ನೀಡಿ ನರೇಂದ್ರ ಮೋದಿಗೆ (Narendra Modi) ಮದುವೆ ಆಮಂತ್ರಣ (Wedding Invite) ಪತ್ರಿಕೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಗೆಳೆಯನ ದ್ರೋಹದ ಬಗ್ಗೆ ನೋವಿನ ಸಂಗತಿ ಬಿಚ್ಚಿಟ್ಟ ನಿವೇತಾ ಪೇತುರಾಜ್
ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಭೇಟಿ ಮಾಡಿ ನಮ್ಮ ಮದುವೆಗೆ ಅವರನ್ನು ಆಹ್ವಾನಿಸಿದ್ದು ಎಂತಹ ಸೌಭಾಗ್ಯ. ಧನ್ಯವಾದಗಳು ತುಂಬಾ ಆತ್ಮೀಯ ಮತ್ತು ಸ್ವಾಗತಾರ್ಹ ಎಂದು ನಟಿ ಬರೆದುಕೊಂಡಿದ್ದಾರೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನಿಮ್ಮ ಅಮೂಲ್ಯ ಸಮಯವನ್ನು ನಮ್ಮೊಂದಿಗೆ ಕಳೆದಿದ್ದೀರಿ. ನಿಜವಾಗಿಯೂ ನಿಮ್ಮ ಬಗ್ಗೆ ಹೆಚ್ಚು ಗೌರವವಿದೆ. ಇಂತಹ ಕ್ಷಣ ಸಾಧ್ಯ ಮಾಡಿದ ಅಪ್ಪ ಶರತ್ ಕುಮಾರ್ ಮತ್ತು ಅಮ್ಮ ರಾಧಿಕಾ ಶರತ್ ಕುಮಾರ್‌ಗೆ ಧನ್ಯವಾದಗಳು ಎಂದು ಮಾಣಿಕ್ಯ ನಟಿ ವರಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ವರಲಕ್ಷ್ಮಿ ಮತ್ತು ಉದ್ಯಮಿ ನಿಕೋಲಾಯ್ ಮದುವೆ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಟಿಯ ನಿವಾಸದಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿದೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ ದಂಪತಿ, ರವಿತೇಜ, ತಮಿಳು ನಟ ಸಿದ್ಧಾರ್ಥ್, ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಸಮಂತಾ, ಕನ್ನಡದ ನಟ ಸುದೀಪ್ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ.
ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ನಿಶ್ಚಿತಾರ್ಥ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.
ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.