ಬೆಂಗಳೂರು: ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಬಿಇ, ಬಿಆರ್ಕ್, ಎಂ.ಟೆಕ್, ಎಂ. ಆರ್ಕ್, ಎಂಬಿಎ, ಮತ್ತು ಎಂಸಿಎಯ ಘಟಿಕೋತ್ಸವ ಸಮಾರಂಭದಲ್ಲಿ ಚೆನ್ನೈನ ಅಣ್ಣಾ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ಸೂರಪ್ಪ ಪದವಿ ಪ್ರದಾನ ಮಾಡಿದರು.
13 ಬಿಇ , 45 ವಿವಿಧ ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 1,200 ವಿದ್ಯಾರ್ಥಿಗಳಿಗೆ ಪದವಿ ಪಡೆದರು. ಇದರಲ್ಲಿ ವಿವಿಧ ವಿಭಾಗದಲ್ಲಿ 29 ವಿದ್ಯಾರ್ಥಿಗಳಿಗೆ ಚಿನ್ನ, 16 ಬೆಳ್ಳಿ, 25 ಕಂಚಿನ ಪದಕ ಪಡೆದರು.
Advertisement
Advertisement
ಸಮಾರಂಭದಲ್ಲಿ ಡಾ. ಎಂ.ಕೆ. ಸೂರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣದಲ್ಲಿ ದೇಶ ಹಿಂದುಳಿದಿದ್ದು, ಇದರ ಕಡೆ ದೇಶ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾಗಿದೆ. ಅಮೆರಿಕ, ಚೀನಾ, ಜಪಾನ್ ರಾಷ್ಟ್ರಗಳು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿವೆ. ಪಾಕಿಸ್ತಾನ, ಶ್ರೀಲಂಕಾಗಿಂತ ಭಾರತ ತಂತ್ರಜ್ಞಾನದಲ್ಲಿ ಮುಂದುವರಿದಿದ್ದು ಇನ್ನು ಹೆಚ್ಚು ಆವಿಷ್ಕಾರಕ್ಕೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
Advertisement
ಕೇರಳ, ಕರ್ನಾಟಕ, ಚೆನ್ನೈನಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದ ಮನುಕುಲ ತತ್ತರಿಸಿ ಹೋಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ವಿಜ್ಞಾನ- ತಂತ್ರಜ್ಞಾನದ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕಳೆದ 30 ವರ್ಷಗಳಿಂದೆ ಕಾಲರಾ, ಮಲೇರಿಯಾದಂತಹ ರೋಗಗಳಿಂದ ಮಾನವ ಬಳಲುತ್ತಿದ್ದ. ಇಂದು ನಿಫಾ, ಡೆಂಗ್ಯೂ ಸೇರಿದಂತೆ ವಿವಿಧ ಮಾರಕ ರೋಗಗಳಿಗೆ ಸಂಶೋಧನೆಯಿಂದ ಪರಿಹಾರ ಕಂಡುಕೊಳ್ಳಲಾಗಿದೆ. ಹೀಗಾಗಿ ಮುಂದುವರಿಯುತ್ತಿರುವ ಕಾಲಘಟ್ಟದಲ್ಲಿ ಇಂದಿನ ಯುವಕರು ಹೊಸ ಆವಿಷ್ಕಾರಗಳಿಗೆ ಹೆಚ್ಚು ಗಮನ ಹರಿಸಿ ದೇಶ ಅಭಿವೃದ್ಧಿಯತ್ತ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
Advertisement
ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಲವು ತಂತ್ರಜ್ಞಾನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು, ಹೊಸ ಹೊಸ ಆವಿಷ್ಕಾರಗಳಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡುತ್ತಿದೆ. ಅಲ್ಲದೆ, ದೇಶ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಹಾಗೂ ಆರ್ಥಿಕಾಭಿವೃದ್ಧಿಗೆ ಆವಿಷ್ಕಾರ ಪ್ರಮುಖ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಗೋಕುಲ ಅಣ್ಣಾ ಎಜುಕೇಷನ್ ಫೌಂಡೆಷನ್ ಅಧ್ಯಕ್ಷ ಡಾ. ಎಂ.ಆರ್ ಜಯರಾಮ್, ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಾದ ಎಂ.ಆರ್. ರಾಮಯ್ಯ, ಎಂ.ಆರ್. ಸೀತಾರಾಮ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಬಿ.ಎಸ್.ರಾಮಪ್ರಸಾದ್, ಪ್ರಾಂಶುಪಾಲರಾದ ಡಾ. ಎನ್.ವಿ.ಆರ್. ನಾಯ್ಡು ಸೇರಿದಂತೆ ಇತರರು ಇದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv