– ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ 56 ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು
ದಾವಣಗೆರೆ: ಮಂಗಳೂರಲ್ಲಿ (Mangaluru) ನಡೆದ ಅಶ್ರಫ್ ಹತ್ಯೆ ಕೇಸಲ್ಲಿ 20 ಜನರ ಬಂಧನವಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಕೇಸಲ್ಲಿ ಇನ್ನೂ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ (M. P. Renukacharya) ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಮ್ಮ ದೇವಸ್ಥಾನಗಳಿಗೆ ಹೋದರೆ ಪೂಜೆ ಭಜನೆ ಇರುತ್ತದೆ. ಮದರಸಗಳಲ್ಲಿ ಮಕ್ಕಳಿಗೆ, ಹಿಂದೂಗಳ ಮೇಲೆ ಕಲ್ಲು ಹೊಡೆಯೋದು, ಕೊಲೆ ಮಾಡೋದು ಕಲಿಸಿ ಕೊಡ್ತಾರೆ. ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವವರನ್ನು ಗುಂಡಿಕ್ಕಿ ಹತ್ಯೆ ಮಾಡ್ಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಎಸ್‌ಡಿಪಿಐ, ಪಿಎಫ್ಐ ಮೇಲಿನ ಕೇಸ್ ವಾಪಸ್ ಪಡೆದು ಅಪರಾಧಕ್ಕೆ ಬೆಂಬಲ: ಸಿಎಂ ವಿರುದ್ಧ ಸಿ.ಟಿ ರವಿ ಕೆಂಡ
ಹಿಂದೂ ಕಾರ್ಯಕರ್ತನನ್ನು ಮುಸ್ಲಿಂ ಜಿಹಾದಿಗಳು ಕೊಲೆ ಮಾಡಿದ್ದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರಿಗೂ ಸಹ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ಇದೇ ಮಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಅಶ್ರಫ್ ಎನ್ನುವನು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಕ್ಕೆ, ಭಾರತ ಮಾತೆಯ ಮಕ್ಕಳಿಗೆ ನೋವಾಗಿ ಹಲ್ಲೆ ಮಾಡಿದ್ದರು. ಈ ವೇಳೆ ಆತ ಸಾವನ್ನಪ್ಪಿದ್ದ. ಆ ಪ್ರಕರಣವನ್ನೂ ತನಿಖೆ ಮಾಡಲಿ, ಆದರೆ ಈಗ ಹಿಂದೂ ಕಾರ್ಯಕರ್ತನನ್ನು ಕೊಲೆಯಾಗಿ ಇಷ್ಟೋತ್ತಾದರೂ ಬಂಧನ ಮಾಡಿಲ್ಲ. ಸಾರ್ವಜನಿಕವಾಗಿ ಕೊಲೆ ಮಾಡಿದ್ರೂ ಯಾವುದೇ ಕ್ರಮ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಹಿಂದೆ ಸಿದ್ದರಾಮಯ್ಯರ ಅಧಿಕಾರ ಅವಧಿಯಲ್ಲಿ 56 ಹಿಂದೂ ಕಾರ್ಯಕರ್ತರು ಹತ್ಯೆಯಾಗಿತ್ತು. ಪಾಕಿಸ್ತಾನ ಪೋಷಿತ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಇದರಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹಿಂದೂ ಕಾರ್ಯಕರ್ತನನ್ನು ಕೊಲೆ ಮಾಡಿದ್ರೂ ನಾವು ಸುಮ್ಮನಿರಬೇಕಾ? ನಾವು ಹಿಂದೂಗಳು ಯಾರು ಕೈಗೆ ಬಳೆ ಹಾಕಿಕೊಂಡು ಕೈ ಕಟ್ಟಿ ಕೂತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ
 

 
		 
		 
		 
		 
		
 
		 
		 
		 
		