ಬೆಂಗಳೂರು: ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಂ ಇಂಡಿಯಾವು (Team India) ಅಫ್ಘಾನಿಸ್ತಾನ (Afghanistan) ವಿರುದ್ಧದ ಸರಣಿಯ ಮೂರನೇ ಟಿ20 ಪಂದ್ಯಕ್ಕೆ ತಯಾರಾಗಿದೆ. ಬುಧವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಅಂತಿಮ ಪಂದ್ಯದಲ್ಲಿ ಅಫ್ಘನ್ ತಂಡದ ವಿರುದ್ಧ ಟೀಂ ಇಂಡಿಯಾ ಸೆಣಸಲಿದೆ.
2019ರಿಂದ ಭಾರತದಲ್ಲಿ ಆಡಿದ ಟಿ20 ಸರಣಿಯಲ್ಲಿ ಒಂದರಲ್ಲೂ ಭಾರತ ಸರಣಿಯನ್ನು ಸೋತಿಲ್ಲ. ಆಡಿದ 15 ಸರಣಿಗಳಲ್ಲಿ 13 ಸರಣಿ ವಶಪಡಿಸಿಕೊಂಡಿದೆ. ಉಳಿದ ಎರಡು ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಇನ್ನೂ ಮೂರನೇ ಟಿ20ಯಲ್ಲಿ ಭಾರತ ಗೆದ್ದರೆ, ಟೀಮ್ ಇಂಡಿಯಾ ಪರ ನಾಯಕನಾಗಿ 41 ಟಿ20 ಪಂದ್ಯಗಳನ್ನು ಗೆದ್ದ ಧೋನಿಯವರ ದಾಖಲೆಯನ್ನು ರೋಹಿತ್ ಮುರಿಯಲಿದ್ದಾರೆ. ಇದನ್ನೂ ಓದಿ: ಕೂಚ್ ಬೆಹಾರ್ ಟ್ರೋಫಿ ಫೈನಲ್‍ನಲ್ಲಿ ಯುವಿ ದಾಖಲೆ ಮುರಿದ ಕರ್ನಾಟಕದ ಓಪನರ್ ಪ್ರಖರ್ ಚತುರ್ವೇದಿ
Advertisement
Advertisement
ಈ ಹಿಂದೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 160 ರನ್‍ಗಳ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿಕೊಂಡಿತ್ತು. ಅಲ್ಲದೇ 6 ರನ್‍ಗಳಿಂದ ಗೆದ್ದಿತ್ತು.
Advertisement
Advertisement
ಪಂದ್ಯವು ಸಂಜೆ 7 ಗಂಟೆಗೆ ಆರಂಭವಾಗಲಿದ್ದು, ಆ ಸಮಯದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಮತ್ತು ಮುಕ್ತಾಯದ ಹಂತದಲ್ಲಿ 22 ಡಿಗ್ರಿಗೆ ಇಳಿಯುವ ಸಾಧ್ಯತೆ ಇದೆ. ಇನ್ನೂ ನಗರದಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನದ ವೇಳೆಗೆ ಮೋಡಕವಿದ ವಾತಾವರಣ ಇರಲಿದ್ದು, ಮಳೆ ಬರುವ ಲಕ್ಷಣ ಇಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಯಶಸ್ಸಿನ ಶ್ರೇಯಸ್ಸು ಮಹಿ ಅಣ್ಣನಿಗೆ, CSKಗೆ ಸಲ್ಲಬೇಕು – ಚೆನ್ನೈಗೆ ಕ್ರೆಡಿಟ್ ಕೊಟ್ಟ ಶಿವಂ ದುಬೆ