ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 2 ವರ್ಷಗಳಲ್ಲಿ ಬೃಹತ್ ಕೈಗಾರಿಕೆ ಇಲಾಖೆಯಲ್ಲಿ 6 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (M B Patil) ತಿಳಿಸಿದರು.
ಪ್ರಗತಿಯ ಪಥದಲ್ಲಿ ಕೈಗಾರಿಕಾ ಕರ್ನಾಟಕ: ನಾವೀನ್ಯತೆ, ಹೂಡಿಕೆ, ಉದ್ಯೋಗದ ಬಲವಾದ ಅಡಿಪಾಯ
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷಗಳು ಕಳೆದಿವೆ.— ಇದು ಉದ್ದೇಶ ಮತ್ತು ಪ್ರಗತಿಯಿಂದ ರೂಪಿತವಾದ ಒಂದು ಪಯಣ.
ಈ ಮೈಲಿಗಲ್ಲನ್ನು ಗುರುತಿಸಲು, ‘ಪ್ರಗತಿ ಪಥದ ಮುಂದಣ… pic.twitter.com/bE2hWjT6JY
— M B Patil (@MBPatil) June 13, 2025
ವಿಧಾನಸೌಧದಲ್ಲಿ ಇಲಾಖೆಯ 2 ವರ್ಷಗಳ ಸಾಧನೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ವೇಳೆ, 2 ವರ್ಷಗಳಲ್ಲಿ ರಾಜ್ಯದಲ್ಲಿ 6,57,660 ಕೋಟಿ ರೂ. ಹೂಡಿಕೆ ಆಗಿದೆ. 115 ಒಡಂಬಡಿಕೆಗಳು ಆಗಿದೆ. ಇದರಿಂದ 2,32,771 ಉದ್ಯೋಗ ಸೃಷ್ಟಿ ಆಗಲಿದೆ. ಏಕಗವಾಕ್ಷಿ ಅನುಮೋದನೆ ಸಮಿತಿಯೂ 906 ಯೋಜನೆಗೆ ಒಪ್ಪಿಗೆ ನೀಡಿದೆ. ಇದರಿಂದ 1,13,200 ಕೋಟಿ ರೂ. ಹೂಡಿಕೆ ನಿರೀಕ್ಷೆ ಇದೆ. 2,23,982 ಉದ್ಯೋಗ ಸೃಷ್ಟಿ ಆಗಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಜಾತಿಗಣತಿಗೆ 10 ವರ್ಷ ಆಗಿದ್ದಕ್ಕೆ ಹೊಸ ಜಾತಿಗಣತಿ: ಎಂ.ಬಿ ಪಾಟೀಲ್
ಫೆಬ್ರವರಿಯಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದ್ದೆವು. 3,250 ಉದ್ಯಮಿಗಳು ಭಾಗಿಯಾಗಿದ್ರು. 1,200 ಕಂಪನಿಗಳು ಹೂಡಿಕೆ ಆಸಕ್ತಿ ತೋರಿಸಿವೆ. 6,23,845 ಕೋಟಿ ಹೂಡಿಕೆ ಒಪ್ಪಿಗೆ ಆಗಿದೆ. 4,03,533 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಹೊಸ ಕೈಗಾರಿಕಾ ನೀತಿ 2025-30 ಘೋಷಣೆ ಮಾಡಲಾಗಿದೆ. ಹೊಸ ಕೈಗಾರಿಕೆ ನೀತಿ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿದೆ. 5 ವರ್ಷಗಳಲ್ಲಿ 7.50 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಣೆ ಮಾಡುವುದು ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು. ಇದನ್ನೂ ಓದಿ: ಬೋಯಿಂಗ್ ನಿರ್ಮಿತ ವಾಯುಸೇನೆಯ ಅಪಾಚೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ಪರಿಸರ ಸ್ನೇಹಿ ಇಂಧನ ನೀತಿ 2024-29 ಜಾರಿ ಮಾಡಲಾಗಿದೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿ ಆಗಲಿದೆ. 50 ಸಾವಿರ ಹೂಡಿಕೆ ಆಕರ್ಷಣೆಯ ಗುರಿ ಇದೆ. ಕ್ವೀನ್ ಸಿಟಿ ವಿನೂತನ ಯೋಜನೆ ಅನುಷ್ಠಾನ ಮಾಡಲಾಗ್ತಿದೆ. 2000ಕ್ಕೂ ಹೆಚ್ಚು ಎಕ್ರೆಯಲ್ಲಿ ಈ ಕ್ವೀನ್ ಸಿಟಿ ಬರಲಿದೆ. 40 ಸಾವಿರ ಹೂಡಿಕೆ ಆಗಲಿದೆ. 80 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಮಾನ ದುರಂತ: ವಿಮಾನಯಾನ ಸಚಿವರ ರಾಜೀನಾಮೆಗೆ ಸಚಿವ ಈಶ್ವರ ಖಂಡ್ರೆ ಒತ್ತಾಯ
ಚಿಕ್ಕಬಳ್ಳಾಪುರದಲ್ಲಿ ಭಾರತದ ಮೊದಲ ಡೀಪ್ ಟೆಕ್ ಪಾರ್ಕ್ ನಿರ್ಮಾಣ ಆಗ್ತಿದೆ. 3 ಸಾವಿರಕ್ಕೂ ಹೆಚ್ಚು ಎಕ್ರೆಯಲ್ಲಿ ಇದು ನಿರ್ಮಾಣ ಆಗಲಿದೆ. ಇದರಲ್ಲಿ ಬಾಹ್ಯಾಕಾಶ ತಂತ್ರಜ್ಞಾನ, ಡೋಮ್ ತಯಾರಿಕೆ, ಸೇರಿ ಹಲವು ತಂತ್ರಜ್ಞಾನ ಇರಲಿದೆ. ಕರ್ನಾಟಕದಲ್ಲಿ ಫಾಕ್ಸ್ ಕಾನ್ 22 ಸಾವಿರಕ್ಕೂ ಹೆಚ್ಚು ಕೋಟಿ ರೂ. ಹೂಡಿಕೆ ಮಾಡಿದೆ. ಶೆವ್ರಾನ್ 8 ಸಾವಿರಕ್ಕೂ ಹೆಚ್ಚು ಕೋಟಿ ಹೂಡಿಕೆ. ಹೀರೋ ಎನರ್ಜಸ್ 11 ಸಾವಿರ ಕೋಟಿ ರೂ., ಟಾಟಾ ಸಮೂಹ 3,330 ಸಾವಿರ ಕೋಟಿ ರೂ., ಸನ್ಸೇರಾ 2,100 ಸಾವಿರ ಕೋಟಿ ರೂ., ಜಿಂದಾಲ್ 4 ಸಾವಿರಕ್ಕೂ ಹೆಚ್ಚು ಕೋಟಿ ಹೂಡಿಕೆ ಮಾಡಿದೆ. ಕರ್ನಾಟಕ ಎಂಆರ್‌ಒ ಹಬ್ ಆಗ್ತಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಲಾಗ್ತಿದೆ. ಇನ್ವೆಸ್ಟ್ ಕರ್ನಾಟಕ ಫೋರಂ ಪುನರ್ ರಚನೆ ಮಾಡಲಾಗಿದೆ. ಸೆಕ್ಟರ್ ವೈಸ್ ಇಂಡಸ್ಟ್ರಿ ತಜ್ಞರನ್ನ ನೇಮಕ ಮಾಡಿಕೊಳ್ಳಲಾಗ್ತಿದೆ. ನೇಮಕಾತಿ ಪ್ರಕ್ರಿಯೆ ಆಗ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೈಸೂರು ಸ್ಯಾಂಡಲ್ ಸೋಪ್ ಬ್ಯುಸಿನೆಸ್ ಹೆಚ್ಚಿಸಲು ತಮನ್ನಾ ಆಯ್ಕೆ: ಎಂ.ಬಿ ಪಾಟೀಲ್
ಕೆಐಎಡಿಬಿಯಲ್ಲೂ ಹಲವು ಕಾರ್ಯಕ್ರಮ ಆಗಿದೆ. ಚಿತ್ರದುರ್ಗದಲ್ಲಿ ಡ್ರೋನ್ ಪಾರ್ಕ್ ಮಾಡ್ತಿದ್ದೇವೆ.ಹುಬ್ಬಳ್ಳಿಯಲ್ಲಿ ಸ್ಟಾರ್ಟ್ ಅಪ್ ಪಾರ್ಕ್ ಆಗ್ತಿದೆ. ಸ್ವಿಫ್ಟ್ ಸಿಟಿ ಪ್ರಾರಂಭ ಮಾಡೋ ಕೆಲಸ ಮಾಡ್ತಿದ್ದೇವೆ. ಬಳ್ಳಾರಿಯಲ್ಲಿ ಜೀನ್ಸ್ ಕ್ಲಸ್ಟರ್ ಪ್ರಾರಂಭ ಮಾಡ್ತಿದ್ದೇವೆ ಅಂತ ತಿಳಿಸಿದರು.
ಎಂಎಸ್‌ಐಎಲ್‌ನಲ್ಲಿ ಇವತ್ತು ಉತ್ತಮವಾಗಿ ನಡೆಯುತ್ತಿದೆ. ಪ್ರವಾಸಿ ಪ್ಯಾಕೇಜ್ ಮಾಡ್ತಿದ್ದೇವೆ. ಶೀಘ್ರವೇ ಇ-ಕಾಮರ್ಸ್ ಸೇವೆ ಪ್ರಾರಂಭ ಮಾಡುತ್ತೇವೆ. ಎಂಎಸ್‌ಐಎಲ್‌ನಲ್ಲಿ ಚಿಟ್ ಫಂಡ್‌ಅನ್ನು ಆನ್‌ಲೈನ್‌ನಲ್ಲಿ ಮಾಡೋ ವ್ಯವಸ್ಥೆ ಜಾರಿ ಮಾಡ್ತಿದ್ದೇವೆ. 5 ವರ್ಷಗಳಲ್ಲಿ 10 ಸಾವಿರ ಕೋಟಿ ರೂ. ಬಿಸಿನೆಸ್ ಮಾಡುವ ಟಾರ್ಗೆಟ್ ಇದೆ. ಕೆಐಎಡಿಬಿ ಮೈಲುಗಲ್ಲು ಸಾಧಿಸಿದೆ. 2028ರ ವೇಳೆಗೆ 5 ಸಾವಿರ ಗುರಿ ಹಾಕಿಕೊಳ್ಳಲಾಗಿದೆ. ಉತ್ಕೃಷ್ಟ ಪರ್ಫ್ಯೂಮ್ ತಯಾರು ಮಾಡ್ತಿದ್ದೇವೆ. ಕೆಐಎಡಿಬಿ ಗತವೈಭವ ಮರುಗಳಿಸುವ ಕೆಲಸ ಮಾಡ್ತಿದ್ದೇವೆ. ಈ ತಿಂಗಳು 30 ಕೋಟಿ ರೂ. ವಹಿವಾಟು ಜಾಸ್ತಿ ಆಗ್ತಿದೆ ಎಂದು ಹೇಳಿದರು. ಇದನ್ನೂ ಓದಿ: 8 ಸೆಕೆಂಡ್ ನಂತ್ರ ವಿಮಾನ ಹಾರಾಟದಲ್ಲಿ ಅಸಹಜತೆ ಪತ್ತೆ; 7-12 ಸೆಕೆಂಡ್ ವರೆಗಿನ ಹಾರಾಟದ ಮೇಲೆ ತನಿಖೆ
ಹುಬ್ಬಳ್ಳಿ, ಬೆಳಗಾವಿ ಏರ್‌ಪೋರ್ಟ್ ಅನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಪ್ರಯತ್ನ ಮಾಡ್ತಿದ್ದೇವೆ. ಶೀಘ್ರವೇ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ರಾಜ್ಯದ 9 ರೈಲು ಮಾರ್ಗಗಳನ್ನ ಆದಷ್ಟು ಬೇಗ ಮುಗಿಸಲು ಕ್ರಮ ಕೈಗೊಳ್ಳಲಾಗುವುದು. ರೈಲ್ವೆ ಸಚಿವರ ಜೊತೆ ಸಭೆ ಮಾಡಿದ್ದೇವೆ. ರೈಲ್ವೆ ದುರಸ್ಥಿ ಕಾರ್ಯ ಕೂಡ ವೇಗವಾಗಿ ಆಗುತ್ತಿದೆ. ರೈಲ್ವೆ ಮೂಲಭೂತ ಸೌಕರ್ಯಗಳ ನಿಗಮದಲ್ಲಿ ಹೆಚ್ಚುವರಿ ಸಬರ್ಬನ್ ರೈಲು ಪ್ರಾರಂಭಕ್ಕೆ ಮುಂದಾಗಿದ್ದೇವೆ. ಶಿವಮೊಗ್ಗ ವಿಮಾನ ನಿಲ್ದಾಣ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು. ಇದನ್ನೂ ಓದಿ: ನ್ಯಾಯಾಧೀಶರ ಮುಂದೆ ಹಾಜರಾದ ವಿನಯ್ ಕುಲಕರ್ಣಿ – ಶಾಸಕನನ್ನು ವಶಕ್ಕೆ ಪಡೆದ ಸಿಬಿಐ
ವಿಜಯಪುರ ವಿಮಾನ ನಿಲ್ದಾಣದ ಕೆಲಸ ಬಹುತೇಕ ಮುಕ್ತಾಯ ಆಗಿದೆ. ಆದಷ್ಟು ಬೇಗ ಪ್ರಾರಂಭ ಆಗಲಿದೆ. ಮೈಸೂರು ಏರ್‌ಪೋರ್ಟ್ ರನ್ ವೇ ವಿಸ್ತರಣೆ ಮಾಡುವ ಕೆಲಸ ಆಗ್ತಿದೆ. ಹಾಸನ, ರಾಯಚೂರು, ಬಳ್ಳಾರಿ ಏರ್‌ಪೋರ್ಟ್ ಕಾಮಗಾರಿಗಳು ವೇಗವಾಗಿ ನಡೆಯುತ್ತಿದೆ. 3 ಹೆಲಿಪೋರ್ಟ್ ನಿರ್ಮಾಣದ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕಾರವಾರ ಸಿವಿಲ್ ಎನ್ ಕ್ಲೈವ್‌ಗೆ ಭೂಸ್ವಾಧೀನ ಆಗ್ತಿದೆ. ಬೆಂಗಳೂರಿನಲ್ಲಿ ಎರಡನೇ ಏರ್‌ಪೋರ್ಟ್ ಆಗಲಿದೆ. ಈಗಾಗಲೇ ಕೇಂದ್ರದ ತಂಡ ಪರಿಶೀಲನೆ ಮಾಡಿದೆ. ಕೇಂದ್ರ ಇನ್ನು ನಮಗೆ ಜಾಗ ಫೈನಲ್ ಮಾಡಿಲ್ಲ. ಶೀಘ್ರವೇ ಸಿಎಂ ಜೊತೆ ಕೇಂದ್ರ ಸಚಿವರ ಭೇಟಿ ಮಾಡಿ ಜಾಗ ಫೈನಲ್ ಮಾಡಲು ಮನವಿ ಮಾಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದಿದ್ದ ಗಗನಸಖಿ ಮಗಳು – ಬಾರದ ಲೋಕಕ್ಕೆ ಹೋದ್ಳು..!
ಬಲ್ಡೋಟ ಕಂಪನಿಯಿಂದ ಸಮಸ್ಯೆ ಆದರೆ ಬೇರೆ ಕಡೆ ಶಿಫ್ಟ್ ಮಾಡ್ತೇವೆ. ಸ್ವಾಮೀಜಿ ಜೊತೆಗೂ ಮಾತಾಡಿ ಕ್ರಮ ಕೈಗೊಳ್ಳುತ್ತೇವೆ. ಮೂರನೇ ಪಾರ್ಟಿ ಸರ್ವೆ ಮಾಡಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಇದರ ಜೊತೆಗೆ ಎಲ್ಲಾ ಜಿಲ್ಲೆಗಳ ಎಲ್ಲಾ ಕೈಗಾರಿಕೆಗಳ ಪೊಲ್ಯೂಷನ್ ರಿವ್ಯೂ ಮಾಡೋಕೆ ಇಲಾಖೆ ನಿರ್ಧಾರ ಮಾಡಲಾಗಿದೆ. ಎಕ್ಸ್‌ಪರ್ಟ್‌ಗಳಿಂದ ರಿವ್ಯೂ ಮಾಡಿಸುತ್ತೇವೆ. ಯಾವುದಾದರು ಕೈಗಾರಿಕೆ ಸಮಸ್ಯೆ ಇದ್ದರೆ ಅದರ ಬಗ್ಗೆ ಕ್ರಮ ತೆಗೆದುಕೊಳ್ತೇವೆ. ಕೊಪ್ಪಳದಿಂದಲೇ ಸರ್ವೆ ಪ್ರಾರಂಭ ಮಾಡ್ತೀವೆ ಅಂತ ಹೇಳಿದರು.