– ಜೀವಕಿಲ್ಲಿ ಜೀವ ಬೇಟೆ ಪಾಪಿ ಯಾರು ಇಲ್ಲಿ…?
ಚಿತ್ರೀಕರಣ ಶುರುವಾದಾಗಿನಿಂದಲೂ ಹರಿಪ್ರಿಯಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಸದ್ದು ಮಾಡುತ್ತಲೇ ಸಾಗಿ ಬಂದಿದೆ. ಇದೀಗ ಈ ಚಿತ್ರದ ಲಿರಿಕಲ್ ವೀಡಿಯೋ ಒಂದು ಬಿಡುಗಡೆಯಾಗಿದೆ. ಪಿಆರ್‍ಕೆ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡನ್ನು ಬಿಡುಗಡೆಗೊಳಿಸಿರೋ ರೋರಿಂಗ್ ಸ್ಟಾರ್ ಶ್ರೀಮುರುಳಿ ಮನದುಂಬಿ ಮಾತಾಡಿದ್ದಾರೆ. ಚಿತ್ರತಂಡವನ್ನು ಮೆಚ್ಚಿಕೊಳ್ಳುತ್ತಲೇ ಶುಭ ಕೋರಿದ್ದಾರೆ.
Advertisement
ವಿಶೇಷವೆಂದರೆ, ಈಗ ಬಿಡುಗಡೆಯಾಗಿರೋ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬರೆದಿರೋದು ಟಗರು ಡಾಲಿ ಖ್ಯಾತಿಯ ಧನಂಜಯ್. `ಜೀವಕಿಲ್ಲಿ ಜೀವ ಬೇಟೆ ಪಾಪಿ ಯಾರು ಇಲ್ಲಿ. ಕೊಂದು ತಿನ್ನೊ ರೂಲೆ ಉಂಟು ಪಾಪ ಯಾವುದಿಲ್ಲಿ’ ಎಂಬ ಈ ಹಾಡಿಗೆ ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾರ್ತಿಕ್, ಚೆನ್ನಾಜಿ ರಾವ್, ನಾರಾಯಣ್ ಶರ್ಮಾ ಮತ್ತು ಮಿಥುನ್ ಮುಕುಂದನ್ ಈ ಹಾಡಿಗೆ ಧ್ವನಿಯಾಗಿದ್ದಾರೆ.
Advertisement
Advertisement
ದಿಶಾ ಎಂಟರ್ ಟೈನ್ಮೆಂಟ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚಿತ್ರ ಡಾಟರ್ ಆಫ್ ಪಾರ್ವತಮ್ಮ. ಇದರ ಈ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ ಧನಂಜಯ್ ಅವರ ಬಹುಮುಖ ಪ್ರತಿಭೆಯನ್ನು ಕೊಂಡಾಡಿದ್ದಾರೆ. ತಮಗೆ ಡಾಲಿಯ ನಟನೆ ಇಷ್ಟ ಅಂದಿರೋ ಶ್ರೀಮುರುಳಿ, ಡಾಟರ್ ಆಫ್ ಪಾರ್ವತಮ್ಮನಾಗಿ ನಟಿಸಿರೋ ಹರಿಪ್ರಿಯಾರ ನಟನೆಯನ್ನೂ ಮೆಚ್ಚಿ ಮಾತಾಡಿದ್ದಾರೆ.
Advertisement
ಈ ಹಾಡು ಪಿಆರ್ ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದಾಕ್ಷಣದಿಂದಲೇ ವ್ಯಾಪಕ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಧನಂಜಯ್ ಅವರು ಬದುಕಿನ ದ್ವಂದ್ವ, ವಾಸ್ತವಗಳನ್ನು ಕಟ್ಟಿ ಕೊಡುವಂಥಾ ಸಾಲುಗಳ ಮೂಲಕವೇ ಈ ಹಾಡನ್ನು ವಿಶೇಷವಾಗಿಸಿದ್ದಾರೆ.
ಬಹುಶಃ ಈ ಹಾಡು ಕೇಳಿದ ಯಾರೇ ಆದರೂ ಧನಂಜಯ್ ಅವರ ಟ್ಯಾಲೆಂಟಿನ ಬಗ್ಗೆ ಅಚ್ಚರಿ ಸೂಚಿಸದಿರಲು ಸಾಧ್ಯವಿಲ್ಲ. ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಅವರಂತೂ ಈ ಹಾಡನ್ನು ವಿಭಿನ್ನ ರಾಗಗಳ ಪಟ್ಟಿನಿಂದ ಮತ್ತೂ ವಿಶೇಷವಾಗಿಸಿದ್ದಾರೆ.
ಒಟ್ಟಾರೆಯಾಗಿ ಹೇಳೋದಾದರೆ ಶಂಕರ್ ಜೆ ನಿರ್ದೇಶನದ ಈ ಚಿತ್ರವೀಗ ಈ ಹಾಡಿನ ಮೂಲಕ ಮತ್ತಷ್ಟು ಮಂದಿಯನ್ನು ಸೆಳೆದುಕೊಂಡಿದೆ. ಈ ಹಾಡೇ ಇಡೀ ಸಿನಿಮಾ ವಿಭಿನ್ನ ಕಂಟೆಂಟು ಹೊಂದಿದೆ ಎಂಬ ಸೂಚನೆಯನ್ನೂ ರವಾನಿಸುವಂತಿದೆ.
ಹರಿಪ್ರಿಯಾ ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋ ಡಾಟರ್ ಆಫ್ ಪಾರ್ವತಮ್ಮನಿಗೆ ಈ ಲಿರಿಕಲ್ ವೀಡಿಯೋ ಸಾಂಗಿನಿಂದ ಮತ್ತಷ್ಟು ಫ್ಯಾನ್ಸ್ ಹುಟ್ಟಿಕೊಳ್ಳೋದಂತೂ ಗ್ಯಾರೆಂಟಿ!