ಹುಬ್ಬಳ್ಳಿ: ಐಷಾರಾಮಿ ಕಾರುಗಳನ್ನು ಮಂಗ ಮಾಯ ಮಾಡುತ್ತಿದ್ದ 7 ಜನರ ಗ್ಯಾಂಗ್ ನ್ನು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರ ತಂಡ ಬಂಧಿಸಿದ್ದಾರೆ.
Advertisement
7 ಕುಖ್ಯಾತ ಕಾರು ವಂಚಕರು ಕರ್ನಾಟಕ ರಾಜ್ಯಾದ್ಯಂತ ಬಾಡಿಗೆಗೆ ಎಂದು ಕಾರುಗಳನ್ನು ಪಡೆದುಕೊಂಡು, ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಮಂಗಳೂರಿನಿಂದ ಬಾಡಿಗೆಗೆ ಅಂತ ಪ್ರೀಮಿಯಂ ಕಾರುಗಳನ್ನು ಪಡೆದು ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಇವರು, ಇಲ್ಲಿಗೆ ಬಂದ ನಂತರ ಆ ಎಲ್ಲಾ ಕಾರುಗಳಿಗೆ ನಕಲಿ ದಾಖಲೆ ತಯಾರಿಸಿ ಕಡಿಮೆ ಹಣಕ್ಕೆ ಅಡವಿಟ್ಟು ಹಣ ಪಡೆಯುತ್ತಿದ್ದರು. ಹೀಗೆ ಮೋಸದಿಂದ ನಂಬಿಸಿ ಕಾರಗಳನ್ನು ಅಡವಿಟ್ಟು ಹಣ ತಗೆದುಕೊಂಡು ಪರಾರಿಯಾಗುತ್ತಿದ್ದರು. ಇದನ್ನೂ ಓದಿ: ಹೊಸ ಮನೆಗೆ ರಶ್ಮಿಕಾ ಶಿಫ್ಟ್ – ಮತ್ತೊಂದು ಅಪಾರ್ಟ್‍ಮೆಂಟ್ ಖರೀದಿ?
Advertisement
Advertisement
ಕೆಲವು ದಿನಗಳಿಂದ ಹುಬ್ಬಳ್ಳಿ-ಧಾರವಾಡ ಶಹರದಲ್ಲಿ ತಮ್ಮ ದಂಧೆಯಲ್ಲಿ ತೊಡಗಿದ್ದರು. ಹುಬ್ಬಳ್ಳಿಯ ಒರ್ವನ ಬಳಿ ಇವರು ಕಾರು ಅಡವಿಟ್ಟು ಹಣ ಪಡೆದಿದ್ದ ಪ್ರಕರಣ ದಾಖಲಾದ ನಂತರ ಪೊಲೀಸರು ತನಿಖೆ ಕೈಗೊಂಡಿದ್ದರು. ಸದ್ಯ ಆರೋಪಿಗಳಿಂದ 12 ವಿವಿಧ ಕಂಪನಿಗಳ ಕಾರು, 1 ಬೈಕ್ ಹಾಗೂ 22,7000 ರೂ. ನಗದು ಸೇರಿದಂತೆ ಒಟ್ಟು 50,27,000 ಮೌಲ್ಯದ ಸ್ವತ್ತು ರಿಕವರಿ ಮಾಡಿದ್ದಾರೆ. ಇದನ್ನೂ ಓದಿ: ಹೆಚ್‌ಐವಿ ಪೀಡಿತ ಮಹಿಳೆಯ ಕಿಡ್ನಿಯಿಂದ 10 ಕೆಜಿ ಗೆಡ್ಡೆ ತೆಗೆದ ದೆಹಲಿ ವೈದ್ಯರು