ಲಕ್ನೊ: ಐಷಾರಾಮಿ ಕಾರೊಂದು (Luxury Car) ಯುವತಿಯ ದ್ವಿಚಕ್ರ ವಾಹನಕ್ಕೆ ಗುದ್ದಿ, ಕೆಲ ಮೀಟರ್‌ಗಳ ದೂರ ಎಳೆದೊಯ್ದು ಭೀರಕವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ (Uttar Pradesh) ನೋಯ್ಡಾದಲ್ಲಿ ನಡೆದಿದೆ.
ದೀಪಿಕಾ ತ್ರಿಪಾಠಿ (24) ಮೃತಪಟ್ಟ ಯುವತಿ. ನೋಯ್ಡಾದ ಸೆಕ್ಟರ್ 96ನಲ್ಲಿ ಡಿವೈಡರ್ ನಿಂದ ತಮ್ಮ ಕಚೇರಿಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಶರವೇಗದಲ್ಲಿ ಬಂದ ಜಾಗ್ವಾರ್ ಕಾರು (Jaguar Car) ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಕೆಲದೂರದ ವರೆಗೆ ಎಳೆದೊಯ್ದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರಿನ ಚಾಲಕ ಹರಿಯಾಣ ಮೂಲದ ಸ್ಯಾಮ್ಯುಯೆಲ್ ಆಂಡ್ರ‍್ಯೂ ಪೈಸ್ಟರ್ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್
ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ (Hospital) ಕರೆದೊಯ್ದರು, ಆದರೆ ಆಕೆ ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ನಂತರ ತಿಳಿಸಿದ್ದಾರೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ
ದೀಪಿಕಾ ಅವರ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.