ಕಾಮ ಪ್ರಚೋದಕ ಕಥೆ, ಲಕ್ಷ್ಮಿ ದೇವತೆ ಫೋಟೋ : ಏಕ್ತಾ ಕಪೂರ್ ವಿರುದ್ಧ ಗರಂ

Public TV
2 Min Read
Gandhi Bath 3

ಹಿಂದಿ ಕಿರುತೆರೆಯ ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ (Ekta Kapoor) ಮತ್ತೊಂದು ವಿವಾದವನ್ನು (Controversy) ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ಓಟಿಟಿಯ ಪ್ರಸಾರಕ್ಕಾಗಿ ನಿರ್ಮಾಣವಾಗುತ್ತಿರುವ ವೆಬ್ ಸರಣಿಯ (Web Series) ಪೋಸ್ಟರ್ ನಲ್ಲಿ ಹಿಂದೂ ದೇವತೆಯನ್ನು  ಅವಹೇಳನ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ನೆಟ್ಟಿಗರು ಅವರ ವಿರುದ್ಧ ಕಿಡಿಕಾರಿದ್ದಾರೆ. ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದಾರೆ.

Gandhi Bath 2

ಸದ್ಯ ಏಕ್ತಾ ಕಪೂರ್ ಮಾಲೀಕತ್ವದ ಆಲ್ಟ್ ಬಾಲಾಜಿ ಟೆಲಿಫಿಲ್ಮ್ಸ್ ‘ಗಾಂಡಿ ಬಾತ್’ (Gandhi Bath) ಎನ್ನುವ ವೆಬ್ ಸರಣಿಯನ್ನು ಆರಂಭಿಸಿದೆ. ಇದೀಗ 6ನೇ ಸರಣಿ ಸಿದ್ಧವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ವೊಂದನ್ನು ರಿಲೀಸ್ ಮಾಡಲಾಗಿದೆ. ಆ ಪೋಸ್ಟರ್‌ನಲ್ಲಿ ಲಕ್ಷ್ಮಿ ದೇವತೆಗೆ (Goddess Lakshmi) ಹೋಲುವಂತಹ ಮಹಿಳೆ ಇದ್ದಾಳೆ. ಆ ಮಹಿಳೆಯ ಮೂಲಕ ಲಕ್ಷ್ಮಿ ದೇವತೆಯನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ekta kapoor 2

ಗಾಂಡಿಬಾತ್ ವೆಬ್ ಸರಣಿಯ ಥಂಬ್ ನೈಲ್ ಪೋಸ್ಟರ್‌ನಲ್ಲಿ ಸೊಂಟದ ಬಳಿ ಕಮಲದ ಹೂವು, ಎರಡು ಬದಿಗಳಲ್ಲಿ ನವಿಲುಗಳೊಂದಿಗೆ ಇರುವ ಮಹಿಳೆ ಬಾಯಿ ಮೇಲೆ ಬೆರಳಿಟ್ಟು ‘ಶ್’ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ. ಈ ಪೋಸ್ಟರ್ ವಿವಾದಕ್ಕೀಡಾಗಿದೆ. ಇದೊಂದು ಗ್ರಾಮೀಣ ಭಾರತದ ಕಾಮ ಪ್ರಚೋದಕ ಕಥೆಯನ್ನು ಒಳಗೊಂಡಿರುವ ವೆಬ್ ಸರಣಿಯಾಗಿದ್ದರಿಂದ ಕೆಲವರನ್ನು ಕಣ್ಣು ಕೆಂಪಗಾಗಿಸಿದೆ.

Gandhi Bath 1

ಈ ಹಿಂದೆ ಏಕ್ತಾ ಕಪೂರ್ (Ekta Kapoor) ನಿರ್ಮಾಣದ ವೆಬ್ ಸರಣಿ ಬಗ್ಗೆ ಸುಪ್ರೀಂ ಕೋರ್ಟ್ (Court) ಅಸಮಾಧಾನ ವ್ಯಕ್ತಪಡಿಸಿತ್ತು. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದು ತರಾಟೆಗೆ ತಗೆದುಕೊಂಡಿತ್ತು. ಏಕ್ತಾ ಕಪೂರ್ ನಿರ್ಮಾಣದಲ್ಲಿ ಈ ವೆಬ್ ಸರಣಿ ಮೂಡಿ ಬರುತ್ತಿದ್ದು, ಯುವ ಜನತೆಯ ಮನಸ್ಸನ್ನು ಹಾಳು ಮಾಡುವಂತಹ ವಿಷಯವನ್ನು ಅದು ಒಳಗೊಂಡಿದೆ ಎನ್ನಲಾಗುತ್ತಿದೆ.

 

ಇದೇ ವೆಬ್ ಸರಣಿಯ‍ಲ್ಲಿ ಯೋಧರಿಗೆ ಅವಮಾನ ಮಾಡುವಂತಹ ಸರಣಿಯೊಂದು ಪ್ರಸಾರವಾಗಿದ್ದು, ಅದರಲ್ಲಿ ಯೋಧರಿಗೆ ಮತ್ತು ಅವರ ಪತ್ನಿಗೆ ಅಪಮಾನ ಮಾಡಲಾಗಿದೆ ಎಂದು ಬಿಹಾರದ ಮಾಜಿ ಯೋಧ ಶಂಭು ಕುಮಾರ್ ದೂರು ನೀಡಿದ್ದರು. ಯೋಧರು ಗಡಿ ಕಾಯುತ್ತಿದ್ದರೆ, ಅವರ ಪತ್ನಿ ಬೇರೆಯವರೊಂದಿಗೆ ಸಂಬಂಧ ಬೆಳೆಸಿರುತ್ತಾರೆ ಎಂಬ ಅರ್ಥ ಬರುವಂತಹ ಕಂಟೆಂಟ್ ಅನ್ನು ಅದು ಒಳಗೊಂಡಿತ್ತು. ಆಗ ಯೋಧರೊಬ್ಬರು ಕೋರ್ಟಿಗೆ ಮೊರೆ ಹೋಗಿದ್ದರು.

Share This Article