-ಸೂರ್ಯ ಗ್ರಹಣ ಗೋಚರವಾಗುವ ಸಮಯ
ಬೆಂಗಳೂರು: ನಾಳೆ ಅಂದ್ರೆ ಜನವರಿ 6ರಂದು ಸೂರ್ಯ ಗ್ರಹಣ ದಿನ. ಈಗಷ್ಟೇ 2018ನ್ನು ಬೀಳ್ಕೊಟ್ಟು ಹೊಸ ವರ್ಷಕ್ಕೆ ಕಾಲಿರಿಸಿದ್ದೇವೆ. 2018 ಕಳೆದು 2019ರ ಆರಂಭದಲ್ಲಿ ನಭೋಮಂಡಲದಲ್ಲಿ ವಿಸ್ಮಯ ಘಟನೆ ನಡೆಯಲಿದೆ.
ಜನವರಿ 6ನೇ ತಾರೀಖು ಭಾನುವಾರ ಸೂರ್ಯಗ್ರಹಣ ಸಂಭವಿಸಲಿದೆ. ಇದು ವರ್ಷದ ಪ್ರಪ್ರಥಮ ಗ್ರಹಣ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗಿನ ಜಾವ 5 ಗಂಟೆ 4 ನಿಮಿಷದಿಂದ ಬೆಳಗ್ಗೆ 9 ಗಂಟೆ 18 ನಿಮಿಷದವರೆಗೂ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಈ ಗ್ರಹಣ ಗೋಚರವಾಗಲ್ಲ. ಏಷ್ಯಾದ ಈಶಾನ್ಯ ಭಾಗದಲ್ಲಿ ಮತ್ತು ಫೆಸಿಫಿಕ್‍ನಲ್ಲಿ ಅಂದ್ರೆ ಚೀನಾ, ರಷ್ಯಾದ ಕೆಲ ಭಾಗಗಳಲ್ಲಿ, ಕೊರಿಯಾ, ತೈವಾನ್ ಹಾಗೂ ಜಪಾನ್ ದೇಶಗಳಲ್ಲಿ ಮಾತ್ರ ಗ್ರಹಣ ಗೋಚರವಾಗಲಿದೆ. ಇದನ್ನೂ ಓದಿ: ಭೂಮಿ ಮೇಲಾಗ್ತಿದೆಯಾ 2019ರ ಗ್ರಹಣದ ಎಫೆಕ್ಟ್..!?
Advertisement
Advertisement
2018 ಭೂಮಂಡಲದಲ್ಲಿ ಒಂದರ ಹಿಂದೆ ಒಂದು ಎಂಬಂತೆ (ಕೇರಳ ಪ್ರವಾಹ, ಕೊಡಗು ಪ್ರವಾಹ, ಇಂಡೋನೇಷ್ಯಾ ಸುನಾಮಿ ಇತ್ಯಾದಿ) ಅನಾಹುತಗಳು ಮೆರವಣಿಗೆ ನಡೆದಿದ್ದವು. ವರ್ಷದ ಆರಂಭದಿಂದ ಹಿಡಿದು 365 ದಿನವೂ ಮನುಕುಲ ಆತಂಕದಲ್ಲೇ ಬದುಕಿತ್ತು. ಗ್ರಹಣ ಒಂದು ಸಾಮಾನ್ಯ ನೈಸರ್ಗಿಕ ಘಟನೆಯಾಗಿರಬಹುದು. ವಿಜ್ಞಾನಿಗಳು ಗ್ರಹಣವನ್ನ ತುಂಬಾನೇ ಸಿಂಪಲ್ ಆಗಿ ಪರಿಗಣಿಸಲುಬಹುದು. ಗ್ರಹಣ ಕಾಲದ ಆಸುಪಾಸಿನಲ್ಲಿ ಭೂಮಿಯಲ್ಲಿ ನೈಸರ್ಗಿಕ ವಿಕೋಪಗಳು ನಡೆಯೋದು ಗ್ರಹಣದ ಎಫೆಕ್ಟ್ ಅನ್ನೋದು ಜೋತಿಷ್ಯಿಗಳ ವಾದ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಮನುಕುಲದ ಮೇಲೆ ಪರಿಣಾಮ ಬೀರುತ್ತೆ ಅಂತ ಹೇಳುತ್ತೆ. ರಾಶಿಗನುಸಾರವಾಗಿ ಅಥವಾ ವೈಯಕ್ತಿಕವಾಗಿಯೂ ಹಾಗೂ ಪ್ರಕೃತಿಯ ವೈಪರೀತ್ಯಕ್ಕೂ ಈ ಗ್ರಹಣ ಕಾರಣವಾಗುತ್ತೆ ಅಂತ ಜೋತಿಷ್ಯರು ಹೇಳುತ್ತಾರೆ. ಇದನ್ನೂ ಓದಿ: ನವ ವರ್ಷದ ಮೊದಲ ವಾರದಲ್ಲೇ ಗ್ರಹಣದ ಹಿಡಿತ-ಜನವರಿ ತಿಂಗಳಲ್ಲೇ ಡಬಲ್ ಗ್ರಹಣ
Advertisement
ಸೂರ್ಯಗ್ರಹಣ ಹೇಗೆ ಜರಗುತ್ತದೆ?
ಇದೊಂದು ನೈಸರ್ಗಿಕ ಸಹಜ ಪ್ರಕ್ರಿಯೆ. ಭೂಮಿ, ಸೂರ್ಯ ಹಾಗೂ ಚಂದ್ರನ ಮಧ್ಯೆ ನಡೆಯುವಂತಹ ಪ್ರಕ್ರಿಯೆ. ಸೂರ್ಯನ ಕಿರಣಗಳು ಭೂಮಂಡಲದ ಮೇಲೆ ಬೀಳದೆ ಇರೋದು ಸೂರ್ಯಗ್ರಹಣ. ಈ ಮೂರು ಗ್ರಹಗಳು ಒಂದೇ ರೇಖೆಗೆ ಸಮನಾಗಿ ಬಂದು ತಲುಪುತ್ತದೆ. ಈ ವೇಳೆ ಸೂರ್ಯನ ಕಿರಣಗಳು ಭೂಮಿಯನ್ನ ಸ್ಪರ್ಶಿಸದಂತೆ ಚಂದ್ರ ತಡೆಯುತ್ತದೆ. ಈ ಸಂದರ್ಭದಲ್ಲಿ ಸೂರ್ಯಗ್ರಹಣ ಉಂಟಾಗುತ್ತದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv