ಬೆಂಗಳೂರು: ಖಗೋಳದಲ್ಲಿ 152 ವರ್ಷಗಳ ಬಳಿಕ ಇವತ್ತು ಕಾಣಿಸಿಕೊಂಡ ಖಗ್ರಾಸ ಚಂದ್ರ ಗ್ರಹಣವನ್ನು ವಿಶ್ವದ ಜನ ಅಚ್ಚರಿ, ಆತಂಕದೊಂದಿಗೆ ಬೆರಗುಗಣ್ಣಿನಿಂದ ವೀಕ್ಷಿಸಿದ್ದಾರೆ.
ಚಂದ್ರನ ಮೂರು ಅವತಾರಗಳಾದ ನೀಲಿ, ದೈತ್ಯ ಹಾಗೂ ತಾಮ್ರವರ್ಣದ ಗ್ರಹಣ ಎಲ್ಲರಿಗೂ ಗೋಚರಿಸಿತು. ಉತ್ತರ ಅಮೆರಿಕ, ಹವಾಯ್, ಆಸ್ಟ್ರೇಲಿಯಾ, ಪಾಶ್ಚಿಮಾತ್ಯ ರಾಷ್ಟ್ರಗಳು, ರಷ್ಯಾದಲ್ಲಿ ಈ ಮೂರು ಗ್ರಹಣಗಳು ಕಾಣಿಸಿತು.
Advertisement
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಡಿದ ನೇರ ಪ್ರಸಾರವನ್ನು ವಿಶ್ವಾದ್ಯಂತ ಜನ ಟೀವಿ, ಆನ್‍ಲೈನ್‍ಗಳಲ್ಲಿ ನೋಡಿದ್ರು. ಭಾರತದಲ್ಲಿ ಮೊದಲಿಗೆ ಕೋಲ್ಕತ್ತಾದಲ್ಲಿ ಗ್ರಹಣ ಗೋಚರಿಸಿತು. ನಂತರ ಬೆಂಗಳೂರು, ದೆಹಲಿ, ಅಹಮದಾಬಾದ್, ಗುವಾಹಟಿ, ಭುವನೇಶ್ವರ್, ಹೈದರಾಬಾದ್, ಚೆನ್ನೈಗಳಲ್ಲಿ ಕಾಣಿಸಿತು. ಇದನ್ನೂ ಓದಿ:ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ
Advertisement
ಯಾವ ಸಮಯದಲ್ಲಿ ಏನಾಯ್ತು?
ಭಾಗಶ: ಚಂದ್ರಗ್ರಹಣ ಶುರು – 5.08.27
ಪೂರ್ಣ ಚಂದ್ರಗ್ರಹಣ ಆರಂಭ – 6.21.47
ಗರಿಷ್ಠ ಗ್ರಹಣ – 6.59.49
ಪೂರ್ಣ ಚಂದ್ರಗ್ರಹಣ ಕೊನೆ – 07.37.51
ಭಾಗಶಃ ಚಂದ್ರಗ್ರಹಣ ಅಂತ್ಯ -08.41.11
ಚಂದ್ರಗ್ರಹಣ ಕೊನೆ – 09.38.27
Advertisement
ಬೆಳಗಾವಿಯಲ್ಲಿ ಕಂಡು ಬಂದ ಚಂದ್ರಗ್ರಹಣ
Advertisement
ಬೆಂಗಳೂರಿನಲ್ಲಿ ಚಂದ್ರಗ್ರಹಣ:
ಸಂಜೆ 6.20ರ ಸುಮಾರಿಗೆ ಬೆಂಗಳೂರಿನಲ್ಲಿ ಚಂದ್ರಗ್ರಹಣ ಗೋಚರವಾಯಿತು. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಕಿಲೋಮೀಟರ್ ದೂರ ಕಿಕ್ಕಿರಿದು ಸೇರಿದ್ದ ಜನ ಕೌತುಕದಿಂದ ಗ್ರಹಣ ವೀಕ್ಷಿಸಿದರು. ಜನರ ಅನುಕೂಲಕ್ಕಾಗಿ 7 ಟೆಲಿಸ್ಕೋಪ್ ಜೊತೆಗೆ ಬೈನಾಕುಲರ್ ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಚಂದ್ರನ ಮೂರು ರೂಪಗಳನ್ನು ಕಂಡ ಜನ ಪುಳಕಿತರಾದರು.
ದೇವಾಲಯಗಳ ಬಾಗಿಲು ಬಂದ್:
ರಕ್ತಚಂದ್ರ ಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಆಗಿತ್ತು. ಬೆಂಗಳೂರಿನ ಗವಿ ಗಂಗಾಧರೇಶ್ವರ, ಉಡುಪಿಯ ಶ್ರೀಕೃಷ್ಣ, ಬಳ್ಳಾರಿ ಜಿಲ್ಲೆಯ ವಿಶ್ವವಿಖ್ಯಾತಿ ಹಂಪಿ ವಿರುಪಾಕ್ಷೇಶ್ವರ, ಉಜ್ಜನಿ ಮಠ, ಹಾಸನದ ಬೇಲೂರಿನ ಶ್ರೀ ಚನ್ನಕೆಶವ ದೇಗುಲ, ತಲಕಾವೇರಿಯ ಭಾಗಮಂಡಲದ ಭಾಗಮಂಡಲೇಶ್ವರ, ಸವದತ್ತಿ ಎಲ್ಲಮ್ಮ ಗುಡ್ಡ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ತುಮಕೂರಿನ ವೆಂಕಟೇಶ್ವರ ದೇವಸ್ಥಾನ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ದೇಗುಲಗಳು ಬಂದ್ ಆಗಿದ್ವು. ಗ್ರಹಣ ಮುಗಿದ ನಂತರ ದೇವಾಲಯಗಳ ಶುಚಿಕಾರ್ಯ ನಡೆಯಲಿದೆ.
ಭೂಕಂಪ ಆಯ್ತು:
ಗ್ರಹಣದಿಂದಾಗಿ ಗಂಡಾಂತರ ಏನೂ ಆಗಲ್ಲ ಎಂದು ವಿಜ್ಞಾನ ಲೋಕವಾದಿಸಿದರೂ ಕಾಕತಾಳೀಯ ಎಂಬಂತೆ ತಜಕಿಸ್ತಾನದಲ್ಲಿ ಭೂಕಂಪವಾಗಿದೆ. ಮಧ್ಯಾಹ್ನ 6.1ರಷ್ಟು ತೀವ್ರತೆ ದಾಖಲಾಗಿದೆ. ಇದರ ಪರಿಣಾಮ 12.40ರ ಸುಮಾರಿಗೆ ಕಾಶ್ಮೀರ ಕಣಿವೆ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಮಿ ನಡುಗಿದೆ. ಜನ ಆತಂಕಗೊಂಡು ಸುರಕ್ಷತೆಗಾಗಿ ಹೊರಗಡೆ ಬಂದಿದ್ದಾರೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಅಫ್ಘಾನಿಸ್ತಾನ-ತಜಕಿಸ್ತಾನದ ಗಡಿಭಾಗದಲ್ಲಿ ಹಿಂದೂಕುಶ್ ಪರ್ವತಗಳ ಅಡಿಯಲ್ಲಿ 190 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ. ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Why is it called a #SuperBlueBloodMoon?
????Supermoon – When the Moon is at or near its closest point to Earth
????Blue Moon – The second full moon in a month
????Blood Moon – The red tint Earth’s shadow casts on the Moon during a lunar eclipse
Watch it live: https://t.co/OduDuvJhUP pic.twitter.com/lezmdEVHHv
— NASA (@NASA) January 31, 2018
Thanks for joining us for the #SuperBlueBloodMoon! The next appearance of this trio in the U.S. — a total lunar eclipse, a “supermoon” and a “blue moon” — will be Jan. 31, 2037. Mark your calendars and join us again! Discover more about the Moon: https://t.co/Lcao0f89pJ pic.twitter.com/dB1hQE37Iw
— NASA (@NASA) January 31, 2018
LIVE NOW: Watch views of the #SuperBlueBloodMoon from multiple telescopes. Take a look: https://t.co/a5ScGDXhQu
— NASA (@NASA) January 31, 2018
LOOK: Nothing beats this view of the #SuperBlueBloodMoon as seen from Camalig in Albay. The red glow of lava flowing out of Mayon volcano matching the reddish orange moon. | via @raffytima pic.twitter.com/Nr7KY03P0l
— GMA News (@gmanews) January 31, 2018