ಉಡುಪಿ: ಇಂದು ಶತಮಾನದ ಚಂದ್ರಗ್ರಹಣ ಸಂಜೆ ನಡೆಯಲಿದೆ. ದೇವಸ್ಥಾನಗಳಲ್ಲಿ ಪೂಜಾ ಸಮಯ ಬದಲಾಗಿದೆ. ಖಗೋಳ ಶಾಸ್ತ್ರಜ್ಞರು ಆಗಸದಲ್ಲಾಗುವ ಕೌತುಕದ ಬಗ್ಗೆ ನಿಗಾ ಇಟ್ಟಿದ್ದಾರೆ. ಈ ನಡುವೆ ಉಡುಪಿ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಚಂದ್ರಗ್ರಹಣದ ಬಗ್ಗೆ ಮಾಹಿತಿ ನೀಡಿದ್ದಾರೆ.
ಚಂದ್ರಗ್ರಹಣ ಬಗ್ಗೆ ಬುಧವಾರ, ಹುಣ್ಣಿಮೆಯ ದಿನ ಸಂಜೆ 5.22ಗೆ ಚಂದ್ರನಿಗೆ ಪೂರ್ಣ ರಾಹು ಗ್ರಹಣವು ಆಶ್ಲೇಷಾ ನಕ್ಷತ್ರದಲ್ಲಿ ಸಂಭವಿಸಲಿದೆ. ಗ್ರಹಣ ಸ್ಪರ್ಶ- 5.22 ಆದರೆ ಮಧ್ಯ ಕಾಲ 7.04, ಉನ್ಮೀಲನ 7.42, ಗ್ರಹಣ ಮೋಕ್ಷ ಕಾಲ- 8.46ಕ್ಕೆ ಆಗಲಿದೆ. ಈ ಗ್ರಹಣದಿಂದ ಕರ್ಕ, ಸಿಂಹ, ಮೇಷ, ಧನುಸ್ಸು ರಾಶಿಗಳಿಗೆ ಪುಷ್ಯ, ಆಶ್ಲೇಷ, ಮಘ, ಜ್ಯೇಷ್ಠ, ರೇವತಿ, ನಕ್ಷತ್ರದವರಿಗೂ ಅನಿಷ್ಟವಿದೆ. ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
Advertisement
Advertisement
ಯಾವ ರಾಶಿಯಲ್ಲಿ ಗ್ರಹಣ ಹಿಡಿಯುತ್ತೋ ಆ ರಾಶಿಗೆ,ಅದರ ಮುಂದಿನ ರಾಶಿ ಮತ್ತು ಅದರ ತ್ರಿಕೋನ(ಸಿಂಹ, ಧನು, ಮೇಷ) ರಾಶಿಗಳಿಗೆ ಪ್ರಭಾವವಿದೆ. ಯಾವ ನಕ್ಷತ್ರದಲ್ಲಿ ಗ್ರಹಣ ಹಿಡಿಯುತ್ತದೆಯೋ ಅದರ ಅಧಿಪತಿಯ ಎಲ್ಲಾ ನಕ್ಷತ್ರಗಳಿಗೆ (ಆಶ್ಲೇಷಾ, ಜ್ಯೇಷ್ಠ, ರೇವತಿ, ಬುಧ ಅಧಿಪತಿ) ಪ್ರಭಾವ ಇರುತ್ತದೆ. ಇದು ಗ್ರಹಣ ಸಿದ್ಧಾಂತ.
Advertisement
ಅನಿಷ್ಟ ಫಲ ಏನು?
ಚಂದ್ರನು ಮನೋ ಕಾರಕ ಗ್ರಹ. ಈ ಗ್ರಹಣದಿಂದಾಗಿ ಇವನ ಬೆಳಕನ್ನು ಕೆಲ ಸಮಯದವರೆಗೆ ತಡೆ ಹಿಡಿದಂತಾಗುತ್ತದೆ .ಆಗ ಚಂದ್ರನ ಪ್ರಭಾವ ಅಷ್ಟು ಹೊತ್ತು ಇಲ್ಲದಂತಾಗಿ ಮನೋ ಖಿನ್ನತೆಗಳಾಗಬಹುದು. ಎಲ್ಲರಿಗೂ ಆಗುತ್ತದೆ ಎಂದಲ್ಲ ಅನೇಕರಿಗೆ ಖಿನ್ನತೆಗಳಿದ್ದರೆ ಅದು ಉಲ್ಭಣಿಸಬಹುದು. ಆ ಖಿನ್ನತೆ ರೋಗಗಳಿಗೂ ಕಾರಣವಾಗಬಹುದು. ಇದನ್ನೂ ಓದಿ: 150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ
Advertisement
ಮನೋ ಬಲ ಇರುವವರಿಗೂ ಬಲದ ಕುಸಿತವಾದರೂ ಅದು ಕೂಡಾ ದೋಷ ಪ್ರದವೇ ಆಗುತ್ತದೆ. ಅಲ್ಲದೆ ಗ್ರಹಣ ಸಂಭವಿಸಿದಾಗ ಇದು ಭೂಮಿಯ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ. ಭೂಮಿಯ ಮೇಲೆ ಪರಿಣಾಮ ಬಿದ್ದಾಗ ಅನುಭವಿಸುವವರು ನಾವಲ್ಲವೇ? ಅದರಲ್ಲೂ ವಿಶೇಷ ಪರಿಣಾಮ ಯಾರಿಗಂದರೆ, ಮೇಲೆ ತಿಳಿಸಿದ ರಾಶಿ, ನಕ್ಷತ್ರ ಜನಿತರಿಗೆ ಇರುತ್ತದೆ. ವಿಜ್ಞಾನಿಗಳಿಗೆ ಇದು ಕುತೂಹಲ ತರುವ ಖಗೋಳ ವೈಚಿತ್ರ್ಯ ಆದರೂ ಸಾಮಾನ್ಯರಿಗೆ ಇದು ಅನಿಷ್ಟವೇ ಆಗುತ್ತದೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗಲ್ಲ, ಸಮ್ಮಿಶ್ರ ಸರ್ಕಾರ ವರ್ಷದೊಳಗೆ ಬಿದ್ದೋಗುತ್ತೆ: ಉಡುಪಿ ಜ್ಯೋತಿಷಿ
ಈ ಅನಿಷ್ಟವನ್ನು ಹೇಗೆ ದೂರಮಾಡಬಹುದು?
`ಲಂಘನಂ ಪರಮೌಷಧಂ ಎಂಬಂತೆ ಆ ದಿನ ಮಧ್ಯಾಹ್ನ ಭೋಜನದ ನಂತರ ಉಪವಾಸ ಇರಬೇಕು. ಇದಕ್ಕಿಂತ ದೊಡ್ಡ ಪರಿಹಾರವಿಲ್ಲ. ಹೊಟ್ಟೆ ತುಂಬಿದ್ದರಲ್ಲವೇ ಅಧಿಕ ಪ್ರಸಂಗಕ್ಕಿಳಿಯುವುದು. ಹೊಟ್ಟೆ ಚುರು ಚುರು ಅಂದಾಗ ಮನುಷ್ಯ ಅಧಿಕ ಪ್ರಸಂಗ ಮಾಡಲು ಹೋಗುವುದಿಲ್ಲ.
ಉಪವಾಸ ಪರಿಹಾರವೇ ಶ್ರೇಷ್ಠ
ಗ್ರಹಣ ಕಾಲದಲ್ಲಿ ಉಪವಾಸ ಶ್ರೇಷ್ಠ. ಮಿತ ಆಹಾರ ಸೇವಿಸಿದರೆ ಉತ್ತಮ. ಇನ್ನೊಂದೆಡೆ ಜಪ, ತಪ, ಧ್ಯಾನಗಳ ಮೂಲಕ ಮನೋ ನಿಯಂತ್ರಣ ಸಾಧ್ಯವಿದೆ. ಅದನ್ನೂ ಗ್ರಹಣ ಕಾಲದಲ್ಲಿ ಮಾಡಬಹುದು. ವಿದ್ಯಾರ್ಥಿಗಳು, ಸಂಶೋಧಕರು, ಅಧ್ಯಯನಕಾರರು ಈ ಗ್ರಹಣ ಪರ್ವಕಾಲದಲ್ಲಿ ತಮ್ಮ ತಮ್ಮ ಕ್ರಿಯೆಗಳನ್ನು ಮಾಡಿದರೆ ಅತಿಶಯ ಫಲವಿದೆ.
ಪ್ರಾಣಾಯಾಮ ಕ್ರಿಯೆಯೂ ಅತ್ಯುತ್ತಮ. ಲೋಕ ಕಲ್ಯಾಣಕ್ಕಾಗಿ ಗ್ರಹಣ ಶಾಂತಿಯನ್ನೂ ಮಾಡಬಹುದು. ಸ್ತ್ರೀ ಪುರುಷರು ಅಂದರೆ ಪತಿ ಪತ್ನಿಯರು ಯಾವುದೇ ವಿನೋದ ಕ್ರಿಯೆಗಳನ್ನು ಮಾಡಲೇಬಾರದು. ಇದು ಉತ್ಪಾತ ಶಿಶುವಿನ ಜನನಕ್ಕೆ ಕಾರಣವಾಗುತ್ತದೆ. ಅಂದರೆ ಸೈಕಿಕ್ ಮಕ್ಕಳಾಗಬಹುದು ಎಂದರ್ಥ. ಅಲ್ಲದೆ ಗ್ರಹಣವೂ ಇಲ್ಲ, ಗ್ರಿಹಣವೂ ಇಲ್ಲ ಎಂದು ಗ್ರಹಣ ಕಾಲದಲ್ಲಿ ನಿಷೇಧಿಸಲ್ಪಟ್ಟದ್ದನ್ನು ಮಾಡಿದರೆ ಮುಂದೆ ಶಾಶ್ವತವಾಗಿ ಎಲ್ಲವನ್ನೂ ನಿಷೇಧ ಮಾಡಲೇಬೇಕಾದೀತು. ಕೆಲ ರೋಗಗಳಿಗೆ ಪಥ್ಯ ಮಾಡಬೇಕು ಎಂದು ವೈದ್ಯರು ಹೇಳಿದಂತೆ. ಹಾಗಾಗಿ ಗ್ರಹಣಗಳು ಅಸಮಾನ್ಯ ಖಗೋಳ ವೈಚಿತ್ರ್ಯ. ಇದು ಇಡೀ ಜಗತ್ತಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಇದನ್ನೂ ಓದಿ: ಗುಜರಾತ್ ಭವಿಷ್ಯ 20 ಗಂಟೆ ಮೊದಲೇ ಬರೆದಿದ್ದ ಉಡುಪಿ ಜ್ಯೋತಿಷಿ
ಗ್ರಹಣದ ಫಲ
ಧನಾಗ್ರಹ, ಧರ್ಮದ ಆಧಾರದಲ್ಲಿ ಭಯೋತ್ಪಾದನೆ ಮಾಡುವ ಆಗ್ರಹಿಗಳಿಗೆ, ಜಿಹಾದಿ ಎಂದು ಹಾರಾಡುವ ಆಗ್ರಹಿಗಳಿಗೆ ಇದು ನಿಶ್ಚಿತವಾಗಿ ತೊಂದರೆ ನೀಡುವ ಗ್ರಹಣವಾಗಿದೆ. ಈ ಗ್ರಹಣ ಒಂದೇ ಸಾಲದು ಎಂದು ಇನ್ನೊಂದು ಇಂತಹದ್ದೇ ಗ್ರಹಣ ಈ ವರ್ಷದ ಜುಲೈ 28 ರಂದು ಸಂಭವಿಸಲಿದೆ. ಒಂದೇ ವರ್ಷ ಒಂದಕ್ಕಿಂತ ಹೆಚ್ಚು ಗ್ರಹಣ ಸಂಭವಿಸಿದರೆ ಜಗತ್ತಿನಲ್ಲಿ ನಮ್ಮದೇ ಧರ್ಮ ಶ್ರೇಷ್ಠ ಎನ್ನುವ ಮತಾಂಧರಿಗೆ ಮಾರಣ ಹೋಮವನ್ನೇ ಮಾಡಿಸುತ್ತದೆ. ಅವರ ಮೇಲೆ ಈ ಗ್ರಹಣದ ಪ್ರಭಾವವೂ ಬೀರಿದರೆ ಆತ್ಮಾಹುತಿ ದಳ (ಸುಸೈಡ್ ಬಾಂಬರ್) ಗಳಾಗಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸಾಯಬಹುದು.
ದೇವಸ್ಥಾನಗಳ ಸಂಪರ್ಕ ಇರುವವರು ಯಾರು ವೇದೋಕ್ತ ಜೀವನ ನಡೆಸುವುದಿಲ್ಲವೋ ಅವರಿಗೆ ಅಪಾಯವಿದೆ. ಗೋ ಭಕ್ಷಕರಿಗೆ, ಕಾಲ ವಿವೇಚನೆ ಇಲ್ಲದ ಕುಡುಕರಿಗೆ, ಅಕಾಲ ಭೋಜನ ಮಾಡುವವರಿಗೆ, ಕಂಡ ಕಂಡಲ್ಲಿ ತಿನ್ನುವ ಚಾಳಿ ಇರುವವರಿಗೆ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.
ಸಾಮೂಹಿಕ ನಮಾಜ್ ಮಾಡಿದ್ರೆ ಉತ್ತಮ: ಇಂದಿನ ಚಂದ್ರಗ್ರಹಣ ಮುಸ್ಲೀಮರ ಮೇಲೂ ಪ್ರಭಾವ ಬೀರುತ್ತದೆ. ಮುಸಲ್ಮಾನರು ಚಂದ್ರನ ಚಲನೆಯನ್ನು ನಂಬುವವರು. ಚಂದ್ರನನ್ನೇ ಅವಲಂಭಿಸುವವರು. ಮುಸಲ್ಮಾನರು ಎಲ್ಲರಿಗಿಂತ ಹೆಚ್ಚು ಧರ್ಮಪ್ರಿಯರು. ಹೀಗಾಗಿ ಮುಸಲ್ಮಾನರೂ ಗ್ರಹಣ ಸಂದರ್ಭ ಕುರಾನ್ ಪಠಿಸಿ ನಮಾಜ್ ಮಾಡಿದರೆ ಒಳ್ಳೆದಾಗುತ್ತದೆ. ಬೆಳಕನ್ನು ಎಲ್ಲರೂ ಗ್ರಹಣ ಮಾಡುತ್ತೇವೆ. ಚಂದ್ರ- ಸೂರ್ಯನಿಗೆ ಜಾತಿ ಧರ್ಮ ಇಲ್ಲ. ಹೀಗಾಗಿ ಚಂದ್ರನನ್ನು ಅತಿಯಾಗಿ ಇಷ್ಟಪಡುವ ವ್ಯಕ್ತಿತ್ವ ಮುಸಲ್ಮಾನರಿಗೆ ಇರುತ್ತದೆ. ಹೀಗಾಗಿ ನಮಾಜ್ ಮಾಡಬೇಕು, ಉಪವಾಸ ಮಾಡಿದ್ರೆ ಉತ್ತಮ. ಚಂದ್ರ ಮನೋಕಾರಕ ಆಗಿದ್ದಾನೆ. ಹಾಗಾಗಿ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮಗಳು ಜಾಸ್ತಿ. ಹೀಗಾಗಿ ಮುಸಲ್ಮಾನರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
1836ರ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪುಸ್ತಕ ಓದಿದ್ದೇನೆ. ಅದು ಗ್ರಹಣದ ಬಗ್ಗೆ ಹೆಚ್ಚು ಗಮನ ಚೆಲ್ಲುತ್ತದೆ. ಭಾರತದಿಂದಲೇ ಕಳ್ಳತನವಾದ ಗ್ರಂಥ ಅದು. 155 ವರ್ಷಗಳ ನಂತರ 3 ಗಂಟೆಗಳ ಕಾಲ ಈ ಗ್ರಹಣ ನಡೆಯುತ್ತದೆ. ಮೂರು ಗಂಟೆ ಚಂದ್ರನ ಕಿರಣ ಭೂಮಿಗೆ ಬೀಳುವುದಿಲ್ಲ. ಒಂದು ಕ್ಷಣ ಬೆಳಕು ಇಲ್ಲವಾದ್ರೂ ಬಹಳ ಸಮಸ್ಯೆ ಆಗುತ್ತದೆ. ಹೀಗಾಗಿ ಇಂದು ನಡೆಯುವ ಮೂರು ಗಂಟೆಗಳ ಗ್ರಹಣಕ್ಕೆ ಹೆಚ್ಚಿನ ಮಹತ್ವವಿದೆ.
ಉಪವಾಸ ಮಾಡಿದಷ್ಟು ಉತ್ತಮ. ಗ್ರಹಣ ಕಾಲದಲ್ಲಿ ಭಾವನೆಗಳು ಉದ್ದೀಪನಗೊಳ್ಳುತ್ತದೆ. ಹೊಟ್ಟೆ ತುಂಬಿದರೆ ಹಲವು ವಿಚಾರಗಳು ಮನಸ್ಸಿಗೆ ಬರುತ್ತದೆ. ಆದ್ರೆ ಉಪವಾಸ ಮಾಡಿದ್ರೆ ಸಾತ್ವಿಕ ವಿಚಾರಗಳ ಚಿಂತನೆ ಬರುತ್ತದೆ. ದೇವರ ಧ್ಯಾನ- ತಪಸ್ಸು, ಭಜನೆ ಮಾಡಬೇಕು. ಹಿಂಸೆ-ಕ್ರೌರ್ಯ ಇರುವ ದೃಶ್ಯಗಳನ್ನು ನೋಡದೇ ಇರುವುದು ಒಳ್ಳೆಯದು.
ಗ್ರಹಣಕ್ಕೆ ಯಾರೂ ಹೆದರಬೇಕಾಗಿಲ್ಲ. ಗ್ರಹಣದ ಮುನ್ಸೂಚನೆಗಳನ್ನು ಪಾಲಿಸಿದರೆ ಯಾರಿಗೂ ಸಮಸ್ಯೆಯಿಲ್ಲ. ಚಂದ್ರನನ್ನು ನೋಡುವುದೂ ತಪ್ಪಲ್ಲ. ವಿಜ್ಞಾನಿಗಳಿಗೆ ಕುತೂಹಲ ಇರುವಾಗ ಜನರೂ ಈ ಬಗ್ಗೆ ಕುತೂಹಲ ಇಟ್ಟುಕೊಳ್ಳುವುದರಲ್ಲ ತಪ್ಪಿಲ್ಲ. ಆದ್ರೆ ಚಂದ್ರಗ್ರಹಣದ ಬಗ್ಗೆ ಯಾರಲ್ಲೂ ಭಯಬೇಡ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.