ʻಪಬ್ಲಿಕ್ ಟಿವಿʼ (PUBLiC TV) ಪ್ರಸ್ತುತಿಯ ವಿದ್ಯಾಪೀಠ 8ನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಮೊದಲ ದಿನವೇ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ (Vidhyapeeta Education Expo) ಬಂದು ಮುಂದಿನ ಭವಿಷ್ಯಕ್ಕಾಗಿ ತಮ್ಮ ನೆಚ್ಚಿನ ಕಾಲೇಜುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಲೇಜುಗಳ ಮಾಹಿತಿ ಜೊತೆ ಬಂಪರ್ ಗಿಫ್ಟ್‌ಗಳನ್ನೂ ಬಾಚಿಕೊಂಡರು.
ಹೌದು. ಜೀನಿ ಪ್ರಾಯೋಜಕತ್ವದಲ್ಲಿ ಪ್ರತಿ ಒಂದು ಗಂಟೆಗೆ ಒಂದು ಬೈಸಿಕಲ್ ಮತ್ತು ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯದ ಕಡೆಯಿಂದ ಎರಡು ದಿನಗಳಲ್ಲಿ 3 ಲ್ಯಾಪ್‌ಟಾಪ್ ಬಂಪರ್ ಗಿಫ್ಟ್ ಕೊಡಲಾಗ್ತಿದೆ. ಮೊದಲ ದಿನ 4 ವಿದ್ಯಾರ್ಥಿಗಳು ಬಂಪರ್ ಬೈಸಿಕಲ್ ಪಡೆದ್ರೆ, ಇಬ್ಬರು ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಬಹುಮಾನ ತಮ್ಮದಾಗಿಸಿಕೊಂಡರು. ಚಿಕ್ಕಬಳ್ಳಾಪುರದ ಪ್ರಣವ್ ಯಾದವ್, ವಿದ್ಯಾರ್ಥಿನಿ ಮಧು ಶ್ರೀ ಲ್ಯಾಪ್‌ಟಾಪ್ ಗೆದ್ದರೆ, ಹರ್ಷ, ಹೇಮಂತ್, ವರ್ಷಾ, ಮಿಥಿನ್ ಎಂಬ ವಿದ್ಯಾರ್ಥಿಗಳು ಬೈಸಿಕಲ್ ಪಡೆದ ಅದೃಷ್ಟವಂತರಾದ್ರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ: ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್
ಇದೇ ವೇಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ತಾಯಂದಿರು, ತಂದೆಯರಿಗೂ ಫನ್ ಗೇಮ್ ಆಡಿಸಲಾಯ್ತು. ಫನ್ ಗೇಮ್ ನಲ್ಲಿ ಪೋಷಕರು, ವಿದ್ಯಾರ್ಥಿಗಳು ಸಂತೋಷದಿಂದ ಭಾಗವಹಿಸಿ ವಿಶೇಷ ಬಹುಮಾನವನ್ನು ಗೆದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ
ಇನ್ನೂ `ಪಬ್ಲಿಕ್ ಟಿವಿ’ ಹೆಮ್ಮೆಯ ಪ್ರಸ್ತುತಿ ವಿದ್ಯಾಪೀಠ 8ನೇ ಆವೃತಿ ಭರ್ಜರಿಯಾಗಿ ಪ್ರಾರಂಭವಾಗಿದೆ. ಮೊದಲ ದಿನವೇ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು 4.5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿ ಜ್ಞಾನಾರ್ಜನೆ ಪಡೆದುಕೊಂಡರು. 120ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಬಂದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ದಾರಿ ದೀಪವಾದವು. ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಎಕ್ಸ್‌ಪೋಗೆ ಆಗಮಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: AIಯೇ ಅಂತಿಮ ಅಲ್ಲ: ಹೆಚ್.ಆರ್.ರಂಗನಾಥ್