ಲಕ್ನೋ: ಬೌಲರ್‌ಗಳ ಆಟದಲ್ಲಿ ಭಾರತ (Team India) ಇನ್ನು ಒಂದು ಎಸೆತ ಇರುವಂತೆಯೇ ನ್ಯೂಜಿಲೆಂಡ್ (New Zealand) ವಿರುದ್ಧ ತಿಣುಕಾಡಿ ರೋಚಕ 6 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು. ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಭಾರತ 19.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಮೂಲಕ ಮೂರು T20 ಪಂದ್ಯಗಳ ಸರಣಿ 1-1ರಲ್ಲಿ ಸಮವಾಗಿದೆ.
Advertisement
Advertisement
ಕೊನೆಯ 18 ಎಸೆತಗಳಲ್ಲಿ ಗೆಲುವಿಗೆ 18 ರನ್ ಬೇಕಿತ್ತು. 18ನೇ ಓವರ್‌ನಲ್ಲಿ 5 ರನ್ ಬಂದರೆ 19ನೇ ಓವರ್‌ನಲ್ಲಿ 7 ರನ್ ಬಂತು. ಕೊನೆಯ ಓವರ್‌ನಲ್ಲಿ 6 ರನ್ ಬೇಕಿತ್ತು.
Advertisement
ಕೊನೆಯ ಓವರ್ ಹೇಗಿತ್ತು?
ಟಿಕ್ನರ್ ಎಸೆದ ಮೊದಲ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) 1 ರನ್ ತೆಗೆದರೆ ಎರಡನೇ ಎಸೆತದಲ್ಲಿ ಯಾವುದೇ ರನ್ ಬಂದಿರಲಿಲ್ಲ. ಮೂರನೇ ಎಸೆತದಲ್ಲಿ ಸೂರ್ಯಕುಮಾರ್ (Suryakumar Yadav) ಕ್ಯಾಚ್ ಔಟ್ ಆಗುವ ಸಾಧ್ಯತೆ ಇತ್ತು. ಆದರೆ ವೇಗವಾಗಿ ಬಂದಿದ್ದ ಚೆಂಡನ್ನು ಹಿಡಿಯಲು ಟಿಕ್ನರ್ ವಿಫಲರಾದರು.
Advertisement
4ನೇ ಎಸೆತದಲ್ಲಿ ಪಾಂಡ್ಯ ಒಂದು ರನ್ ಓಡಿದರು. ಈ ವೇಳೆ ಪಾಂಡ್ಯ ರನೌಟ್ ಆಗುವ ಸಾಧ್ಯತೆ ಇತ್ತು. ನೇರವಾಗಿ ವಿಕೆಟ್‌ಗೆ ಚೆಂಡು ಬಡಿಯುತ್ತಿದ್ದರೆ ಪಾಂಡ್ಯ ಪೆವಿಲಿಯನ್ ಸೇರಬೇಕಿತ್ತು. 5ನೇ ಎಸೆತದಲ್ಲಿ ಸೂರ್ಯಕುಮಾರ್ ಮಿಡ್ ಆಫ್ ಕಡೆ ಬೌಂಡರಿ ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.
ಸೂರ್ಯಕುಮಾರ್ ಯಾದವ್ ಔಟಾಗದೇ 26 ರನ್(31 ಎಸೆತ, 1 ಬೌಂಡರಿ) ಇಶನ್ ಕಿಶನ್ 19 ರನ್(32 ಎಸೆತ, 2 ಬೌಂಡರಿ) ಹಾರ್ದಿಕ್ ಪಾಂಡ್ಯ ಔಟಾಗದೇ 15 ರನ್ (20 ಎಸೆತ, 1 ಬೌಂಡರಿ) ಹೊಡೆದರು. ಈ ಪಂದ್ಯದಲ್ಲಿ ಭಾರತದ ಪರ ಒಂದು ಸಿಕ್ಸ್ ಸಿಡಿಯದೇ ಇರುವುದು ವಿಶೇಷ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ನಾಯಕ ಮಿಚೆಲ್ ಸ್ಯಾಂಟ್ನರ್ ಔಟಾಗದೇ 19 ರನ್ ಹೊಡೆದದ್ದೇ ಗರಿಷ್ಟ ಸ್ಕೋರ್.
ಅರ್ಶ್‌ದೀಪ್ ಸಿಂಗ್ 2 ವಿಕೆಟ್ ಪಡೆದರೆ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ದೀಪಕ್ ಹೂಡಾ, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k