ಕೋಲ್ಕತ್ತಾ: ಈಡನ್ ಗಾರ್ಡನ್ ಮೈದಾನದಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ವಿರುದ್ಧ 4 ರನ್‌ಗಳ ಗೆಲುವು ಸಾಧಿಸಿದ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ.
NICHOLAS POORAM AT THE EDEN. 🔥pic.twitter.com/BY8OquXP60
— Mufaddal Vohra (@mufaddal_vohra) April 8, 2025
ಐಪಿಎಲ್ (IPL 2025) ಇತಿಹಾಸದಲ್ಲಿ ಈಡನ್ ಗಾರ್ಡನ್ ಮೈದಾನದಲ್ಲಿ ಅತಿಹೆಚ್ಚು ರನ್ ಗಳಿಸಿದ 3ನೇ ತಂಡ ಎಂಬ ವಿಶೇಷ ಸಾಧನೆಗೆ ಪಾತ್ರವಾಗಿದೆ. 2024ರ ಆವೃತ್ತಿಯಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 262 ರನ್ ಗಳಿಸಿದ ಪಂಬಾಜ್ ಕಿಂಗ್ಸ್ (PBKS) ತಂಡ ಮೊದಲ ಅಗ್ರ ಸ್ಥಾನದಲ್ಲಿದೆ.
ಈಡನ್ ಗಾರ್ಡನ್‌ನಲ್ಲಿ ಅತಿಹೆಚ್ಚು ರನ್ ಸಿಸಿಡಿದ ಟಾಪ್-5 ತಂಡಗಳು
ಪಂಜಾಬ್ ಕಿಂಗ್ಸ್ 262ಕ್ಕೆ 2 – ಕೆಕೆಆರ್ ವಿರುದ್ಧ – 2024
ಕೆಕೆಆರ್ – 261ಕ್ಕೆ 6 – ಪಂಬಾಬ್ ವಿರುದ್ಧ – 2024
ಎಲ್‌ಎಸ್‌ಜಿ – 238ಕ್ಕೆ 3 – ಕೆಕೆಆರ್ ವಿರುದ್ಧ – 2025
ಸಿಎಸ್‌ಕೆ – 235ಕ್ಕೆ 4 – ಕೆಕೆಆರ್ ವಿರುದ್ಧ – 2023
ಕೆಕೆಆರ್ – 234ಕ್ಕೆ 7 – ಲಕ್ನೂ ವಿರುದ್ಧ – 2025
ಸಿಕ್ಸರ್-ಬೌಂಡರಿ ಸುರಿಮಳೆ
ಸಿಕ್ಸರ್ ಬೌಂಡರಿಗಳ ಈ ಭರ್ಜರಿ ಆಟದಲ್ಲಿ ಉಭಯ ತಂಡಗಳಿಂದ ಒಟ್ಟು 25 ಸಿಕ್ಸರ್, 45 ಬೌಂಡರಿಗಳು ಸಿಡಿದವು. ಲಕ್ನೋ ಪರ 15 ಸಿಕ್ಸರ್, 18 ಬೌಂಡರಿ, ಕೆಕೆಆರ್ ಪರ 10 ಸಿಕ್ಸರ್, 27 ಬೌಂಡರಿ ದಾಖಲಾಯಿತು.
ಕೊನೇ ಓವರ್‌ನಲ್ಲಿ ಸೋತ ಕೆಕೆಆರ್
ಕೊನೆಯ ಓವರ್‌ನಲ್ಲಿ ಕೆಕೆಆರ್ ಗೆಲುವಿಗೆ 24 ರನ್‌ಗಳ ಅಗತ್ಯವಿತ್ತು. ರವಿ ಬಿಷ್ಣೋಯ್ ಬೌಲಿಂಗ್‌ನಲ್ಲಿದ್ದರೆ, ಹರ್ಷಿತ್ ರಾಣಾ ಸ್ಟ್ರೈಕ್‌ನಲ್ಲಿದ್ದರು. ಮೊದಲ ಎಸೆತವನ್ನೇ ರಾಣ ಬೌಂಡರಿ ಚಚ್ಚಿದರು, ಆದ್ರೆ 2ನೇ ಎಸೆತದಲ್ಲಿ ರನ್ ಕದಿಯುಲ್ಲಿ ವಿಫಲರಾದ ರಾಣಾ 3ನೇ ಎಸೆತದಲ್ಲಿ 1ರನ್ ಕದ್ದರು. ಮುಂದಿನ ಮೂರು ಎಸೆತಗಳಲ್ಲಿ ರಿಂಕು ಸಿಂಗ್ ಕ್ರಮವಾಗಿ 4, 4, 6 ಬಾರಿಸಿದರು. ಆದಾಗ್ಯೂ ಕೆಕೆಆರ್ 4 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 238 ರನ್ ಪೇರಿಸಿತು. 239 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ 4 ರನ್‌ಗಳಿಂದ ವಿರೋಚಿತ ಸೋಲು ಕಂಡಿತು.