ಲಕ್ನೋ: ಇಂಪ್ಯಾಕ್ಟ್ ಪ್ಲೇಯರ್ ಜೋಶ್ ಹ್ಯಾಜಲ್‌ವುಡ್ (Josh Hazlewood) ಆರ್‌ಸಿಬಿಗೆ (RCB) ಮರಳಿದ್ದರೂ ಲಕ್ನೋ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಪಂದ್ಯದಲ್ಲಿ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆರ್‌ಸಿಬಿಗೆ ಹ್ಯಾಜಲ್‌ವುಡ್ ಮರಳುವುದು ಬಹಳ ನಿರೀಕ್ಷೆಯ ವಿಷಯವಾಗಿತ್ತು. ಆದಾಗ್ಯೂ, ಟಾಸ್ ಸಮಯದಲ್ಲಿ ನಾಯಕ ಜಿತೇಶ್ ಶರ್ಮಾ (Jitesh Sharma) ಆಸ್ಟ್ರೇಲಿಯಾದ ಆಟಗಾರ ಈ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ದೃಢಪಡಿಸಿದರು. ಆರ್‌ಸಿಬಿಯ ಮುಂದಿನ ಪಂದ್ಯದಲ್ಲಿ ಹ್ಯಾಜಲ್‌ವುಡ್ ಹನ್ನೊಂದರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ ಎಂದು ಕ್ಯಾಪ್ಟನ್ ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿಗೆ ರಿಷಭ್ ʻಪಂಚ್ʼ – ಗೆಲುವಿಗೆ 228 ರನ್‌ಗಳ ಕಠಿಣ ಗುರಿ ನೀಡಿದ ಲಕ್ನೋ
ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಾರಣ ಒಂದು ವಾರ ಐಪಿಎಲ್ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ, ಭುಜದ ಗಾಯದ ಸಮಸ್ಯೆಯಿಂದ ಹ್ಯಾಜಲ್‌ವುಡ್ ತವರಿಗೆ ಮರಳಿದ್ದರು. ಏ.27 ರಂದು ದೆಹಲಿಯಲ್ಲಿ ಕೊನೆಯ ಪಂದ್ಯವನ್ನು ಆಡಿದ್ದ ಹ್ಯಾಜಲ್‌ವುಡ್, ವಾಶ್‌ಔಟ್ ಸೇರಿದಂತೆ ಮೂರು ಆರ್‌ಸಿಬಿ ಪಂದ್ಯಗಳಿಂದ ಮಿಸ್ ಆಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಪ್ಲೇಆಫ್‌ಗೆ ಅರ್ಹತೆ ಪಡೆದಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಎರಡು ಸ್ಥಾನಗಳಿಗಾಗಿ ಪೈಪೋಟಿ ನಡೆಸಿದೆ. ಇದನ್ನೂ ಓದಿ: ಟಾಸ್ ಗೆದ್ದು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ – ದೈತ್ಯ ಬ್ಯಾಟರ್ ಕೈಬಿಟ್ಟು ತಪ್ಪು ಮಾಡಿತೆ?
ಲಕ್ನೋ (LSG) ವಿರುದ್ಧದ ಪಂದ್ಯವನ್ನು ಆರ್‌ಸಿಬಿ ಗೆದ್ದರೆ, ಮೇ 29 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 1 ಪಂದ್ಯವನ್ನು ಆಡಲಿದೆ. ಇಲ್ಲದಿದ್ದರೆ, ಎಲಿಮಿನೇಟರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಎರಡೂ ಪಂದ್ಯಗಳು ನ್ಯೂ ಚಂಡೀಗಢದಲ್ಲಿ ನಡೆಯಲಿವೆ.