ನವದೆಹಲಿ: ತೈಲ ಮಾರ್ಕೆಟಿಂಗ್ ಕಂಪನಿಗಳು 1 ಜೂನ್ ರಂದು 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಗಳನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ.
ಇಂದಿನಿಂದ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ಬೆಲೆ 135 ರೂ. ಇಳಿಕೆಯಾಗಿದೆ. 19 ಕೆಜಿಯ ಕಮರ್ಷಿಯಲ್ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 2,354 ರೂ.ಗೆ ಇತ್ತು, ಆದರೆ ಈಗ 2,219 ರೂ.ಗೆ ಇಳಿಕೆಯಾಗಿದೆ. ಇದನ್ನೂ ಓದಿ: ರಾಜ್ಯಕ್ಕೆ ಮುಂಗಾರು ಪ್ರವೇಶ – ಮುಂದಿನ 3, 4 ದಿನ ಭಾರೀ ಮಳೆ ಸಾಧ್ಯತೆ
Advertisement
Advertisement
ಕೋಲ್ಕತ್ತಾದಲ್ಲಿ 2,454 ರೂ. ಇದ್ದರೆ ಈಗ 2,322 ರೂ.ಗೆ ಇಳಿದಿದೆ. ಮುಂಬೈನಲ್ಲಿ 2,306 ರೂ., ಚೆನ್ನೈನಲ್ಲಿ 2,507 ರೂ. ಇತ್ತು. ಈಗ ಇಲ್ಲಿ ಅನುಕ್ರವಮವಾಗಿ 2,171.50 ರೂ., 2,373 ರೂ.ಗೆ ಇಳಿಕೆಯಾಗಿದೆ. ಇಂದಿನಿಂದಲೇ ಈ ಪರಿಷ್ಕೃತ ಬೆಲೆ ಜಾರಿಯಾಗಲಿದೆ ಎಂದು ತೈಲ ಮಾರ್ಕೆಟಿಂಗ್ ಕಂಪನಿಗಳು ತಿಳಿಸಿದೆ.
Advertisement
Advertisement
ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ಮೇ 19 ರಂದು ಭಾರತದಲ್ಲಿ ಗೃಹೋಪಯೋಗಿ ಮತ್ತು ಕಮರ್ಷಿಯಲ್ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು ಹೆಚ್ಚಿಸಲಾಗಿತು. ಒಂದೇ ತಿಂಗಳಲ್ಲಿ ಎರಡು ಬಾರಿ ಅಡುಗೆ ತೈಲದ ಬೆಲೆ ಹೆಚ್ಚಿಸಲಾಗಿತ್ತು. 14 ಕೆಜಿ ಗೃಹಬಳಕೆಯ ಸಿಲಿಂಡರ್‍ನ ದರವನ್ನು 3.50 ರೂ. ಹೆಚ್ಚಿಸಲಾಗಿತ್ತು ಮತ್ತು 19 ಕೆಜಿಯ ವಾಣಿಜ್ಯ ಬಳಕೆಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 8 ರೂ. ಹೆಚ್ಚಿಸಲಾಗಿತ್ತು. ಇದನ್ನೂ ಓದಿ: ಖಿನ್ನತೆಗೆ ಒಳಗಾಗಿ ಮಗು ಸಮೇತ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ