ಮೈಸೂರು: ಮಾನಸಿಕ ಖಿನ್ನತೆಗೆ ಒಳಗಾದ ತಾಯಿ ತನ್ನ 8 ತಿಂಗಳ ಮಗು ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡಿನ ದಾಸನೂರು ಗ್ರಾಮದಲ್ಲಿ ನಡೆದಿದೆ.
Advertisement
ಸಿಂಧು(24) ಹಾಗೂ 8 ತಿಂಗಳ ಮಗು ಮುದ್ದು ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಿಂಧು, ದಾಸನೂರಿನ ಮಹದೇವಸ್ವಾಮಿ ಅವರನ್ನು ವಿವಾಹವಾಗಿದ್ದಳು. ಈ ದಂಪತಿ ಮದುವೆಯಾಗಿ 9 ವರ್ಷ ಕಳೆದರೂ ಮಕ್ಕಳಗಿರಲಿಲ್ಲ. ಸಿಂಧುಗೆ ನಾಲ್ಕಾರು ಬಾರಿ ಗರ್ಭಪಾತವಾಗಿದ್ದು, ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳು. ಇದನ್ನೂ ಓದಿ: ರಾಜ್ಯಕ್ಕೆ ಮುಂಗಾರು ಪ್ರವೇಶ – ಮುಂದಿನ 3, 4 ದಿನ ಭಾರೀ ಮಳೆ ಸಾಧ್ಯತೆ
Advertisement
Advertisement
ಪರಿಣಾಮ ಮಂಗಳವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮಗು ಸಮೇತ ಬೆಂಕಿ ಹಚ್ಚಿಕೊಂಡಿದ್ದಾಳೆ. ಕೂಡಲೇ ತಾಯಿ, ಮಗುವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ, ಮಗು ಇಬ್ಬರೂ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.