ನವದೆಹಲಿ: ಕಾರ್ಮಿಕರ ದಿನದಂದು ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ (Commercial Cylinder) ಬೆಲೆ (Price) ಭಾರೀ ಇಳಿಕೆ ಕಂಡಿದ್ದು, 171. 50 ರೂ. ಕಡಿತಗೊಂಡಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದೆ.
ಈ ಹಿಂದೆ ಏಪ್ರಿಲ್‌ನಲ್ಲಿ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ನ ಬೆಲೆಗಳನ್ನು 92 ರೂ. ಇಳಿಕೆ ಮಾಡಿತ್ತು. ಇದೀಗ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿದ್ದು, ಪುನಃ ಇಳಿಕೆಯಾಗಿದೆ. ಆದರೆ ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ದರ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ತೂಕದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಇದನ್ನೂ ಓದಿ: ಮಧು ಬಂಗಾರಪ್ಪ ಗೆದ್ದರೆ, ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುತ್ತೇನೆ: ಶಿವಣ್ಣ
Advertisement
Advertisement
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 1856.50 ರೂ. ಆಗಿದೆ. ಈ ಹಿಂದೆ 2,028 ರೂ. ಇತ್ತು. ಅದೇ ರೀತಿ ಮುಂಬೈನಲ್ಲಿ (Mumbai) ಈ ಮೊದಲು 1,980 ರೂ. ಇದ್ದು, ಇದೀಗ ಇದರ ಬೆಲೆ 1,808.50 ರೂ. ಆಗಿದೆ. ಚೆನ್ನೈನಲ್ಲಿ (Chennai) ವಾಣಿಜ್ಯ ಸಿಲಿಂಡರ್‌ನ ಬೆಲೆ ಈ ಮೊದಲು 2,192.50 ರೂ. ಇದ್ದು, ಇದೀಗ 2,021.50 ರೂ. ಆಗಿದೆ. ಇದನ್ನೂ ಓದಿ: ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ