ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಸುತ್ತಲೇ ಇರುವ ತೈಲ ಕಂಪನಿಗಳು, ಈಗ ಎಲ್‍ಪಿಜಿ ಗ್ಯಾಸ್ ದರವನ್ನು ಪರಿಷ್ಕರಣೆ ಮಾಡುವ ಮೂಲಕ ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲಿನ ಮೊತ್ತವನ್ನು ಮತ್ತೊಮ್ಮೆ ಏರಿಕೆ ಮಾಡಿವೆ.
ಹೌದು, ಪ್ರತಿ ತಿಂಗಳು ದರ ಪರಿಷ್ಕರಣೆ ಮಾಡುವ ತೈಲ ಕಂಪನಿಗಳು ಇದೇ ಸೆಪ್ಟಂಬರ್ ತಿಂಗಳಿನಿಂದ ಎಲ್‍ಪಿಜಿ ಗ್ಯಾಸ್ ದರವನ್ನು ಪರಿಷ್ಕರಣೆ ಮಾಡಿದೆ. ಕಳೆದ ಐದು ತಿಂಗಳಿಂದಲೂ ಎಲ್‍ಪಿಜಿ ಗ್ಯಾಸ್ ದರವು ಏರುತ್ತಲೇ ಇದ್ದು, ಗೃಹ ಬಳಕೆಯ ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಮೇಲಿನ ದರವನ್ನು ಏರಿಕೆ ಮಾಡಿವೆ.
Advertisement
Advertisement
ಗೃಹಬಳಕೆಯ ಸಬ್ಸಿಡಿ ರಹಿತ ಸಿಲಿಂಡರ್‌ನ ದರವನ್ನು 24.50 ರೂಪಾಯಿ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ನ ದರವನ್ನು 47 ರೂಪಾಯಿಗೆ ಏರಿಕೆಮಾಡಿದೆ. ಈ ಹೆಚ್ಚಳದಿಂದಾಗಿ ಪ್ರತಿ ಸಬ್ಸಿಡಿ ರಹಿತ ಸಿಲಿಂಡರ್ 820.50 ರೂಪಾಯಿ ಆಗಿದ್ದರೆ, ವಾಣಿಜ್ಯ ಸಿಲೆಂಡರ್ ಬೆಲೆ 1,462 ರೂಪಾಯಿಗಳಾಗಿದೆ.
Advertisement
ಸಬ್ಸಿಡಿ ಸಹಿತ ಸಿಲಿಂಡರ್‌ನ ಬೆಲೆಯನ್ನು ಏರಿಕೆ ಮಾಡದೇ ಆಗಸ್ಟ್ ತಿಂಗಳಲ್ಲಿದ್ದ 486.50 ರೂಪಾಯಿ ದರವನ್ನೇ ಮುಂದುವರಿಸಿದೆ. ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆ ಮಾಡಿದ್ದ ತೈಲ ಕಂಪೆನಿಗಳು, ಎಲ್‍ಪಿಜಿ ಗ್ಯಾಸ್ ದರವನ್ನು ಸಹ ಏರಿಕೆಮಾಡುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿವೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv