ನವದೆಹಲಿ: ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ತೂಕ ಇಳಿಸಲು ಕೇಂದ್ರ ಸರ್ಕಾರ ಚಿಂತಿಸಿದೆ.
ಎಲ್‍ಪಿಜಿ ಸಿಲಿಂಡರ್ ಭಾರವಾಗಿರುವುದರಿಂದ ಅವುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಾಟ ಮಾಡುವುದು ಕಷ್ಟದ ಕೆಲಸ. ಮುಖ್ಯವಾಗಿ ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್‌ಗಳನ್ನು ಕೊಂಡೊಯ್ಯುವುದೇ ದೊಡ್ಡ ಸಮಸ್ಯೆ.
Advertisement
ಈ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ಶೀಘ್ರದಲ್ಲೇ ಅವುಗಳ ತೂಕವನ್ನು ಕಡಿಮೆ ಮಾಡುವ ಸುಳಿವನ್ನು ನೀಡಿದೆ.
Advertisement
Advertisement
ಎಲ್‍ಪಿಜಿ ಸಿಲಿಂಡರ್ ತೂಕ ಪ್ರಸ್ತುತ 14.2 ಕೆಜಿ ಇದ್ದು, ಅದರ ಸಾಗಣೆಯಲ್ಲಿ ಭಾರೀ ಸಮಸ್ಯೆಯಾಗುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಅದರ ತೂಕವನ್ನು ತಗ್ಗಿಸುವ ಬಗ್ಗೆ ಚಿಂತಿಸಿದೆ. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ
Advertisement
ಸಿಲಿಂಡರ್ ಭಾರೀ ತೂಕದಿಂದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಸಂಸದರಿಬ್ಬರು ಪ್ರಸ್ತಾಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ.
ಮಹಿಳೆಯರು ಸಿಲಿಂಡರ್ ಭಾರವನ್ನು ತಾವೇ ಹೊರುವುದು ನಮಗೂ ಇಷ್ಟವಿಲ್ಲ. ಹೀಗಾಗಿ ಅದರ ತೂಕವನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಇದನ್ನೂ ಓದಿ: ಆಂಧ್ರ ಪ್ರದೇಶ ಪ್ರವಾಹ – 1 ಕೋಟಿ ರೂ. ದೇಣಿಗೆ ಕೊಟ್ಟ ಪ್ರಭಾಸ್
14.2 ಕೆಜಿ ತೂಗುವ ಸಿಲಿಂಡರ್‌ಗಳನ್ನು 5 ಕೆಜಿ ಗೆ ಇಳಿಸುವುದಾಗಿ ಇಲ್ಲವೇ ಬೇರೆ ಮಾರ್ಗದ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.