ನವದೆಹಲಿ: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 102.50 ರೂಪಾಯಿ ಹೆಚ್ಚಳ ಮಾಡಿದ್ದು, 2,355.50ರೂ. ಏರಿಕೆ ಕಂಡಿದೆ. ಆದರೆ ಗೃಹ ಉಪಯೋಗಿ ಸಿಲಿಂಡರ್ ಮೇಲೆ ಯಾವುದೇ ದರ ಏರಿಕೆ ಆಗಿಲ್ಲ.
ಒಂದು ತಿಂಗಳ ಹಿಂದೆ ವಾಣಿಜ್ಯ ಹಾಗೂ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್ ಪರಿಷ್ಕರಿಸಿತ್ತು. ಏಪ್ರಿಲ್ 1ರಂದು ಎಲ್‍ಪಿಜಿ ಬೆಲೆಯು 250ರೂ. ಏರಿಕೆಯಾಗಿ 2,253ರೂ. ಹೆಚ್ಚಳವಾಗಿತ್ತು. ಎಲ್‍ಪಿಜಿ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನ ಪರಿಷ್ಕರಿಸುವ ಶಿಷ್ಟಾಚಾರವನ್ನು ಅನುಸರಿಸಲಾಗುತ್ತಿದೆ. ಸದ್ಯ 14.2 ಕೆ.ಜಿ ತೂಕದ ಸಿಲಿಂಡರ್ ದರವು ಬೆಂಗಳೂರಿನಲ್ಲಿ 952 ರೂ. ಇದೆ.
Advertisement
The price of a 19-kg commercial LPG cylinder has been hiked to Rs 2355.50 from Rs 2253; a 5kg LPG cylinder is priced at Rs 655 now.
— ANI (@ANI) May 1, 2022
ಗೃಹ ಬಳಕೆ ಸಿಲಿಂಡರ್ ದರವನ್ನು ಮಾರ್ಚ್ 22ರಂದು 50ರೂ. ಹೆಚ್ಚಿಸಲಾಗಿತ್ತು. ಇದೀಗ ಇಂದಿನಿಂದ ಕಮರ್ಷಿಯಲ್ ಸಿಲಿಂಡರ್ ಮೇಲೆ 102 ರೂಪಾಯಿ ಹೆಚ್ಚಳ ಮಾಡಲಾಗಿದೆ. 19 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್‌ಗೆ ಮೇ 1 ರಿಂದ 102 ರೂಪಾಯಿ ದರ ಏರಿಕೆ ಆಗಿದೆ. ಇದು ಇಂದಿನಿಂದಲೇ ಜಾರಿಯಾಗಿದ್ದು, ಸದ್ಯ ಕಮರ್ಷಿಯಲ್ ಸಿಲಿಂಡರ್ ಬೆಲೆ 2,355.50 ರೂಪಾಯಿ ಇದೆ. ಜೊತೆಗೆ ಗೃಹ ಉಪಯೋಗಿ ಸಿಲಿಂಡರ್ ಮೇಲೆ ಯಾವುದೇ ದರ ಏರಿಕೆ ಆಗಿಲ್ಲ. ಇದನ್ನೂ ಓದಿ: ಹಿಮಾಲಯ, ಹಿಂದೂ ಮಹಾಸಾಗರದ ನಡುವೆ ವಾಸಿಸುವವರೆಲ್ರೂ ಹಿಂದೂಗಳು: ಕೇಂದ್ರ ಸಚಿವ